ಬರುವ ಮಾರ್ಚ್ ನಿಂದ ದೇಶಾದ್ಯಂತ ೧೨-೧೫ ವರ್ಷದ ಮಕ್ಕಳಿಗೂ ಕೋವಿಡ್ ಲಸಿಕೆ
ಹುಬ್ಬಳ್ಳಿ, ಜ ೧೮ ಮಾರ್ಚ್ ತಿಂಗಳಲ್ಲಿ ದೇಶದ್ಯಾಂತ ೧೨-೧೫ ವರ್ಷದ ಮಕ್ಕಳಿಗೂ ಸಹ ಕೋವಿಡ್ ಲಸಿಕಾ ನೀಡುವ ಪ್ರಕ್ರಿಯೆ ಆರಂಭವಾಗಲಿದ್ದು, ಮುಂದಿನ ಎಂಟು ತಿಂಗಳಲ್ಲಿ ದೇಶದ ಎಲ್ಲ ನಾಗರಿಕರಿಗೆ ಸಂಪೂರ್ಣವಾಗಿ ಲಸಿಕೆ ನೀಡುವ ಮೂಲಕ ಬೃಹತ್ ಸಾಧನೆ ನಡೆಸಲಾಗುವುದು ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಹಾಗೂ ಕೇಶ್ವಾಪೂರದ ಪಾತಿಮಾ ಪ್ರೌಢ ಶಾಲೆ ಸಹಯೋಗದಲ್ಲಿ ೧೫- ೧೮ ವರ್ಷದ ಮಕ್ಕಳ ಲಸಿಕಾಕರಣಕ್ಕೆ ಚಾಲನೆ ನೀಡಿ ಮಾತನಾಡಿದರು.
ದೇಶದಲ್ಲಿ ಈವರೆಗೆ ೧೫೮ ಕೋಟಿ ಡೋಸ್ ಲಸಿಕೆ ನೀಡಲಾಗಿದೆ. ಅಂದಾಜು ೬೬ ಕೋಟಿಗೂ ಹೆಚ್ಚು ಎರಡು ಡೋಸ್ ಲಸಿಕೆ ಪಡೆದಿದ್ದಾರೆ. ಭಾರತ ದೇಶ ಬೇರೆ ದೇಗಳಿಗೆ ಹೋಲಿಸಿದರೆ ೧೦ ಪಟ್ಟು ಹೆಚ್ಚು ಲಸಿಕೆ ನೀಡಿ ವಿಶ್ವವೇ ಭಾರತದತ್ತ ತಿರುಗಿ ನೋಡುವಂತೆ ಮಾಡಿದೆ. ಜ. ೩ ರಿಂದ ೧೫ರಿಂದ ೧೮ ವರ್ಷದ ಕಿರಿಯರಗೆ ಲಸಿಕೆ ನೀಡಲು ಪ್ರಾರಂಭಿಸಿದ್ದು. ಈವರೆಗೆ ದೇಶದಲ್ಲಿ ೩.೩೧ ಕೋಟಿಗೂ ಹೆಚ್ಚು ಕಿರಿಯರಿಗೆ ಲಸಿಕೆ ನೀಡಿ ಯಶಸ್ವಿಯಾಗಿದ್ದೇವೆ ಎಂದರು.
ಅದೇ ರೀತಿ ಕೊರೋನಾ ಸಂದಿಗ್ಧ ಸಮಯದಲ್ಲಿ ವಿಶ್ವದಲ್ಲಿ ಅತೀ ಹೆಚ್ಚು ಉಚಿತ ಪಡಿತರ
ನೀಡಿದ ಹೆಗ್ಗಳಿಕೆ ಭಾರತ ದೇಶ ಪಾತ್ರವಾಗಿದೆ. ಇಲ್ಲಿಯ ವರೆಗೆ ಮೂರು ಲಕ್ಷ ಕೋಟಿ ರೂ.
ಉಚಿತ ಪಡಿತರ ಜನಸಾಮಾನ್ಯರಿಗೆ ನೀಡಲಾಗಿದೆ ಎಂದು ವಿವರಿಸಿದರು.
ಜಿಲ್ಲೆಯಾದ್ಯಂತ ಅತೀ ಹೆಚ್ಚು ಜನರು ಲಸಿಕೆ ಪಡೆದಿದ್ದಾರೆ. ಇದಕ್ಕೆ ಮೂಲ ಕಾರಣ
ಜಿಲ್ಲಾಡಳಿತ ಹಾಗೂ ಜಿಲ್ಲಾ ಆರೋಗ್ಯ ಕಾರ್ಯಕರ್ತರ ಶ್ರಮ ಸರ್ಕಾರದ ಪರವಾಗಿ ಅವರನ್ನು
ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.