ದೇಸಾಯಿ ದಶಮಿ ಆಚರಣೆ

ದೇಸಾಯಿ ದಶಮಿ ಆಚರಣೆ
ಲೋಕದರ್ಶನ ವರದಿ ಗುತ್ತಲ: ಸಮೀಪದ ನೆಗಳೂರ ಗ್ರಾಮದ ಸಂಸ್ಥಾನ ಹಿರೇಮಠದಲ್ಲಿ ಗುರುವಾರ ದೇಸಾಯಿ ದಶಮಿ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಶ್ರೀಮಠದ ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ ನಮ್ಮ ಶ್ರೀಮಠಕ್ಕೆ ಸುಮಾರು 8 50 ವರ್ಷಗಳ ಹಿಂದೆ ಹಾವನೂರ ಪ್ರಾಂತ್ಯದ ಸಾಮಂತ ಅರಸರಾದ ಹನುಮಂತಗೌಡ ದೇಸಾಯಿಯವರು ಭಾದ್ರಪಾದ ಮಾಸದ ದಶಮಿ ಯಂದು ಮಠದ ಮೂಲ ಕರ್ತೃ ಗುರುಶಾಂತ ಶಿವಯೋಗಿಗಳಿಗೆ ಭೂಮಿಯನ್ನು ದಾನ ಮಾಡಿರುತ್ತಾರೆ. ಅದರ ಸವಿ ನೆನಪಿಗಾಗಿ ಪ್ರತಿ ವರ್ಷ ಭಾದ್ರಪದ ಮಾಸದ ದಶಮಿ ದಿನದಂದು ದೇಸಾಯಿ ದಶಮಿ ಎಂಬ ಹೆಸರಿನಲ್ಲಿ ಆಚರಣೆಮಾಡಿಕೊಂಡುವ ಬರುವ ಸಂಪ್ರದಾಯವಾಗಿದೆ. ಎಂದರು. ಹನುಮತಗೌಡ ದೇಸಾಯಿಯವರ ಭಾವಚಿತ್ರಕ್ಕೆ ಪೂಜೆ ಮಂಗಳಾರುತಿ ಜರುಗಿದವು. ನಂತರ ಗಣಾರಧನೆ ಜರುಗಿತು. ಈ ಸಂದರ್ಭದಲ್ಲಿ ಶಿವಾನಂದ ಹಡಪದ ರುದ್ರ​‍್ಪ ವಿಭೂತಿ ಮಹೇಶ ಹಾವೇರಿಮಠ ಅಮರ ಗಂಗನಗೌಡ್ರ ಗದಿಗಯ್ಯಸ್ವಾಮಿ ಹಿರೇಮಠ, ಶ್ರೀಮಠದ ವೇದಪಾಠಶಾಲೆಯ ವಿದ್ಯಾರ್ಥಿಗಳು ಎಸ್‌.ಜಿ.ಎಸ್ ನವೋದಯ ಪರೀಕ್ಷಾ ತರಬೇತಿ ಕೇಂದ್ರದ ವಿದ್ಯಾರ್ಥಿಗಳು ಶಿಕ್ಷಕಿಯರು ಪಾಲ್ಗೊಂಡಿದ್ದರು. ಕೋವಿಡ್ 19 ಹಿನ್ನಲೆಯಲ್ಲಿ ಸರಳ ಸಂಪ್ರದಾಯಿಕ ಆಚರಣೆಗೆ ಸಿಮೀತಗೊಳಿಸಲಾಗಿತ್ತು.

ಸುದ್ದಿ ಓದಿ