ಪ್ರಜಾಪ್ರಭುತ್ವ ನಮ್ಮ ಪ್ರಜ್ಞೆಯಲ್ಲಿದೆ; ಓಂ ಬಿರ್ಲಾ
ನವದೆಹಲಿ, ಸೆ 15 ಪ್ರಜಾಪ್ರಭುತ್ವವು ಕೇವಲ ಕಲ್ಪನೆಯಲ್ಲ. ಬದಲಾಗಿ ಭಾರತೀಯ ಪ್ರಜ್ಞೆಯಲ್ಲಿ ಹುದುಗಿರುವ ಭಾವನೆ ಎಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಹೇಳಿದ್ದಾರೆ.
ಬುಧವಾರ ಅಂತರಾಷ್ಟ್ರೀಯ ಪ್ರಜಾಪ್ರಭುತ್ವದ ದಿನದಂದು ಜನರಿಗೆ ಟ್ವೀಟ್ ಮೂಲಕ ಶುಭ ಹಾರೈಸಿದ ಅವರು, "ಪ್ರಜಾಪ್ರಭುತ್ವ ಎಂಬುದು ನಮಗೆ ಕೇವಲ ಕಲ್ಪನೆಯಲ್ಲ, ಅದು ನಮ್ಮ ಪ್ರಜ್ಞೆಯಲ್ಲಿ ಹುದುಗಿರುವ ಭಾವನೆ. ಭಾರತ ವಿಶ್ವದಲ್ಲಿಯೇ ಅತ್ಯಂತ ಕಾರ್ಯನಿರ್ವಹಿಸುತ್ತಿರುವ ಪ್ರಜಾಪ್ರಭುತ್ವವಾಗಿದೆ” ಎಂದಿದ್ದಾರೆ.
ಬುಧವಾರ 81 ನೇ ಅಖಿಲ ಭಾರತ ಅಧ್ಯಕ್ಷರ ಸಮ್ಮೇಳನದ (ಎಐಪಿಒಸಿ) ಅಧ್ಯಕ್ಷತೆಯನ್ನು ಬಿರ್ಲಾ ವಹಿಸಲಿದ್ದಾರೆ. ಸಮ್ಮೇಳನದಲ್ಲಿ ‘ಪರಿಣಾಮಕಾರಿ ಮತ್ತು ಅರ್ಥಪೂರ್ಣ ಪ್ರಜಾಪ್ರಭುತ್ವವನ್ನು ಬೆಳೆಸುವಲ್ಲಿ ಶಾಸಕಾಂಗದ ಪಾತ್ರ’ ಕುರಿತು ಚರ್ಚಿಸಲಾಗುವುದು.
2007 ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಪ್ರಜಾಪ್ರಭುತ್ವದ ತತ್ವಗಳನ್ನು ಉತ್ತೇಜಿಸುವ ಮತ್ತು ಎತ್ತಿಹಿಡಿಯುವ ಉದ್ದೇಶದಿಂದ ಸೆಪ್ಟೆಂಬರ್ 15 ಅನ್ನು ಅಂತರರಾಷ್ಟ್ರೀಯ ಪ್ರಜಾಪ್ರಭುತ್ವದ ದಿನವಾಗಿ ಆಚರಿಸಲು ತೀರ್ಮಾನಿಸಿತು.