ಯರಗಟ್ಟಿ

ಯರಗಟ್ಟಿ ವೀರಭದ್ರೇಶ್ವರ ಜಾತ್ರೆಯಲ್ಲಿ ಭಕ್ತರ ಸಂಭ್ರಮ

ಯರಗಟ್ಟಿ ವೀರಭದ್ರೇಶ್ವರ ಜಾತ್ರೆಯಲ್ಲಿ ಭಕ್ತರ ಸಂಭ್ರಮ


ಯರಗಟ್ಟಿ, ಆ. 28: ಶ್ರಾವಣ ಮಾಸದ ನೂಲ ಹುಣ್ಣಿಮೆ ಅಂಗವಾಗಿ ಪಟ್ಟಣದ ಪ್ರಮುಖ ಆರಾಧ್ಯ ದೇವರಾದ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವ ಸಂಭ್ರಮದಿಂದ ಜರುಗಿತು. ಜಾತ್ರೆಯಲ್ಲಿ ನೂರಾರು ಭಕ್ತರು ಪಾಲ್ಗೊಂಡು ದೇವರ ದರ್ಶನ ಪಡೆದು ಭಕ್ತಿ ಮೆರೆದರು.  

ಬೆಳಿಗ್ಗೆ ವೀರಭದ್ರೇಶ್ವರ ಕರ್ತೃಗದ್ದುಗೆಗೆ ರುದ್ರಾಭಿಷೇಕ, ಬಿಲ್ವಾರ್ಚನೆ, ಸಹಸ್ರನಾಮಾವಳಿ ಸೇರಿದಂತೆ ವಿವಿಧ ಪೂಜಾ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು. ಜಾತ್ರಾ ಸಂಭ್ರಮಕ್ಕೆ ಮತ್ತಷ್ಟು ಮೆರುಗು ನೀಡುವಂತೆ ಮಹಿಳೆಯರು ಕುಂಭಸೇವೆ ನಡೆಸಿ ಭಕ್ತಿಪರಾಕಾಷ್ಠೆ ಮೆರೆದರು.  

ಪಟ್ಟಣದ ಪ್ರಮುಖ ಬೀದಿಗಳಲ್ಲಿ ವೀರಭದ್ರೇಶ್ವರನ ಉತ್ಸವ ಮೂರ್ತಿಯ ಪಲ್ಲಕ್ಕಿ ಉತ್ಸವ ನಡೆಯಿತು. ವೀರಗಾಸೆ ಪುರವಂತರ ನೇತೃತ್ವದಲ್ಲಿ ನಡೆದ ಪಲ್ಲಕ್ಕಿ ಉತ್ಸವದ ಮೂಲಕ ವೀರಭದ್ರೇಶ್ವರನ ಉತ್ಸವ ಮೂರ್ತಿಯ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ದೇವಸ್ಥಾನಕ್ಕೆ ಆಗಮಿಸಿತು. ಈ ವೇಳೆ ಭಕ್ತರ ಜಯಘೋಷಗಳು ಮೊಳಗಿದವು.  

ವೀರಭದ್ರೇಶ್ವರ ತೊಟ್ಟಿಲು ಹಾಗೂ ಕನ್ಯಾ-ಮುತ್ತೈದೆಯರಿಂದ ವಿಶೇಷ ಪೂಜೆ ನೆರವೇರಿಸಲಾಯಿತು. ಜಾತ್ರೆಯ ಅಂಗವಾಗಿ ಪಟ್ಟಣದಾದ್ಯಂತ ಭಕ್ತಿಭಾವದ ವಾತಾವರಣ ನಿರ್ಮಾಣವಾಗಿತ್ತು.  ಪುರವಂತರಾದ ಪರ​‍್ಪ ಸಿಂಗಾರಗೊಪ್ಪ, ಆನಂದ ಸಿಂಗಾರಗೊಪ್ಪ, ಮಲ್ಲಿಕಾರ್ಜುನ ಬಸಿಡೋಣಿ, ಕಲ್ಲಪ್ಪ ಸಿಂಗಾರ, ಈರ​‍್ಪ ಯರಗಟ್ಟಿ, ಸಿದ್ದಯ್ಯ ಪೂಜೇರ, ಮಡಿವಾಳಪ್ಪ ಶಿಂಗಾರಗೊಪ್ಪ, ಈರಣ್ಣ ಕಟ್ಟೆ, ರುದ್ರ​‍್ಪ ಕಟ್ಟೆ ಸೇರಿದಂತೆ ಸ್ಥಳೀಯರು ಹಾಗೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. 


ಸುದ್ದಿ ಓದಿ