ಮುಂಗಾರು ಅಧಿವೇಶನದ 3ನೇ ದಿನ : ಸರ್ಕಾರಕ್ಕೆ ಮತ್ತೊಂದು ಟಾಂಗ್ ನೀಡಲು ವಿಪಕ್ಷ ಸಜ್ಜು
ನವದೆಹಲಿ, ಜುಲೈ 22 ಸಂಸತ್ತಿನ ಮುಂಗಾರು ಅಧಿವೇಶನದ ಮೂರನೇ ದಿನ ಮತ್ತೆ ಬಿರುಗಾಳಿ ಏಳುವ ಸಾಧ್ಯತೆಯಿದೆ, ಪ್ರತಿಪಕ್ಷದ ನಾಯಕರು ಕೋವಿಡ್ -19, ರೈತರ ಪ್ರತಿಭಟನೆ ಮತ್ತಿತರರ ಸಮಸ್ಯೆಗಳ ಬಗ್ಗೆ ಸರ್ಕಾರಕ್ಕೆ ಟಾಂಗ್ ನೀಡಲು ಸಿದ್ಧರಾಗಿದ್ದಾರೆ.
ಉಭಯ ಸದನಗಳಲ್ಲಿ ನಿಗದಿತ ವ್ಯವಹಾರವನ್ನು ಸ್ಥಗಿತಗೊಳಿಸಿ ಮೇಲ್ಕಂಡ ವಿಷಯಗಳ ಬಗ್ಗೆ ಚರ್ಚಿಸಲು ಆಗ್ರಹಿಸಿದ್ದಾರೆ. ಲೋಕಸಭೆಯಲ್ಲಿ ಕಾಂಗ್ರೆಸ್ ಸಂಸದ ಹಿಬಿ ಈಡನ್ ಸದನದ ವ್ಯವಹಾರವನ್ನು ಮುಂದೂಡಲು ನೋಟಿಸ್ ನೀಡಿದ್ದು, ರೈತರ ಸಮಸ್ಯೆಯನ್ನು ತುರ್ತು ಆಧಾರದ ಮೇಲೆ ಚರ್ಚಿಸಲು ಒತ್ತಾಯಿಸಿದ್ದಾರೆ. "ಹೊಸ ಕೃಷಿ ಕಾನೂನಿನ ಪ್ರತಿಕೂಲ ಷರತ್ತು ಹಿಂತೆಗೆದುಕೊಳ್ಳುವ ಮೂಲಕ ರೈತರ ಬಿಕ್ಕಟ್ಟಿಗೆ ಪರಿಹಾರ ನೀಡಲು ಕೇಂದ್ರ ಸರ್ಕಾರ ಸೂಕ್ತ ನಿಲುವು ತಳೆಯದ ಕಾರಣ, ಜಾಗತಿಕವಾಗಿ ದೇಶದ ಖ್ಯಾತಿಯನ್ನು ಹಾಳುಮಾಡುತ್ತಿದೆ. ಕೃಷಿಯ ಉದಾರೀಕರಣದತ್ತ ಕೇಂದ್ರವು ದೃಷ್ಟಿಯನ್ನು ಹೊಂದಿದೆ, ಅದು ಅಂತಿಮವಾಗಿ ಕಾರ್ಪೊರೇಟ್ ಸ್ವಾಧೀನಕ್ಕೆ ಕಾರಣವಾಗುತ್ತದೆ. ಸರ್ಕಾರವು ಕಾನೂನಿನ ರೈತ ವಿರೋಧಿ ಷರತ್ತುಗಳನ್ನು ತುರ್ತಾಗಿ ಹಿಂತೆಗೆದುಕೊಳ್ಳಬೇಕು ಮತ್ತು ರೈತರು ಇದನ್ನು ಕೇಳಬೇಕು "ಎಂದು ಈಡನ್ ಹೇಳಿದ್ದಾರೆ.
ರಾಜ್ಯಸಭೆಯಲ್ಲಿ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಸಿಪಿಐ) ಸಂಸದ ಬಿನೊಯ್ ವಿಶ್ವಮ್ ಅವರು ಸದನದಲ್ಲಿ ಇನ್ನಿತರ ಕಾರ್ಯಕಲಾಪಗಳನ್ನು ಸ್ಥಗಿತಗೊಳಿಸಿ ರೈತರ ಸಮಸ್ಯೆಯನ್ನು ಕೈಗೆತ್ತಿಕೊಳ್ಳಲು ನಿಯಮ 267 ರ ಅಡಿಯಲ್ಲಿ ನೋಟಿಸ್ ನೀಡಿದ್ದಾರೆ.
ಪೆಗಾಸಸ್ ಸ್ಪೈವೇರ್ ಅನ್ನು ಫೋನ್ ಟ್ಯಾಪಿಂಗ್ಗಾಗಿ ಬಳಸಲಾಗಿದೆ ಎಂಬ ಆರೋಪದ ವಿರುದ್ಧ ರೈತರ ಪ್ರತಿಭಟನೆ ಮತ್ತಿತರ ವಿವಾದಗಳ ಮಧ್ಯೆ ವಿಪಕ್ಷಗಳ ಹಲವು ನಾಯಕರು ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಸಿದ್ಧವಾಗಿದ್ದಾರೆ.