ಮೌನ ತಪೋನುಷ್ಟಾನ ಮಂಗಲಕ್ಕೆ ಭಕ್ತರಿಗೆ ಆಹ್ವಾನ
ರಾಣೆಬೆನ್ನೂರು 28: ಇಲ್ಲಿಗೆ ಸಮೀಪದ ಗುಡ್ಡದ ಆನ್ವೇರಿ ಗ್ರಾಮದ ಜಂಗಮ ಕ್ಷೇತ್ರ ಶಿವಯೋಗಿಶ್ವರ ಸ್ವಾಮಿ ಮಠದಲ್ಲಿ, ವಾರ್ಷಿಕ ಸಂಪ್ರದಾಯದಂತೆ ಕಳೆದ ಮೇ 21, 2026 ರಂದು ಪ್ರಾರಂಭಗೊಂಡಿರುವ ಮೌನ, ಶಿವಯೋಗ ತಪೋನುಷ್ಟಾನವು, ಇದೇ ಮೇ 31, 2026 ರಂದು ರವಿವಾರ ಮುಂಜಾನೆ ಹನ್ನೊಂದು ಗಂಟೆಗೆ ಮಂಗಲಗೊಳ್ಳಲಿದೆ ಎಂದು ಶಿವಯೋಗೀಶ್ವರ ಸ್ವಾಮಿಗಳವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಅಂದಿನ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಗುತ್ತಲ ಕಲ್ಮಠದ ಶ್ರೀ ಗುರುಸಿದ್ಧ ಮಹಾಸ್ವಾಮಿಜಿ ರಾಣೆಬೆನ್ನೂರು ದೊಡ್ಡಪೇಟೆ ವಿರಕ್ತ ಮಠದ ಶ್ರೀ ಗುರುಬಸವ ಸ್ವಾಮೀಜಿ ವಹಿಸುವರು ರವಿವಾರ ಹಲವು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಗುರುಗಳ ಪಾದ ಪೂಜೆ, ಆಶೀರ್ವಚನ ಮಹಾಮಂಗಲ, ನಂತರ ಸಾರ್ವಜನಿಕವಾಗಿ ಮಹಾಪ್ರಸಾದ ವಿತರಣೆಯಾಗಲಿದೆ ಎಂದು ಶ್ರೀಗಳು ತಿಳಿಸಿದ್ದು ಭಕ್ತಾದಿಗಳು ಪಾಲ್ಗೊಂಡು ಶ್ರೀ ಸ್ವಾಮಿಯ ಕೃಪೆಗೆ ಪಾತ್ರರಾಗುವಂತೆ ಅವರು ಕೋರಿದ್ದಾರೆ.