ಎಲಬುರ್ಗ

ಕರಡಿ ದಾಳಿಗೆ ಕಲ್ಲಂಗಡಿ ಬೆಳೆ ನಾಶ

ಕರಡಿ ದಾಳಿಗೆ ಕಲ್ಲಂಗಡಿ ಬೆಳೆ ನಾಶ

ಯಲಬುರ್ಗಾ 13: ತಾಲೂಕಿನ ಹಿರೇವಡ್ರಕಲ್ ಗ್ರಾಮದ ಗುಡ್ಡದಲ್ಲಿ ಕರಡಿ ಹಾವಳಿ ಮೀತಿ ಮೀರಿದ್ದು,ರೈತರ ಜಮೀನಿಗೆ ನುಗ್ಗಿ ಬೆಳೆಗಳನ್ನು ನಾಶ ಪಡಿಸಲಾಗಿದೆ. ತಾಲೂಕು ಕಟ್ಟೆ ಕಡೆಯ ಗ್ರಾಮವಾದ ಹಿನ್ನೆಲೆಯಲ್ಲಿ ಗುಡ್ಡ ಗಾಡು ಪ್ರದೇಶದಲ್ಲಿ ಸುಮಾರು ನಾಲ್ಕೈದು ತಿಂಗಳಿಂದ ಕರಡಿ ಸೇರಿಕೊಂಡಿದ್ದು, ಈ ಭಾಗದಲ್ಲಿ ಕಟಗಿಹಳ್ಳಿ, ಗಾಣದಾಳ, ತಿಪ್ಪನಾಳ, ಚಿಕ್ಕ ವಡ್ರಕಲ್ ಸೇರಿದಂತೆ ಇನ್ನಿತರ ಗ್ರಾಮಗಳಲ್ಲಿ ರೈತರು ಬೆಳೆದ ಕಲ್ಲಂಗಡಿ ಬೆಳೆಗೆ ನುಗ್ಗಿ ಹಾಳು ಮಾಡಿದೆ. ಪ್ರಸಕ್ತ ವರ್ಷದಲ್ಲಿ ರೈತರು ಬೀಜೋತ್ಪಾದನೆ ಬೆಳೆಗೆ ಆಸಕ್ತಿ ವಹಿಸಿದ್ದು, ಇದೀಗ ರೈತರ ಪಾಲಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ತ್ವರಿತವಾಗಿ ಹಾನಿಗೊಳಾಗದ ಅನ್ನದಾತರಿಗೆ ಅರಣ್ಯ ಇಲಾಖೆಯಿಂದ ಪರಿಹಾರ ಕಲ್ಪಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ. 


ಸುದ್ದಿ ಓದಿ