ಕ್ರೀಡೆ

ವಿಶ್ವದ ಅಗ್ರ ಶೇಯಾಂಕಿತನಾಗಿ ಹೊರಹೊಮ್ಮಿದ ಡೇನಿಯಲ್

ವಿಶ್ವದ ಅಗ್ರ ಶೇಯಾಂಕಿತನಾಗಿ ಹೊರಹೊಮ್ಮಿದ  ಡೇನಿಯಲ್

ದುಬೈ:ಫೆಬ್ರವರಿ 25:  ರಷ್ಯಾದ ಆಟಗಾರ ಡೇನಿಯಲ್ ಮೆಡ್ವೆಡೆವ್ ಟೆನಿಸ್ ಜಗತ್ತಿನಲ್ಲಿ ಅಗ್ರಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ. ಸೋಮವಾರ ಪ್ರಕಟವಾಗಲಿರುವ ಎಟಿಪಿ ಶ್ರೇಯಾಂಕದಲ್ಲಿ ಮೆಡ್ವೆಡೆವ್ ವಿಶ್ವದ ನಂಬರ್ ಒನ್ ಸ್ಥಾನಕ್ಕೇರಲಿದ್ದಾರೆ.

ಮೆಡ್ವೆಡೆವ್ ಅವರ ವೃತ್ತಿಜೀವನದಲ್ಲಿ ಏಕೈಕ ಗ್ರ್ಯಾಂಡ್ ಸ್ಲಾಮ್ ವಿಜೇತರಾಗಿದ್ದೂ  ಕಫೆಲ್ನಿಕೋವ್ ಅವರು ಮರಾಟ್ ಸಫಿನ್ ನಂತರ ಅಗ್ರಸ್ಥಾನವನ್ನು ತಲುಪಿದ ಮೂರನೇ ರಷ್ಯಾದ ಆಟಗಾರರಾಗಿದ್ದಾರೆ. ನೊವಾಕ್ ಜೊಕೊವಿಕ್ (ಸರ್ಬಿಯಾ) ಗುರುವಾರ ನಡೆದ ದುಬೈ ಓಪನ್‌ನ ಕ್ವಾರ್ಟರ್ ಫೈನಲ್‌ಗೆ 4–6ರ 6–7 (4/7) ಅಂತರದಲ್ಲಿ ವಿಶ್ವದ 123 ನೇ ಶ್ರೇಯಾಂಕದ ಆಟಗಾರ ಜಿರಿ ವೆಸ್ಲಿ (ಜೆಕ್ ರಿಪಬ್ಲಿಕ್) ವಿರುದ್ದ ಸೋತರು.

ಜೊಕೊವಿಕ್ ಫೆಬ್ರವರಿ 2020 ರಿಂದ ಅಗ್ರ ಸ್ಥಾನದಲ್ಲಿದ್ದಾರೆ. ಕಳೆದ 18 ವರ್ಷಗಳಲ್ಲಿ (2004 ರಿಂದ) ಫೆಡರರ್, ನಡಾಲ್, ಜೊಕೊವಿಕ್ ಮತ್ತು ಮರ್ರೆ ಅವರನ್ನು ಹೊರತುಪಡಿಸಿ ವಿಶ್ವದ ನಂಬರ್ ಒನ್ ಸ್ಥಾನವನ್ನು ತಲುಪಿದ ಮೊದಲ ಆಟಗಾರ ಡೇನಿಯಲ್.

ಸುದ್ದಿ ಓದಿ