ಮಹಲಿಂಗಪುರ

ವೈವಾಹಿಕ ಸಂಬಂಧಗಳಿಗೆ ಜಾತಿ, ಜಾತಕಗಳಿಗಿಂತ ವ್ಯಕ್ತಿಯ ಆರೋಗ್ಯ ತಪಾಸಿಸುವುದು ಜಾಣತನ: ಡಾ.ಅರಿಶಿನಗೋಡಿ

ವೈವಾಹಿಕ ಸಂಬಂಧಗಳಿಗೆ ಜಾತಿ, ಜಾತಕಗಳಿಗಿಂತ ವ್ಯಕ್ತಿಯ ಆರೋಗ್ಯ ತಪಾಸಿಸುವುದು ಜಾಣತನ:  ಡಾ.ಅರಿಶಿನಗೋಡಿ


ಮಹಾಲಿಂಗಪುರ: ಇತ್ತೀಚಿನ ದಿನಗಳಲ್ಲಿ ವೈವಾಹಿಕ ಸಂಬಂಧಗಳಿಗೆ ಜಾತಿ, ಜಾತಕಗಳಿಗಿಂತ ವ್ಯಕ್ತಿಯ ರಕ್ತ ಮತ್ತು ಆರೋಗ್ಯ ತಪಾಸಿಸುವುದು ಜಾಣತನವೆಂದು ಸ್ತ್ರೀ ರೋಗ ತಜ್ಞೆ ಡಾ.ಅನುಪಮಾ ಅರಿಶಿನಗೋಡಿ ಹೇಳಿದರು. 

ಸ್ಥಳೀಯ ಕೆಎಲ್‌ಇ ಸಂಸ್ಥೆಯ ಎಸ್‌ಸಿಪಿ ಪ್ರೌಢಶಾಲೆಯಲ್ಲಿ ರೆಡ್ ರಿಬ್ಬನ್ ಕ್ಲಬ್ ಆಶ್ರಯದಲ್ಲಿ ವಿಶ್ವ ಏಡ್ಸ್‌ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಹದ ಸುರಕ್ಷಾ ಕವಚವನ್ನೇ ಹಾಳು ಮಾಡುವಂಥ ಎಚ್‌ಐವಿ ಸೋಂಕು ಹರಡದಂತೆ ಎಚ್ಚರ ವಹಿಸಬೇಕು ಮತ್ತು ತಮ್ಮ ಆರೋಗ್ಯದ ಕಡೆ ಹೆಚ್ಚಿನ ಗಮನಹರಿಸಬೇಕೆಂದು ವಿದ್ಯಾರ್ಥಿಗಳಿಗೆ ವಿಶೇಷ ಉಪನ್ಯಾಸ ನೀಡಿ ಮನವರಿಕೆ ಮಾಡಿದರು. ನಂತರ ವಿದ್ಯಾರ್ಥಿಗಳು ಮತ್ತು ವೈದ್ಯರಿಂದ ಸಂವಾದವೂ ನಡೆಯಿತು.  

ವಚನ ಸಾಹಿತ್ಯ ಪರಿಷತ್ ಅಧ್ಯಕ್ಷೆ ಭಾಗ್ಯಶ್ರೀ ಕೋಟಿ ಮಾತನಾಡಿ, ಮಾನವೀಯ ದೃಷ್ಟಿಯಿಂದ ಏಡ್ಸ್‌ ರೋಗವನ್ನು ವಿರೋಧಿಸಬೇಕೇ ಹೊರತು ರೋಗಿಗಳನ್ನಲ್ಲ ಎಂದರು.  

ಕೋವಿಡ್ ಸಮಯದಲ್ಲಿ ಸಾಧನೆ ಮಾಡಿ ವಿಜೇತರಾದ ಸ್ಕೌಟ್ಸ್‌ ಮತ್ತು ಗೈಡ್ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ನೀಡಿ ಅವರನ್ನು ಸನ್ಮಾನಿಸಲಾಯಿತು. ಉಪಪ್ರಾಂಶುಪಾಲ ಬಿ.ಎನ್‌.ಅರಕೇರಿ ಅಧ್ಯಕ್ಷತೆ ವಹಿಸಿದ್ದರು. ಸ್ಕೌಟ್ಸ್‌ ಸಮವಸ್ತ್ರ ದಾನಿ ಶಮಾ ಅತ್ತಾರ, ಡಿ.ಎ.ಬಿಸನಾಳ, ಸಪನಾ ಅನಿಗೋಳ, ಪ್ರತಿಮಾ ಪಡೇಸೂರ, ಭಾಗ್ಯಶ್ರೀ ಹಿರೇಮಠ, ರಮೇಶಬಾಬು, ಜ್ಯೋತಿ ಅಮ್ಮಣಗಿ ಇದ್ದರು. 


ಸುದ್ದಿ ಓದಿ