ಪತ್ರಕರ್ತರಿಗೆ ರಕ್ಷಣೆ ನೀಡಬೇಕೆಂದು ಮನವಿ
ರಾಮದುರ್ಗ 15: ಜಿಲ್ಲೆಯ ಮೂಡಲಗಿಯಲ್ಲಿ ಪತ್ರಕರ್ತರ ಮೇಲೆ ಹಲ್ಲೆ ಮಾಡಿದ ಸಿಪಿಐ ವೆಂಕಟೇಶ ಮುರನ್ನಾಳರ ಮೇಲೆ ಕಾನೂನ ಕ್ರಮ ಜರುಗಿಸಿ ಪತ್ರಕರ್ತರಿಗೆ ರಕ್ಷಣೆ ನೀಡಬೇಕೆಂದು ರಾಮದುರ್ಗ ಪ್ರೆಸ್ ಕ್ಲಬ್ ಸದಸ್ಯರು ತಹಶೀಲ್ದಾರ ಮುಖಾಂತರ ಮುಖ್ಯಂತ್ರಿಗಳಿಗೆ ಮನವಿ ಸಲ್ಲಿಸಿದರು.
ಪತ್ರಕರ್ತರು ಕೊವಿಡ್ 19 ನಿಯಂತ್ರಣದ ಪ್ರಂಟಲೈನ್ ವಾರಿಯರ್ಸ ಎಂದು ಮುಖ್ಯಮಂತ್ರಿಗಳು ಘೋಷನೆ ಮಾಡಿದ್ದರು, ಪತ್ರಕರ್ತರ ಮೇಲೆ ಹಲ್ಲೆ ಮಾಡಿ ಪತ್ರಿಕಾ ಸ್ವಾತ್ರಂತಕ್ಕೆ ಅಡ್ಡಿ ಉಂಟು ಮಾಡಿರುವುದು ಖೇದದ ಸಂಗತಿಯಾಗಿದೆ. ಸಿಪಿಐ ವೆಂಕಟೇಶ ಮುರನ್ನಾಳರ ಮೇಲೆ ಕಾನೂನು ಕ್ರಮ ಜರುಗಿಸಿ ಮುಂದೆ ಇಂತಹ ಘಟನೆ ಸಂಭವಿಸದಂತೆ ನೋಡಿಕೋಳ್ಳಬೇಕು ಇಲ್ಲವಾದರೆ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಸರಕಾರಕ್ಕೆ ಎಚ್ಚರಿಕೆ ನೀಡಿದರು. ಪ್ರೆಸ್ ಕ್ಸಬ್ ಅಧ್ಯಕ್ಷ ಈರಣ್ಣಾ ಬುಡ್ಡಾಗೋಳ, ಕಾರ್ಯದಶರ್ಿ ಐ ಆರ್ ಪಾಟೀಲ ಸದಸ್ಯರಾದ ಎಮ್ ಬಿ ಗೊಂದಿ, ಚೆನ್ನಪ್ಪ ಮಾದರ, ಗೊವೀಂದ ಮೊಡಕ್ ಹಾಗೂ ಮುತ್ತು ಕುಂಬಾರ ಉಪಸ್ಥಿತರಿದ್ದರು.