ಮಹಲಿಂಗಪುರ

ನಿರ್ಗತಿಕ ಅಜ್ಜಿಯ ಶವ ಸಂಸ್ಕಾರ : ಮಾನವೀಯತೆ ಮೆರೆದ ಹಿಂದೂ ಸಂಘಟನೆಯ ಕಾರ್ಯಕರ್ತರು

ನಿರ್ಗತಿಕ ಅಜ್ಜಿಯ ಶವ ಸಂಸ್ಕಾರ : ಮಾನವೀಯತೆ ಮೆರೆದ  ಹಿಂದೂ ಸಂಘಟನೆಯ ಕಾರ್ಯಕರ್ತರು

ಮಹಾಲಿಂಗಪುರ: ನಗರದ ಶುಕ್ರವಾರ ರಾತ್ರಿ ನಿರ್ಗತಿಕ ಅಜ್ಜಿಯ ಶವ ಸಂಸ್ಕಾರ ಮಾಡುವ ಮೂಲಕ ಮಹಾಲಿಂಗಪುರ ಭಜರಂಗದಳ ಹಿಂದೂ ಸಂಘಟನೆಗಯ ಕಾರ್ಯಕರ್ತರು ಮತ್ತು ಓಣಿಯ ಹಿರಿಯರೂ ಮಾನವೀಯತೆ ಮೆರೆದಿದ್ದಾರೆ.

ನಗರದ ನಿರ್ಗತಿಕ ನಿವಾಸಿ ನೀಲವ್ವ ಕೆರೂರ್ ಎಂಬ ವಯಸ್ಸಾದ ಅಜ್ಜಿಯು ಅನಾರೋಗ್ಯದಿಂದ ನಗರದ ಸರಕಾರಿ ಆಸ್ಪತ್ರೆಯಲ್ಲಿ ಸಂಜೆ ನಿಧನ ಹೊಂದಿದ್ದರು. ಅಜ್ಜಿಯ ಸಂಬಂಧಿಕರು ಯಾರು ಬರದೆ ಕಾರಣ ನಿರ್ಗತಿಕ ಅನಾಥ ಅಜ್ಜಿ ಎಂಬ ವಿಷಯ ತಿಳಿಯುತ್ತಿದ್ದಂತೆಯೆ ನಗರದ ಬಜರಂಗದಳ ಹಿಂದೂ ಕಾರ್ಯಕರ್ತರು ಮತ್ತು ಅಜ್ಜಿಯ ನಿವಾಸದ ಹತ್ತಿರದ ಕೆಲ ಹಿರಿಯರು ಸೇರಿ ಸರ್ಕಾರಿ ಆಸ್ಪತ್ರೆಗೆ ಆಗಮಿಸಿ ಅಂತ್ಯ ಸಂಸ್ಕಾರಕ್ಕೆ ಬೇಕಾದ ಸಾಮಗ್ರಿಗಳನ್ನು ತೆಗೆದುಕೊಂಡು ಪುರಸಭೆ ಮುಕ್ತಿ ವಾಹನದಲ್ಲಿ ಆಸ್ಪತ್ರೆಯಿಂದ ರುದ್ರ ಭೂಮಿಯವರೆಗೆ ಶವವನ್ನು ತೆಗೆದುಕೊಂಡು ಬಂದು ಶಾಸ್ತ್ರೋತ್ಸವವಾಗಿ ಅಜ್ಜಿಯ ಅಂತ್ಯ ಸಂಸ್ಕಾರ ಮಾಡುವುದರ ಮೂಲಕ ಮಾನವೀಯತೆ ಮೆರೆದಿದ್ದಾರೆ.ಹಿಂದೂ ಸಂಘಟನೆಯ ಕಾರ್ಯಕರ್ತ ಮಹಾದೇವ ಪುಕಾಳೆ,ಶಂಭುಲಿಂಗ ಬಡಿಗೇರ್,ರವಿ ಜವಳಗಿ,ಗಂಗಪ್ಪ ಲಾತೂರ,ಜಿ ಎಸ್ ಗೊಂಬಿ, ನಾರಾಯಣ ಕಿರಗಿ, ಸಚಿನ ಕಲಮಡಿ,ಅಭಿ ಲಮಾಣಿ,ಆನಂದ ಬಂಡಿಗಿನಿ,ಸಚಿನ ವಂದಾಲ,ಸಂಜು ಪವಾರ,ರಾಘು ಪವಾರ್,ಸಂತೋಷ ಹಜಾರೆ,ಶಿವಲಿಂಗ ಜಕ್ಕಣ್ಣವರ,ಬಸು ಹೊಳಗಿ,ಸಚಿನ ಮೂಡಲಗಿ,ಬಸು ಮೂರಾರಿ,ಸಾಗರ ಭೋವಿ,ಶ್ರೀನಿಧಿ ಕುಲಕಣರ್ಿ, ಚನ್ನು ಆರೆಗಾರ, ಈರಪ್ಪ ಹುಣಶ್ಯಾಳ,ರಮೇಶ ನಾಗರಾಳ, ಕೃಷ್ಟಾ ಕಳ್ಳಿಮನಿ, ರಾಜೇಂದ್ರ ನಾವಿ,ಇನ್ನು ಹಲವಾರು ಸಂಘನೆಯ ಕಾರ್ಯಕರ್ತರು ಇದ್ದರು 

ಸುದ್ದಿ ಓದಿ