ದೇವಿಕಾ ಪದವಿಪೂರ್ವ ಮಹಾವಿದ್ಯಾಲಯದ ಉತ್ತಮ ಫಲಿತಾಂಶ ಜಿಲ್ಲೆಗೆ ದ್ವಿತೀಯ ಸ್ಥಾನ
ರಾಣೇಬೆನ್ನೂರು 09 : ಇಲ್ಲಿನ ಪ್ರತಿಷ್ಠಿತ ವೆಂಕಟೇಶ್ವರ ಶಿಕ್ಷಣ ಸಂಸ್ಥೆಯ ದೇವಿಕಾ ವಿಜ್ಞಾನ ಮತ್ತು ವಾಣ ಜ್ಯ ಮಹಾವಿದ್ಯಾಲಯದ ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶವು ಪ್ರಕಟವಾಗಿದ್ದು ಒಟ್ಟು ಶೇ. 98.00 ರಷ್ಟಾಗಿದೆ.
ಕಾಲೇಜಿನ ವಿಜ್ಞಾನ ಭಾಗದಲ್ಲಿ 194 ಹಾಗೂ ವಾಣ ಜ್ಯ ವಿಭಾಗದಲ್ಲಿ 45, ಒಟ್ಟು 239 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಅದರಲ್ಲಿ 84 ವಿದ್ಯಾರ್ಥಿಗಳು ವಿಜ್ಞಾನ ವಿಭಾಗದಲ್ಲಿ ಹಾಗೂ 18 ವಿದ್ಯಾರ್ಥಿಗಳು ವಾಣ ಜ್ಯ ವಿಭಾಗದಲ್ಲಿ ಅತ್ಯುನ್ನತ ಶ್ರೇಣ ಯಲ್ಲಿ (ಡಿಸ್ಟಿಂಕ್ಷನ್) ಉತ್ತೀರ್ಣರಾಗಿದ್ದಾರೆ. ವಿಜ್ಞಾನ ವಿಭಾಗದಲ್ಲಿ 92 ವಿದ್ಯಾರ್ಥಿಗಳು ಹಾಗೂ ವಾಣ ಜ್ಯ ವಿಭಾಗದಲ್ಲಿ 27 ವಿದ್ಯಾರ್ಥಿಗಳು ಪ್ರಥಮ ಶ್ರೇಣ ಯಲ್ಲಿ, ಮತ್ತು ವಿಜ್ಞಾನ ವಿಭಾಗದಲ್ಲಿ 10 ವಿದ್ಯಾರ್ಥಿಗಳು ದ್ವೀತಿಯ ಶ್ರೇಣ ಯಲ್ಲಿ ಉತ್ತೀರ್ಣರಾಗಿದ್ದು, ಒಟ್ಟು 231 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ.
ವಿಜ್ಞಾನ ವಿಭಾಗದಲ್ಲಿ ಪ್ರತಿಭಾನ್ವಿತರಾದ ವೆಂಕಟೇಶ ಅಕ್ಕೂರ 589 (ಶೇ.98.16) ಅಂಕಗಳನ್ನು ಪಡೆದು ಜಿಲ್ಲೆಗೆ ದ್ವಿತೀಯ ಸ್ಥಾನದಲ್ಲಿದ್ದಾನೆ. ನೇಹಾ ಹಳ್ಳಿಯವರ ಹಾಗೂ ನೈಲಾ ಖಾನ (ಶೇ.98) 588 ಅಂಕಗಳನ್ನು ಪಡೆದು ಕಾಲೇಜಿಗೆ ದ್ವಿತೀಯ ಸ್ಥಾನದಲ್ಲಿದ್ದಾರೆ. ವೈಷ್ಣವಿ ತೆಗ್ಗಿನ (ಶೇ. 97.66) 586 ಅಂಕಗಳನ್ನು ಪಡೆದು ಕಾಲೇಜಿಗೆ ತೃತೀಯ ಸ್ಥಾನದಲ್ಲಿದ್ದಾಳೆ.
ವಾಣ ಜ್ಯ ವಿಭಾಗದಲ್ಲಿ ಪ್ರತಿಭಾನ್ವಿತರಾದ ಹರ್ಷಿತಾ ಪಾಟೀಲ (ಶೇ.97.50) 585 ಅಂಕಗಳನ್ನು ಪಡೆದು ಕಾಲೇಜಿಗೆ ಪ್ರಥಮ ಸ್ಥಾನದಲ್ಲಿದ್ದಾಳೆ. ಸಿಂಚನಾ ಬತ್ತಲ (ಶೇ.97) 582 ಅಂಕಗಳನ್ನು ಪಡೆದು ಕಾಲೇಜಿಗೆ ದ್ವಿತೀಯ ಸ್ಥಾನದಲ್ಲಿದ್ದಾಳೆ. ಶ್ರೀನಿಧಿ ಗುರಮೇರ (ಶೇ.95.83) 575 ಅಂಕಗಳನ್ನು ಪಡೆದು ಕಾಲೇಜಿಗೆ ತೃತೀಯ ಸ್ಥಾನದಲ್ಲಿದ್ದಾಳೆ.
ಸಾಧನೆ ಮೆರೆದು ಕಾಲೇಜಿಗೆ ಕೀರ್ತಿ ತಂದ ಎಲ್ಲಾ ವಿದ್ಯಾರ್ಥಿಗಳಿಗೆ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಸಿ. ಆರ್. ಪಾಟೀಲ, ಗೌ.ಕಾರ್ಯದರ್ಶಿ ಶ್ರೀಮತಿ ವಿಜಯಾ ಪಾಟೀಲ, ಮ್ಯಾನೇಜಿಂಗ ಡೈರೆಕ್ಟರಾದ ಗಣೇಶ ಓದುಗೌಡರ, ಸಿ.ಇ.ಓ ದೇವಿಕಾರಾಣ ಪಾಟೀಲ, ಪ್ರಾರ್ಚಾಯರಾದ ದಯಾನಂದ ಹರಿಹರ, ಎಲ್ಲ ಪ್ರಾಧ್ಯಾಪಕ ವೃಂದ ಹಾಗೂ ಸಿಬ್ಬಂದಿಗಳು ಹಾರ್ಧಿಕವಾಗಿ ಶುಭ ಹಾರೈಸಿದ್ದಾರೆ.