ರಕ್ಷಣಾ ಸಹಕಾರ: ಬೈಡೆನ್- ಜೋರ್ಡಾನ್ ದೊರೆ ಅಬ್ದುಲ್ಲಾ ಮಹತ್ವದ ಮಾತುಕತೆ

ರಕ್ಷಣಾ  ಸಹಕಾರ:  ಬೈಡೆನ್- ಜೋರ್ಡಾನ್ ದೊರೆ  ಅಬ್ದುಲ್ಲಾ ಮಹತ್ವದ ಮಾತುಕತೆ

ವಾಷಿಂಗ್ಟನ್, ಜುಲೈ 20 ಅಮೆರಿಕ - ಜೋರ್ಡಾನ್ ರಕ್ಷಣಾ ಸಂಬಂಧ ಬಲಪಡಿಸುವ ಕುರಿತು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಹಾಗೂ  ಜೋರ್ಡಾನ್  ದೊರೆ ಅಬ್ದುಲ್ಲಾ ಅವರುಗಳು  ಶ್ವೇತಭವನದಲ್ಲಿ   ಮಹತ್ವದ ಮಾತುಕತೆ ನಡೆಸಿದ್ದಾರೆ .
 
"ಜೋರ್ಡಾನ್‌ ಸೇನಾಡೆಯನ್ನು ಆಧುನೀಕರಣ ವಿಶೇಷವಾಗಿ   ಎಫ್ -16 ಫೈಟರ್ ಜೆಟ್‌ಗಳ ಆಧುನೀಕರಣಕ್ಕೆ ಅವರು ಅಮೆರಿಕದ  ಬೆಂಬಲ ಕುರಿತು  ಚರ್ಚಿಸಿದ್ದಾರೆ ಎಂದು ಹೇಳಲಾಗಿದೆ.

ಬೈಡನ್  ಮತ್ತು ಅಬ್ದುಲ್ಲಾ ಸಹ ಸಿರಿಯಾದಲ್ಲಿನ ಪರಿಸ್ಥಿತಿ ಕುರಿತು  ವಿಶೇಷವಾಗಿ ಮಾನವೀಯ ನೆರವು ಸಿರಿಯನ್ನರಿಗೆ ತಲುಪುವುದನ್ನು ಖಚಿತಪಡಿಸಿಕೊಳ್ಳುವ ಪ್ರಯತ್ನಗಳ ಬಗ್ಗೆ ಮಾತುಕತೆ ಮಾಡಿದ್ದಾರೆ . ಮಧ್ಯಪ್ರಾಚ್ಯದಲ್ಲಿ ಸ್ಥಿರತೆ ಕಾಪಾಡುವ  ಅವಕಾಶಗಳನ್ನು ಬೈಡೆನ್ ಒತ್ತಿ ಹೇಳಿದರು ಮತ್ತು ಜೋರ್ಡಾನ್ ಮತ್ತು ಹೊಸ ಇಸ್ರೇಲ್  ಸರ್ಕಾರದ ನಡುವಿನ ಮಾತುಕತೆಗೆ ಅವರು ಬೆಂಬಲ ವ್ಯಕ್ತಪಡಿಸಿದರು.  ಇದರ ಜೊತೆಗೆ ಆರ್ಥಿಕ ವಿಷಯಗಳು ಸೇರಿದಂತೆ ಮುಂಬರುವ ತಿಂಗಳುಗಳಲ್ಲಿ ಅನೇಕ ಕ್ಷೇತ್ರಗಳಲ್ಲಿನ  ದ್ವಿಪಕ್ಷೀಯ ಸಹಕಾರವನ್ನು ಮತ್ತಷ್ಟು  ಬಲಪಡಿಸಲು ಜೋ ಬೈಡನ್  ಆಡಳಿತ ಉದ್ದೇಶಿಸಿದೆ ಎಂದೂ  ಹೇಳಿಕೆಯಲ್ಲಿ  ತಿಳಿಸಲಾಗಿದೆ.

ಸುದ್ದಿ ಓದಿ