ಅಂತರರಾಷ್ಟ್ರೀಯ

ಕೊರೋನ ಸೋಂಕು : ಮಾಸ್ಕೋದಲ್ಲಿ 8 ಸಾವಿರ ದಾಟಿದ ಸಾವಿನ ಸಂಖ್ಯೆ

ಕೊರೋನ ಸೋಂಕು : ಮಾಸ್ಕೋದಲ್ಲಿ 8 ಸಾವಿರ ದಾಟಿದ ಸಾವಿನ ಸಂಖ್ಯೆ

ಮಾಸ್ಕೋ, ನವೆಂಬರ್ 30: ರಷ್ಯಾದ ರಾಜಧಾನಿಯಲ್ಲಿ ಮಾಸ್ಕೋದಲ್ಲಿ  ಕಳೆದ 24 ಗಂಟೆಗಳ ಅವಧಿಯಲ್ಲಿ ಹೊಸದಾಗಿ 74 ಜನರು ಕರೋನ ಸೊಂಕಿಗೆ ಬಲಿಯಾಗಿದ್ದು,  ಈವರೆಗೆ ಮೃತರ ಸಂಖ್ಯೆ 8 ಸಾವಿರ ದಾಟಿದೆ.

ಈ ವಿಷಯವನ್ನು ಎಂದು ನಗರದ ಕೋವಿಡ್  ಪ್ರತಿಕ್ರಿಯೆ ಕೇಂದ್ರ ಭಾನುವಾರ ತಿಳಿಸಿದೆ.ಮಾಸ್ಕೋದಲ್ಲಿ, ನ್ಯುಮೋನಿಯಾ ರೋಗನಿರ್ಣಯ ಮತ್ತು ಧನಾತ್ಮಕ ಕೊರೊನಾವೈರಸ್ ಪರೀಕ್ಷಾ ಫಲಿತಾಂಶದ ವರದಿ  ಖಚಿತಪಟ್ಟನಂತರ   74 ರೋಗಿಗಳು ಸಾವನ್ನಪ್ಪಿದ್ದಾರೆ  ಎಂದು ಕೇಂದ್ರವು ಹೊಸದಾಗಿ ನೀಡಿದ  ಮಾಹಿತಿಯಲ್ಲಿ ಹೇಳಿದೆ.

ಕೊರೋನದಿಂದ  ಈವರೆಗೆ  ಮಾಸ್ಕೋದಲ್ಲಿ ಮೃತಪಟ್ಟವರ  ಸಾವಿನ ಸಂಖ್ಯೆ ಈಗ 8,902 ಕ್ಕೆ ಏರಿಕೆಯಾಗಿದೆ ಎಂದೂ  ಇಲಾಖೆ ಹೇಳಿದೆ. 

ಸುದ್ದಿ ಓದಿ