ದರ್ಭಂಗಾ ಸ್ಫೋಟ: ಮತ್ತೊಬ್ಬ ಆರೋಪಿಯನ್ನು ಬಂಧಿಸಿದ ಎನ್‌ ಐ ಎ

ದರ್ಭಂಗಾ ಸ್ಫೋಟ:  ಮತ್ತೊಬ್ಬ ಆರೋಪಿಯನ್ನು  ಬಂಧಿಸಿದ  ಎನ್‌ ಐ ಎ

ಶ್ರೀನಗರ, ಜುಲೈ 26  ದರ್ಭಂಗಾ  ಸ್ಫೋಟ  ಪ್ರಕರಣದಲ್ಲಿ  ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)   ಮತ್ತೊಬ್ಬ  ಆರೋಪಿಯನ್ನು ಸೋಮವಾರ ಬಂಧಿಸಿದೆ. ಕಾಶ್ಮೀರ  ಕಣಿವೆಯಲ್ಲಿ  ಇಮಾಜ್ ಎಂಬ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಎನ್ ಐ ಎ ಅಧಿಕಾರಿಗಳು ಹೇಳಿದ್ದಾರೆ.   ಪ್ರಕರಣದ ಆರೋಪಿಗಳಾದ ಮಲಿಕ್ ಸಹೋದರರೊಂದಿಗೆ  ಸೇರಿ   ಇಮಾಜ್   ದರ್ಭಂಗಾ  ಸ್ಫೋಟ ನಡೆಸಲು ಸಂಚು ರೂಪಿಸಿದ್ದ ಎಂದು ಹೇಳಲಾಗಿದೆ.    ದರ್ಭಂಗಾ ಸ್ಫೋಟ ಪ್ರಕರಣದ ಆರೋಪಿಗಳ ಕಸ್ಟಡಿ ಅವಧಿ ಮುಕ್ತಾಯಗೊಂಡಿದ್ದ  ಹಿನ್ನಲೆಯಲ್ಲಿ,   ಆರೋಪಿಗಳನ್ನು ಈ ತಿಂಗಳ 23 ರವರೆಗೆ ನ್ಯಾಯಾಲಯ    ತನಿಖಾ ಸಂಸ್ಥೆಯ ವಶಕ್ಕೆ ನೀಡಿದೆ ಎಂದು ತಿಳಿದುಬಂದಿದೆ. ವಿಚಾರಣೆಯ ವೇಳೆ     ಎನ್ಐಎ  ಮಹತ್ವದ ಅಂಶಗಳನ್ನು ಸಂಗ್ರಹಿಸಿದ್ದು,   ಸ್ಫೋಟದ ಹಿಂದೆ ಲಷ್ಕರ್-ಎ-ತೊಯಿಬಾ  ನಾಯಕ ಇಕ್ಬಾಲ್  ಕೈವಾಡ ಇದೆ  ಎಂದು ಎನ್ಐಎ ಹೇಳಿದೆ.

ಲಷ್ಕರ್-ಎ-ತೊಯಿಬಾ  ಮುಖ್ಯಸ್ಥ ಹಫೀಜ್ ಸೈಯದ್, ಭೂಗತ ಲೋಕದ  ಪಾತಕಿ  ಟೈಗರ್ ಮೆಮನ್  ಸೂಚನೆಯಂತೆ   ಭಾರತದಲ್ಲಿ ಸ್ಫೋಟಗಳನ್ನು ನಡೆಸಲು  ಸಂಚು ರೂಪಿಸಲಾಗಿದೆ ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ.  ಸ್ಪೋಟ ಕೃತ್ಯ   ಕಾರ್ಯಗತಗೊಳಿಸಲು  ಇಕ್ಬಾಲ್   ತಮ್ಮ ಸ್ವಂತ  ಗ್ರಾಮ  ಖೈರಾನಾದ ಜನರೊಂದಿಗೆ ಸಂಪರ್ಕ  ಬೆಳೆಸಿಕೊಂಡಿದ್ದ  ಎಂಬುದು ತಿಳಿದುಬಂದಿದೆ.  ದರ್ಭಂಗಾ ಸ್ಫೋಟ ಪ್ರಕರಣದಲ್ಲಿ ಖಲೀಮ್ ಎಂಬ  ಮತ್ತೊಬ್ಬ  ವ್ಯಕ್ತಿಯ ಪಾತ್ರ ಇರುವುದು  ಬೆಳಕಿಗೆ ಬಂದಿದೆ ಎಂದು    ಅಧಿಕಾರಿಗಳು ತಿಳಿಸಿದ್ದಾರೆ.


ಸುದ್ದಿ ಓದಿ