ಬೆಳ್ಳಿ ಪದಕ ದೇಶಕ್ಕೆ ಸಮರ್ಪಣೆ: ಮಿರಾಬಾಯ್ ಚಾನು

ಬೆಳ್ಳಿ  ಪದಕ  ದೇಶಕ್ಕೆ ಸಮರ್ಪಣೆ: ಮಿರಾಬಾಯ್ ಚಾನು

ಟೋಕಿಯೋ,  ಜುಲೈ 24 ಟೋಕಿಯೋ ಒಲಿಂಪಿಕ್ಸ್ ನಲ್ಲಿ  ಗೆದ್ದ ಮೊದಲ ಬೆಳ್ಳಿ  ಪದಕವನ್ನು  ದೇಶಕ್ಕೆ ಸಮರ್ಪಿಸಿವುದಾಗಿ ಕ್ರಿಡಾಪಟು  ಮಿರಾಬಾಯ್ ಚಾನು  ಹೇಳಿದ್ದಾರೆ.

ಬೆಳ್ಳಿ ಪದಕ ಗೆದ್ದ ಖುಷಿಯನ್ನು ಟ್ವಿಟರಿನಲ್ಲಿ ಹಂಚಿಕೊಂಡಿರುವ ಅವರು  ನನ್ನ ಕನಸು ನನಸಾಯಿತು. ಈ ಬೆಳ್ಳಿ ಪದಕವನ್ನು  ದೇಶಕ್ಕೆ ಅರ್ಪಿಸಲು ಇಷ್ಟಪಡುವುದಾಗಿ ಅಭಿಮಾನದಿಂದ ಹೇಳಿದರು.
ಬೆನ್ನು ತಟ್ಟಿ ಪ್ರೋತ್ಸಾಹಿಸಿದ ಎಲ್ಲರಿಗೂ ಧನ್ಯವಾದ, ಈ ಗೆಲುವಿನ ಯಾನದಲ್ಲಿ  ಜೊತೆಯಾಗಿ ನಿಂತವರಿಗೆ ಮತ್ತು   ನನ್ನ ಗೆಲುವಿಗಾಗಿ ಪ್ರಾರ್ಥಿಸಿದ ಭಾರತೀಯರಿಗೆ,ವಿಶೇಷವಾಗಿ  ನನ್ನಲ್ಲಿ ನಂಬಿಕೆ ಇಟ್ಟುಕೊಂಡಿರುವ  ತಾಯಿಗೂ ಅವರು  ಧನ್ಯವಾದ ಹೇಳಿದ್ದಾರೆ.
ಇನ್ನು ಜಪಾನ್ ನಲ್ಲಿ ನಡೆಯುತ್ತಿರುವ ಟೋಕಿಯೊ ಒಲಿಂಪಿಕ್ಸ್ ನ ಮೊದಲ ದಿನವೇ ಭಾರತ ರಜತ ಪದಕ ಬಾಚಿಗೊಂಡಿತು. 49 ಕೆಜಿ ವಿಭಾಗದ ಭಾರ ಎತ್ತುವ ಸ್ಪರ್ಧೆಯಲ್ಲಿ ಮಿರಾಬಾಯ್ ಚಾನು  ಪದಕ ಮುಡಿಗೇರಿಸಿಕೊಂಡಿದ್ದಾರೆ.

ಸುದ್ದಿ ಓದಿ