ಮಹಲಿಂಗಪುರ

ಮಹಾಲಿಂಗಪುರ: ಸ್ಥಳೀಯ ಕೆ.ಎಲ್‌.ಇ ಸಂಸ್ಥೆಯ ಎಸ್‌.ಸಿ.ಪಿ ಪದವಿ ವಿದ್ಯಾರ್ಥಿಗಳಿಗೆ ಕೋವಿಡ್ ಲಸಿಕೆ ನೀಡಲಾಯಿತು.

ಮಹಾಲಿಂಗಪುರ: ಸ್ಥಳೀಯ ಕೆ.ಎಲ್‌.ಇ ಸಂಸ್ಥೆಯ ಎಸ್‌.ಸಿ.ಪಿ ಪದವಿ ವಿದ್ಯಾರ್ಥಿಗಳಿಗೆ ಕೋವಿಡ್ ಲಸಿಕೆ ನೀಡಲಾಯಿತು.

ಮಹಾವಿದ್ಯಾಲಯದಲ್ಲಿ ಕೋವಿಡ್ ಲಸಿಕಾ ಮಹಾಮೇಳ 

ಮಹಾಲಿಂಗಪುರ 08: ಸ್ಥಳೀಯ ಕೆ.ಎಲ್‌.ಇ ಸಂಸ್ಥೆಯ ಎಸ್‌.ಸಿ.ಪಿ ಕಲಾ, ವಿಜ್ಞಾನ ಹಾಗೂ ಡಿ.ಡಿ.ಎಸ್ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಜಿಲ್ಲಾ ಆರೋಗ್ಯ ಇಲಾಖೆ, ಬಾಗಲಕೋಟ, ಸಮುದಾಯ ಆರೋಗ್ಯ ಕೇಂದ್ರ ಮಹಾಲಿಂಗಪುರ, ರಾಷ್ಟ್ರೀಯ ಸೇವಾ ಯೋಜನಾ ಘಟಕ ಹಾಗೂ ಯೂಥ್ ರೆಡ್ ಕ್ರಾಸ್ ವಿಂಗ್ ಇವುಗಳ ಸಹಯೋಗದಲ್ಲಿ ಮಹಾವಿದ್ಯಾಲಯದ ಪದವಿ ವಿದ್ಯಾರ್ಥಿಗಳಿಗೆ ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರಿಗೆ ಕೋವಿಡ್‌-19 ಲಸಿಕಾ ಮಹಾಮೇಳ ನಿಮಿತ್ಯ ಕೋವಿಡ್ ಲಸಿಕೆಯನ್ನು ನೀಡಲಾಯಿತು. 

ಸುಮಾರು 170 ಕ್ಕೂ ಅಧಿಕ ವಿದ್ಯಾರ್ಥಿಗಳು ಕೋವಿಡ್ ಲಸಿಕೆಯನ್ನು ಹಾಕಿಸಿಕೊಂಡರು.  

ವಾಣಿಜ್ಯ ವಿಭಾಗದ ಉಪನ್ಯಾಸಕ ಎಂ.ಎಂ.ನಿಂಬರಗಿ, ಎನ್‌.ಎಸ್‌.ಎಸ್ ಅಧಿಕಾರಿ ಎ.ಎಂ.ಉಗಾರೆ, ಯೂಥ್ ರೆಡ್ ಕ್ರಾಸ್ ವಿಂಗ್ ಅಧಿಕಾರಿ ಆರ್‌.ಎಸ್‌.ಪೂಜಾರಿ, ಆರೋಗ್ಯ ನೀರೀಕ್ಷಣಾಧಿಕಾರಿ ಎಂ.ಬಿ.ಗೋಣಿ, ಶುಷ್ರುಷಾಧಿಕಾರಿಗಳಾದ ಎಸ್‌.ಎಮ್‌.ಶಿರಗುಪ್ಪಿ ಮತ್ತು ಎಸ್‌.ಆರ್‌.ಪಾಟೀಲ, ಡಾಟಾ ಆಪರೇಟರ್ ಪಿ.ಸಿ.ಮುಗತಿ ಹಲವರು ಇದ್ದರು. 

ಸುದ್ದಿ ಓದಿ