ಗ್ರಾಮ, ಪಟ್ಟಣಗಳು ವಾಸ ಯೋಗ್ಯವಾಗಲು ಅಭಿಯಂತರರ ನೀಲ ನಕ್ಷೆ ಯೋಜನೆಗಳು ಅತ್ಯಗತ್ಯ - ಈರಣ್ಣ ದಡ್ಡಿ
ಪಟ್ಟಣದ ಸಿವಿಲ್ ಇಂಜೀನೀಯರ್ಸ್ ಅಸೋಸಿಯೇಷನ್ ವತಿಯಿಂದ 163ನೇ ' ಅಭಿಯಂತರರ ' ದಿನಾಚರಣೆ.
ಮಹಾಲಿಂಗಪುರ 16: ಗ್ರಾಮ, ಪಟ್ಟಣಗಳು ಸಾರ್ವಜನಿಕರಿಗೆ ವಾಸಯೋಗ್ಯ ಆಗಬೇಕಾದಲ್ಲಿ ಭೌಗೋಳಿಕ ಪ್ರದೇಶಗಳಿಗೆ ನುರಿತ ಅಭಿಯಂತರರು ಹಾಕಿದ ನೀಲ ನಕ್ಷೆಯ ಯೋಜನೆಗಳು ಅತ್ಯಗತ್ಯ ಎಂದು ಪುರಸಭೆ ಮುಖ್ಯಾಧಿಕಾರಿ ಈರಣ್ಣ ದಡ್ಡಿ ಹೇಳಿದರು.
ಪಟ್ಟಣದ ಸಿವಿಲ್ ಇಂಜೀನೀಯರ್ಸ್ ಅಸೋಸಿಯೇಷನ್ ಶುಕ್ರವಾರ ವೈದ್ಯರ ಸಭಾಭವನದಲ್ಲಿ ಹಮ್ಮಿಕೊಂಡ ಶ್ರೀ ಸರ್ ಎಂ.ವಿಶ್ವೇಶ್ವರಯ್ಯ ಜನ್ಮದಿನದ ಸ್ಮರಣೆಯಲ್ಲಿ, 163ನೇ ' ಅಭಿಯಂತರರ ' ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಿಶ್ವದಲ್ಲಿ ಅಭಿಯಂತರರು ಇಲ್ಲದೆ ಹೋಗಿದ್ದರೆ ಸೇತುವೆ, ದೊಡ್ಡ ದೊಡ್ಡ ಇಮಾರತಿಗಳು ಕಾಣ ಸಿಗುತ್ತಿರಲಿಲ್ಲ ಮತ್ತು ಬೇರೆ ಬೇರೆ ಗೃಹ, ಉಪ ಗೃಹ ಮತ್ತು ಬಾಹ್ಯಾಕಾಶ ಯಾನಗಳೂ ಸಾಧ್ಯವಾಗುತ್ತಿರಲಿಲ್ಲ ಎಂದು ಹೇಳಿದ ಅವರು ಅಭಿಯಂತರರಿಗೆ ಅಭಿಯಂತರರ ದಿನಾಚರಣೆಯ ಶುಭಾಶಯಗಳನ್ನು ತಿಳಿಸಿದರು.
ಮುಖ್ಯ ಅತಿಥಿ ಸ್ಥಾನ ಅಲಂಕರಿಸಿದ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲ ಎಸ್ ಆಯ್ ಕುಂದಗೋಳ ಮಾತನಾಡಿ, ಬಡತನವಿರಲಿ, ಸಿರಿತನವಿರಲಿ ವ್ಯಕ್ತಿ ಶ್ರೇಷ್ಠ ಸಾಧಕನಾಗಬೇಕಾದರೆ, ಶಿಸ್ತು, ಪ್ರಾಮಾಣಿಕತೆ, ವಿನಯತೆ, ಕೌಶಲ್ಯ, ಸಮಯಪ್ರಜ್ಞೆ, ಅಪಾರ ಜ್ಞಾನ ಮತ್ತು ಛಲ ಅವಶ್ಯಕವಾಗಿವೆ. ಇವೆಲ್ಲವುಗಳು ಭಾರತ ರತ್ನ ಸರ್ ಎಂ ವಿಶ್ವೇಶ್ವರಯ್ಯನವರಲ್ಲಿ ಅಡಕಗೊಂಡಿದ್ದರಿಂದಲೆ ವಿಶ್ವ ಶ್ರೇಷ್ಠ ಇಂಜಿನಿಯರ್ ಎನಿಸಿಕ್ಕೊಂಡರು.ಇಂಜಿನಿಯರ್ಸ್ ಗಳಿಂದಲೆ ಪಟ್ಟಣಗಳು ಕಂಗೊಳಿಸುತ್ತವೆ ಎಂದು ಅವರ ಕಾರ್ಯವನ್ನು ಶ್ಲಾಘಿಸಿ ಎಲ್ಲ ಅಭಿಯಂತರರಿಗೆ ಶುಭಾಶಯ ಕೋರಿದರು.
