ಎಲಬುರ್ಗ

ಮೂಲಭೂತ ಸೌಕರ್ಯ ವಂಚಿತ ಕಲಕಬಂಡಿ ಗ್ರಾಮ

ಮೂಲಭೂತ ಸೌಕರ್ಯ ವಂಚಿತ ಕಲಕಬಂಡಿ ಗ್ರಾಮ

ಸರಿಯಾದ ಸಮಯಕ್ಕೆ ಸರ್ಕಾರಿ ಬಸ್ ಸಂಚಾರ ವಿಲ್ಲದೆ ವಿದ್ಯಾರ್ಥಿಗಳು ಪರದಾಟ

ಯಲಬುರ್ಗಾ 23: ಮೂಲಭೂತ ಸೌಕರ್ಯ ವಂಚಿತ ಕಲಕಬಂಡಿ ಗ್ರಾಮಕ್ಕೆ ಸರಿಯಾದ ಸಮಯಕ್ಕೆ ಸರ್ಕಾರಿ ಬಸ್ ಸಂಚಾರವಿಲ್ಲದೆ ವಿದ್ಯಾರ್ಥಿಗಳು ಪರದಾÀÀಡುವ ಮೂಲಕ ನಡೆದುಕೊಂಡೆ ದಿನ ನಿತ್ಯ ಶಾಲೆಗೆ ಹೋಗುವಂತಾ ಸ್ಥಿತಿ ನಿರ್ಮಾಣವಾಗಿದೆ.

ತಾಲೂಕಿನ ಕಲಕಬಂಡಿ ಗ್ರಾಮ ಹತ್ತು ಹಲವಾರು ಮೂಲಭೂತ ಸೌಕರ್ಯ ಎದುರಿಸುತ್ತಿರುವ ಚಿಕ್ಕ ಗ್ರಾಮ. ಈ ಗ್ರಾಮದಿಂದ ಸುಮಾರು 30ಕ್ಕೂ ಹೆಚ್ಚು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಹತ್ತಿರದ ಯಲಬುರ್ಗಾ, ಕುಷ್ಟಗಿ, ಹಿರೇಅರಳಿಹಳಿಗೆ ತಮ್ಮ ಅಭ್ಯಾಸಕ್ಕಾಗಿ ದಿನನಿತ್ಯ ಹೋಗಬೇಕಾದಂತ ಸ್ಥಿತಿ ಇದೆ. ಆದರೆ ಈ ವಿದ್ಯಾರ್ಥಿಗಳಿಗೆ ಸರಿಯಾದ ಸಮಯಕ್ಕೆ ಶಾಲಾ ಕಾಲೇಜುಗಳಿಗೆ ಹೋಗಬೇಕಾದರೆ ಬಸ್ಸಿನ ಸೌಕರ್ಯದ ಕೊರತೆಯನ್ನು ಎದುರಿಸುತ್ತಿದ್ದಾರೆ.

ಹತ್ತಿರದ ಹಿರೇಅರಳಿಹಳ್ಳಿ ಗ್ರಾಮಕ್ಕೆ ಈ ಗ್ರಾಮದಿಂದ ಸಾಕಷ್ಟು ಜನ ವಿದ್ಯಾರ್ಥಿಗಳು ಸೇರಿ ಚಿಕ್ಕ ಮಕ್ಕಳು ಅಭ್ಯಾಸಕ್ಕೆ ಹೋಗಬೇಕು. ಆದರೆ ಕಲಕಬಂಡಿ ಗ್ರಾಮದಿಂದ ಬೆಳಿಗ್ಗೆ ಮತ್ತು ಸಂಜೆ ಸರಿಯಾದ ಸಮಯಕ್ಕೆ ಸಾರಿಗೆ ಸೌಕರ್ಯ ವಿಲ್ಲದೆ ಇರುವದರಿಂದ ಈ ಗ್ರಾಮದ ವಿದ್ಯಾರ್ಥಿಗಳು ಸುಮಾರು ಕಿಮೀ ಅಂತರದವರೆಗೂ ನಡೆದುಕೊಂಡೇ ಹಿರೇಅರಳಿಹಳ್ಳಿ ಗ್ರಾಮಕ್ಕೆ ಹೋಗಬೇಕು. ಆ ವಿದ್ಯಾರ್ಥಿಗಳ ಪೈಕಿ ಹೆಚ್ಚು ವಿದ್ಯಾರ್ಥಿನಿಯರೇ ಜಾಸ್ತಿ ಇರುವುದರಿಂದ ಕಲಕಬಂಡಿಯಿಂದ ಹಿರೇಅರಳಿಹಳ್ಳಿ ಗ್ರಾಮಕ್ಕೆ ನಡೆದುಕೊಂಡು ಹೋಗುವಂತಾ ಸ್ಥಿತಿ ನಿರ್ಮಾಣವಾಗಿದೆ. 

ಕೂಡಲೇ ನಮಗೆ ಸರಿಯಾದ ಸಮಯಕ್ಕೆ ಗ್ರಾಮದಿಂದ ಬಸ್ಸಿನ ಸೌಕರ್ಯವನ್ನು ಒದಗಿಸಿಕೊಡುವಂತೆ ಗ್ರಾಮದ 8ನೇ ವರ್ಗದ ವಿದ್ಯಾರ್ಥಿಗಳಾದ ಪೂರ್ಣಿಮ, ಅನಿತಾ, ಸಂಗೀತ, ಅಂಬಿಕಾ, ಮೇಘಾ ಸೇರಿದಂತೆ ಮತ್ತಿತರರು ವಿದ್ಯಾರ್ಥಿಗಳು ಮನವಿ ಮಾಡಿಕೊಂಡಿದ್ದಾರೆ.

ಸುದ್ದಿ ಓದಿ