ಜಲ ಜೀವನ ಮಿಷನ್ ಕಾಮಗಾರಿ ಶೀಘ್ರ ಆರಂಭಿಸಿ: ಯಾದವಾಡ
ರಾಮದುರ್ಗ 16: ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಜಲ ಜೀವನ ಮಿಷನ್ ಯೋಜನೆಯಡಿ ಮನೆ ಮನೆಗೆ ನಳ ಜೋಡಣೆಗೆ ಬಂದಾಗ ಗ್ರಾಮಸ್ಥರ ಸಹಕಾರ ಬಹಳ ಅವಶ್ಯವಾಗಿದೆ ಆದಿಶೆಯಲ್ಲಿ ಅಭಿವೃದ್ಧಿಗೆ ಗ್ರಾಮಸ್ಥರು ಸಹಕಾರ ಅತ್ಯವಶ್ಯವಾಗಿದೆ ಎಂದು ಶಾಸಕ ಮಹಾದೇವಪ್ಪ ಯಾದವಾಡ ಹೇಳಿದರು.
ತಾಲೂಕಿನ ಹಾಲೋಳ್ಳಿ 214 ಮನೆಗಳ ನಳ ಜೋಡಣೆಗೆ ರೂ. 37.50 ಲಕ್ಷ ಆರಿಬೆಂಚಿಯ 185 ಮನೆಗಳಿಗೆ ನಳ ಜೋಡಣೆಗೆ ರೂ.38.50 ಲಕ್ಷ, ಸಿದ್ದಾರೋಡ ನಗರದ 105 ಮನೆಗಳಿಗೆ ನಳ ಜೋಡಣೆಗೆ ರೂ24.75 ಲಕ್ಷ ಹಾಗೂ ಮುಳ್ಳೂರದಲ್ಲಿ ಪಶುಸಂಗೊಪನೆ ಆಸ್ಪತ್ರೆಯ ನೂತನ ಕಟ್ಟಡಕ್ಕೆ ರೂ. 34 ಲಕ್ಷ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು ಕಾಮಗಾರಿಯು ಪೂಜೆ ಮಾಡಿದ ಕೆಲವೇ ದಿನಗಳಲ್ಲಿ ಪ್ರಾರಂಭಿಸಬೇಕು ವಿನಾ ಕಾರಣ ವಿಳಂಬûವಾದರೆ ಇಲಾಖೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಅಭಿಯಂತರ ಚೌಗಲಾ, ಪಶುಸಂಗೊಪನೆ ಆಸ್ಪತ್ರೆಯ ಸಹಾಯಕ ನಿರ್ದೇಶಕ ಎ ಜಿ ಪಾಟೀಲ, ಮುಖ್ಯ ಪಶುವೈಧಾಧಿಕಾರಿ ಡಾ ಗೀರಿಶ ಪಾಟೀಲ, ಪಂಚಾಯತ ಅಭಿವೃದ್ದಿ ಅಧಿಕಾರಿ ಸೋಮನ್ನವರ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.