ಅಸೋಸಿಯೇಷನ್ ಉಪಾಧ್ಯಕ್ಷ ಅಸ್ಲಂ ಯಕ್ಸಂಬಿ, ಸ್ಥಳೀಯ ಪುರಸಭೆ ಕಿರಿಯ ಅಭಿಯಂತರ ಎಸ್ ಎಂ ಕಲ್ಬುರ್ಗಿ, ಕೆಎ??? ಪಾಲಿಟೆಕ್ನಿಕ್ ಸಿವಿಲ್ ವಿಭಾಗದ ಸುಭಾಸ ಮೂಸಿ ಮಾತನಾಡಿದರು, ಸ್ಥಳೀಯ ಅಸೋಸಿಯೇಷನ್ ಅಧ್ಯಕ್ಷ ಶಿವಾನಂದ ಕನ್ನಾಳ ಅಧ್ಯಕ್ಷತೆ ವಹಿಸಿದ್ದರು.ಈ ಸಂದರ್ಭದಲ್ಲಿ ವಿಶೇಷ ಆಮಂತ್ರಿತ ರಾಷ್ಟ್ರ ಅತ್ಯುತ್ತಮ ಶಿಕ್ಷಕಿ ಶ್ರೀಮತಿ ಸಪನಾ ಅನಿಗೋಳ ಅವರನ್ನು ಮತ್ತು ಇನ್ನೂ ಅನೇಕರನ್ನು ಸನ್ಮಾನಿಸಲಾಯಿತು.
ಮಹಾಲಿಂಗಪುರ, ರಬಕವಿ /ಬನಹಟ್ಟಿ, ತೇರದಾಳ, ವಲಯಗಳ ಅಭಿಯಂತರರು ಉಪಸ್ಥಿತರಿದ್ದರು. ಇಂಜಿನಿಯರ್ ಅಸೋಸಿಯೇಷನ್ ವಿವಿಧ ಗಣ್ಯರಾದ ಚಂದ್ರಶೇಖರ ಮಿರ್ಜಿ, ಹಣ್ಮಂತ ಬಳ್ಳೂರ, ಮಹಾದೇವ ನಾಯಕ, ಸಚಿನ್ ಮುಗಳಖೋಡ, ತುಶಾಂತ ಸಾಂಬ್ರೇಕರ, ಜಯಕುಮಾರ್, ಗೌಡಪ್ಪ ಪಾಟೀಲ್, ರೋಹಿತ್ ಅಂಬಿ, ವರ್ಧಮಾನ ಯಲಗುದ್ರಿ, ಪವನ್ ಪತ್ತಾರ, ವಿಜಯಕುಮಾರ ಕೊಪ್ಪದ, ಆಕಾಶ ಮಲ್ಲೆನ್ನವರ, ಮಹಾಂತೇಶ ಬಿರಾದಾರ ಇದ್ದರು. ಪ್ರಶಾಂತ ಅಂಗಡಿ ಸ್ವಾಗತಿಸಿ, ಉಪನ್ಯಾಸಕ ಭೀಮಶಿ ನೇಗಿನ್ಯಾಳ ನಿರೂಪಿಸಿ, ಜೆ ಜೆ ಜಕ್ಕನ್ನವರ ವಂದಿಸಿದರು.