ಸಿರುಗುಪ್ಪ

ಬೆಳಕಿನ ಹಬ್ಬ ದೀಪಾವಳಿ ಸಂಭ್ರಮದಿಂದ ಆಚರಣೆ

ಬೆಳಕಿನ ಹಬ್ಬ ದೀಪಾವಳಿ ಸಂಭ್ರಮದಿಂದ ಆಚರಣೆ

ಸಿರುಗುಪ್ಪ 06: ಭಾರತೀಯ ಸಂಸ್ಕೃತಿ ತನ್ನದೇ ಆದ ವಿಶೇಷ ಸಂಪ್ರದಾಯ ಮತ್ತು ಪರಂಪರೆ ಹೊಂದಿದ್ದು ಯಾವುದೇ ಶುಭಕಾರ್ಯ ಉತ್ಸವ ಆಚರಣೆಗಳಲ್ಲಿ ದೀಪಗಳಿಗೆ ಪ್ರಾಧಾನ್ಯತೆ ಇದೆ ಹಬ್ಬಗಳ ಆಚರಣೆಯಲ್ಲಿ ಭಾರತದೇಶ ಅಗ್ರಸ್ಥಾನದಲ್ಲಿದೆ. ಇತಿಹಾಸವಿದೆ, ಪುರಾವೆಗಳಿವೆ ಎಂದು ಲೋಕ ಶಿಕ್ಷಣ ನಿರ್ದೇಶನಾಲಯ ಸಾಕ್ಷರತಾ ಮಿಷನ್ ಪ್ರಾಧಿಕಾರ ಸದಸ್ಯ ಸಮಾಜ ಸುಧಾರಕ ಎ.ಅಬ್ದುಲ್ ನಬಿ ಅಭಿಪ್ರಾಯಪಟ್ಟರು.  

ಬೆಳಕಿನ ಹಬ್ಬ ದೀಪಾವಳಿ ಅಂಗವಾಗಿ ಅವರು ಮಾತನಾಡುತ್ತಾ ದೀಪಾವಳಿ ಎಂದರೆ ದೀಪಗಳ ಸಾಲು ದೀಪದಿಂದ ದೀಪ ಬೆಳಗಿಸುವದು, ಕಲಿತದ್ದನ್ನು ಕಲಿಸುವದು, ಕತ್ತಲನ್ನು ಹೋಗಲಾಡಿಸುವುದು, ಸಾಕ್ಷರರನ್ನಾಗಿ ಮಾಡುವುದು ಪ್ರಮುಖವಾಗಿ ಸಂಭ್ರಮಿಸುವದು ಬಳ್ಳಾರಿ ಜಿಲ್ಲೆ ಸಿರುಗುಪ್ಪ ನಗರದ ವ್ಯಾಪಾರಸ್ಥರು ರೈಸು ಮಿಲ್ಲುಗಳಲ್ಲಿ ಅಂಗಡಿಗಳಲ್ಲಿ ದೀಪಾಲಂಕಾರದೊಂದಿಗೆ ನರಕ ಚತುರ್ದಶಿ ಅಮವಾಸ್ಯೆ ಲಕ್ಷ್ಮೀ ಪೂಜೆ ಬಲಿ ಪಾಡ್ಯಮಿ ಸರಸ್ವತಿ ಪೂಜೆ ನೆರವೇರಿಸಿ ಪಟಾಕಿ, ಹೂಬಾಣ ಸಿಡಿಸಿ ಫಲ, ಹಣ್ಣು, ಹಂಪಲು, ಸಿಹಿ ಪ್ರಸಾದ ವಿತರಿಸಿ ಸಂಭ್ರಮಿಸಿದರು. ಭಗವಂತನು ಪ್ರತಿಯೊಬ್ಬರ ಬಾಳಿನಲ್ಲಿ ಸುಖ ಶಾಂತಿ ಸಂತೋಷ ಸಮೃದ್ಧಿ ನೆಮ್ಮದಿ ಸಹೋದರತೆ ಪ್ರೀತಿ ವಿಶ್ವಾಸದಿಂದ ಕೂಡಿರಲಿ ಜಗತ್ತಿನ ಎಲ್ಲೆಡೆ ನೆಲ ಜಲ ಬೆಳೆ ಬದುಕು ಹಸನಾಗಲಿ ಎಂದು ಅಬ್ದುಲ್ ನಬಿ ಅವರು ಸರ್ವರಿಗೂ ಬೆಳಕಿನ ಹಬ್ಬದ ಶುಭ ಕೋರಿದರು 


ಸುದ್ದಿ ಓದಿ