ಮಹಲಿಂಗಪುರ

ಕ್ರಿಕೆಟ್ ಪಂದ್ಯಾವಳಿ: ಏಳು ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ

ಕ್ರಿಕೆಟ್  ಪಂದ್ಯಾವಳಿ:  ಏಳು ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ

ಕ್ರಿಕೆಟ್  ಪಂದ್ಯಾವಳಿ:  ಏಳು ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ 

ಮಹಾಲಿಂಗಪುರ  14: ಸಮೀಪದ ನಾಗರಾಳ ಗ್ರಾಮದ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಜರುಗಿದ ತಾಲೂಕಾ ಮಟ್ಟದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಸ್ಥಳೀಯ ಜೆಸಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಏಳು ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿ ಗಮನ ಸೆಳೆದಿದ್ದಾರೆ. 

ತಂಡದ ನಾಯಕ ಪ್ರೀತಮ್ ಘಟ್ಟೆಪ್ಪನವರ, ವಿನಾಯಕ ಕೊಂಕಣಕೊಪ್ಪ, ವಿನಾಯಕ ಘಟ್ನಟ್ಟಿ, ರಿಯಾನ್ ಯಾದವಾಡ, ಪ್ರೀತಮ್ ಬಾವಿಕಟ್ಟಿ, ನಫೀಜ್ ಪಿರಜಾದೆ, ಸ್ವಪ್ನಿಲ್ ಜ್ಯೋತಿ ಆಯ್ಕೆಯಾಗಿದ್ದು, ಶಿಕ್ಷಕಿ ಸುಜಾತ ಹೊಸಕೇರಿ ಮಾರ್ಗದರ್ಶನ ಮಾಡಿದ್ದು, ಸಂಸ್ಥೆಯ ಉಪಾಧ್ಯಕ್ಷ ಶಿವಾನಂದ ತಿಪ್ಪಾ, ಮುಖ್ಯೋಪಾಧ್ಯಾಯ ಎಸ್‌.ಜಿ.ಕೌಜಲಗಿ ಇತರರು ಅಭಿನಂದಿಸಿದ್ದಾರೆ. 

ಸುದ್ದಿ ಓದಿ