ದ್ಯಾಮವ್ವ ದೇವಿಯ ಜಾತ್ರೆ ಅದ್ದೂರಿ ಆಚರಣೆಗೆ ನಿರ್ಧಾರ
ಶಿರಹಟ್ಟಿ 25: ಪ್ರತಿ ಮೂರು ವರ್ಷಗಳಿಗೊಮ್ಮೆ ಜರುಗುವ ಗ್ರಾಮದೇವತೆ ದ್ಯಾಮವ್ವ ದೇವಿಯ ಜಾತ್ರಾ ಮಹೋತ್ಸವ ಬರುವ 2024ರ ಜ. 23 ರಿಂದ 25 ರವರೆಗೆ ವಿಜೃಂಭಣೆಯಿಂದ ಆಚರಿಸಲಾಗುತ್ತಿದ್ದು, ಸದ್ಭಕ್ತರು ಸಹಕರಿಸಿ ಎಲ್ಲರೂ ಸೇರಿ ಜಾತ್ರೆಯನ್ನು ಅದ್ದೂರಿಯಾಗಿ ಆಚರಿಸೋಣ ಎಂದು ಜಾತ್ರಾ ಕಮಿಟಿಯ ಮುಖಂಡ ಎನ್ ಆರ್ ಕುಲಕರ್ಣಿ ಹೇಳಿದರು.
ಅವರು ಪಟ್ಟಣದ ದ್ಯಾಮವದೇವಿ ದೇವಸ್ಥಾನದಲ್ಲಿ ಜರುಗಿದ ಭಕ್ತರ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಜ.17ರಂದು ರಾತ್ರಿ 12:30 ಗಂಟೆಗೆ ಚೌತಮನಿಗೆ ದೇವಿಯನ್ನು ಕರೆದುಕೊಂಡು ಹೋಗುವುದು, 20ರಂದು ಪಟ್ಟಣದ ಎಲ್ಲ ದೇವರುಗಳಿಗೆ ಉಡಿ ತುಂಬುವ ಕಾರ್ಯಕ್ರಮ ಹಾಗೂ 22ರಂದು ದೇವಿಗೆ ನೆದರು ಬರೆಯುವ ಕಾರ್ಯಕ್ರಮ ಜರುಗಲಿದೆ.
23 ರಂದು ಮೊದಲನೆಯ ದಿನ ಹಾಗೂ ಎರಡನೇ ದಿನ ದೇವಿಯು ನಗರದ ತುಂಬೆಲ್ಲ ಗ್ರಾಮ ಸಂಚಾರ ಮಾಡಲಿದ್ದು, 25ರಂದು ದೇವಿಯ ಮೆರವಣಿಗೆ ಹಾಗು ಉಡಿತುಂಬುವ ಕಾರ್ಯಕ್ರಮ ಜರಗುವುದು. ಅಂದು ರಾತ್ರಿ ಕೆಲ ಧಾರ್ಮಿಕ ಕಾರ್ಯಕ್ರಮಗಳ ನಂತರ ಮಹಾಮಂಗಳಾರತಿ ನಡೆಯಲಿದೆ. ಪ್ರತಿ ಮೂರು ವರ್ಷಗಳಿಗೊಮ್ಮೆ ನಡೆಯಲಿರುವ ದ್ಯಾಮವ್ವದೇವಿ ಜಾತ್ರೆ ಮಹೋತ್ಸವಕ್ಕೆ ಅಗತ್ಯವಾದ ಎಲ್ಲ ಸಿದ್ಧತೆಗಳು ಸಾರ್ವಜನಿಕರ ಸಹಕಾರದೊಂದಿಗೆ ನಡೆಯಲಿದ್ದು, ಕಾರಣ ಎಲ್ಲ ಭಕ್ತರ ಸಹಕಾರ ಅಗತ್ಯವಿದೆ ಎಂದು ಭಕ್ತರಲ್ಲಿ ತಿಳಿಸಿದರು.
ಈ ದ್ಯಾಮವದೇವಿ ಜಾತ್ರಾ ಮಹೋತ್ಸವಕ್ಕೆ ಶಿರಹಟ್ಟಿ ಪಟ್ಟಣವನ್ನು ತಳಿರು ತೋರಣಗಳಿಂದ ಸಿಂಗರಿಸಿ ತಮ್ಮ ತಮ್ಮ ಮನೆಯ ಅಂಗಳವನ್ನು ಸ್ವಚ್ಛವಾಗಿಡಬೇಕು, ಪಟ್ಟಣ ಪಂಚಾಯಿತಿ ಪೌರ ಕಾರ್ಮಿಕರಿಗೆ ಸಾರ್ವಜನಿಕರು ಸಹಕರಿಸಿ ಪಟ್ಟಣವನ್ನು ಶುಚಿಯಾಗಿಟ್ಟುಕೊಳ್ಳಲು ಈ ಸಭೆಯಲ್ಲಿ ತಿಳಿಸಲಾಯಿತು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಸದಸ್ಯರಾದ ಫಕೀರೇಶ ರಟ್ಟೀಹಳ್ಳಿ, ಹೊನ್ನಪ್ಪ ಶಿರಹಟ್ಟಿ, ಮಂಜುನಾಥ ಗಂಟಿ, ಸುರೇಶ ವರವಿ, ಬಸವಣ್ಣಪ್ಪ ತುಳಿ, ಚಂದ್ರಕಾಂತ ನೂರಶೆಟ್ಟರ, ರಂಗಪ್ಪ ಗುಡಿಮನಿ, ಉಡಚಪ್ಪ ನೀಲಣ್ಣನವರ, ಬಸವರಾಜ ಹೊಸೂರ, ಅಜ್ಜು ಪಾಟೀಲ, ಉಮೇಶ ಗಾಣಿಗೇರ, ಸುರೇಶ ವರವಿ, ಯಲ್ಲಪ್ಪ ಇಂಗಳಗಿ, ಬಸವರಾಜ ಚಿಕ್ಕತೋಟದ, ಎಚ್.ಎಂ ದೇವಗಿರಿ, ಎಂ.ಕೆ ಲಮಾಣಿ, ಸುರೇಶ ಕಪ್ಪತ್ತನವರ, ಬಸವರಾಜ ಬೋರಶೆಟ್ಟರ, ಎಂ ಸಿ ಹಿರೇಮಠ, ಚಂದ್ರಕಾಂತ ಅಕ್ಕಿ, ಬಸವರಾಜ ವಡವಿ, ಅಕ್ಬರಸಾಬ ಯಾದಗಿರಿ, ಈರಣ್ಣ ಮಣಕವಾಡ, ಚನ್ನವೀರ್ಪ ಕಲ್ಯಾಣಿ, ಸುರೇಶ ವರವಿ, ಮುತ್ತು ಬಡಿಗೇರ ಸೇರಿದಂತೆ ಇನ್ನೂ ಅನೇಕರು ಉಪಸ್ಥಿತರಿದ್ದರು.