ದುಂಡಪ್ಪ ಮುದ್ದಣ್ಣವರ ನಿಧನ
ಬೆಳಗಾವಿ 14: ತಾಲೂಕಿನ ಅಗಸಗಿ ಗ್ರಾಮದ ಗಣ್ಯರು ಹಾಗೂ ನಿವೃತ್ತ ಇಂಜಿಯರ್ ದುಂಡಪ್ಪ ಅಪ್ಪಯ್ಯ ಮುದ್ದಣ್ಣವರ (87) ವಯೊ ಸಹಜ ಕಾಯಿಲೆಯಿಂದ ಮಂಗಳವಾರ ನಿಧನರಾಗಿದ್ದಾರೆ.
ಗಡಿ ಗ್ರಾಮವಾದ ಅಗಸಗಿಯಿಂದ 1955ರಲ್ಲಿ ಮೊದಲ ಇಂಜಿನಿಯರ್ ಆಗಿದ್ದರು. ಕೊಯ್ನಾ ಡ್ಯಾಮ್ ನಿರ್ಮಾಣದಲ್ಲಿ ಮೇಲ್ವಿಚಾರಕರಾಗಿ ಕಾರ್ಯ ನಿರ್ವಹಿಸಿದ್ದರು. ಮಹಾರಾಷ್ಟ್ರದ ಪ್ರತಿಷ್ಠಿತ ಕಿರ್ಲೋಸ್ಕರ, ಭಾರತ ಪೊರ್ಜ ಕಂಪನಿಗಳಲ್ಲಿ ಪ್ರಮುಖ ಹುದ್ದೆಯಲ್ಲಿ ಕೆಲಸ ನಿರ್ವಹಿಸಿದ್ದರು. ಅಗಸಗಿ ಗ್ರಾಮದ ಅಭಿವೃದ್ಧಿಗಾಗಿ ಹಗಲು ರಾತ್ರಿ ಕನಸು ಕಂಡಿದ್ದ ಇವರು ಊರಿಗೆ ಕೆರೆ ನಿರ್ಮಾಣ ಮಾಡಿವುದಕ್ಕಾಗಿ ಬೆಂಗಳೂರಿಗೆ ಅಲೆದಾಟ ನಡೆಸಿ ಊರಿಗೆ ನೀರು ಪೂರೈಕೆಯಾಗುವಂತೆ ಕೆರೆ ನಿರ್ಮಾಣ ಮಾಡಿದ್ದರು. ಅಗಸಗಿಯಲ್ಲಿ ಪಶು ವೈದ್ಯರು, ಆರೋಗ್ಯ ಉಪಕೇಂದ್ರ ಹಾಗೂ ಶಾಲೆಗಳ ನಿರ್ಮಾಣದಲ್ಲಿ ಮಹತ್ವ ಪಾತ್ರ ವಹಿಸಿದ್ದರು.
ಮೃತರಿಗೆ ಪುತ್ರ, ಇಬ್ಬರು ಸಹೋದರರು, ಸಹೋದರಿ, ಸೊಸೆಯಂದಿರು, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗ ಇದ್ದಾರೆ.