ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ : ಶಾಸಕ ಸವದಿ
ರಬಕವಿ-ಬನಹಟ್ಟಿ 24: ರಾಜ್ಯದಲ್ಲಿ ಕೋವಿಡ್ 19 ನ ಎರಡನೆಯ ಅಲೆ ವ್ಯಾಪಕವಾಗಿ ಹರಡುತಿದೆ. ಜನತೆ ಸರಕಾರ ಜಾರಿಗೆ ತಂದಿರುವ ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ, ಆರೋಗ್ಯವನ್ನು ಕಾಪಾಡಿಕೊಳ್ಳಬೇಕೆಂದು ಕೆ.ಎಚ್.ಡಿ.ಸಿ. ನಿಗಮದ ಅಧ್ಯಕ್ಷ ಹಾಗೂ ತೇರದಾಳ ಶಾಸಕ ಸಿದ್ದು ಸವದಿ ಹೇಳಿದರು.
ರಬಕವಿ-ಬನಹಟ್ಟಿ ತಾಲೂಕಿನ ತಹಶೀಲ್ದಾರ ಕಛೇರಿಯಲ್ಲಿ ನಡೆಸಿದ ಪತ್ರಿಕಾಗೋಷ್ಠಿ ಮಾತನಾಡಿದ ಶಾಸಕ ಸವದಿ, ರಬಕವಿ-ಬನಹಟ್ಟಿ ತಾಲೂಕಿನಲ್ಲಿ ಇಲ್ಲಿಯ ವರೆಗೆ 91 ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, 48 ಸೋಂಕಿತರು ಗುಣಮುಖರಾಗಿದ್ದು, 43 ಸೋಂಕಿತರು ಹೋಮ್ ಐಶೂಲೇಶನ್ನಲ್ಲಿದ್ದು, ಇರ್ವರು ಮೃತರಾಗಿದ್ದಾರೆ. ತಾಲೂಕಾಡಳಿತ ಶ್ರಮದ ಫಲವಾಗಿ ತಾಲೂಕಿನಲ್ಲಿ ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದಿದ್ದಾರೆ. ಸಾರ್ವಜನಿಕರು ಮಾಸ್ಕ್ ಧರಿಸುವುದು, ಸಾನಿಟೈಜರ್ ಬಳಕೆ ಹಾಗೂ ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಆರೋಗ್ಯ ಕಾಪಾಡಿಕೊಳ್ಳಬೇಕೆಂದರು.
ತಾಲೂಕಿನ ಸುಮಾರು 17 ಸಾವಿರಕ್ಕೂ ಅಧಿಕ ಜನರು ವ್ಯಾಕ್ಸಿನ್ ಪಡೆದುಕೊಂಡಿದ್ದು, ನಿತ್ಯ 200 ಜನರು ಕೋವಿಡ್ ಪರೀಕ್ಷೆಗೆಗೊಳಗಾಗುತ್ತಿದ್ದಾರೆ. ಮೇ ಒಂದರಿಂದ 18 ವರ್ಷ ಮೇಲ್ಪಟ್ಟವರು ವ್ಯಾಕ್ಸಿನ್ ಪಡೆಯಬಹುದಾಗಿದ್ದು, ಜಿಲ್ಲೆಯಲ್ಲಿ ವ್ಯಾಕ್ಸಿನ್ ಕೊರತೆಯಿಲ್ಲ ಎಂದು ಹೇಳಿದರು.
ರಬಕವಿ-ಬನಹಟ್ಟಿ ತಹಶೀಲ್ದಾರ ಸಂಜಯ ಇಂಗಳೆ ಮಾತನಾಡಿ, ಕೋವಿಡ್ ಹರಡುವಿಕೆಗೆ ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸರಕಾರದ ನಿಯಮಗಳನ್ನು ಪಾಲಿಸದವರಿಗೆ ಕ್ರಮಕೈಗೊಳ್ಳಲಾಗುದು. ಸಾರ್ವಜನಿಕರು ನಿಯಮಗಳಿಗೆ ಸ್ಪಂದಿಸಿದರೆ ಮಾತ್ರ ಕೋವಿಡ್ ತಡೆಗಟ್ಟಬಹುದು. ಸಾರ್ವಜನಿಕ ಕಾರ್ಯಕ್ರಮಗಳು, ಮದುವೆ ಮತ್ತಿತ್ತರ ಕಾರ್ಯಗಳಿಗೆ ಕೋವಿಡ್ ಮಾರ್ಗಸೂಚಿ ಷರತ್ತುಗಳನ್ನು ಪಾಲಿಸಬೇಕೆಂದು.
ಸಿಪಿಆಯ್ ಜೆ.ಕರುಣೇಶಗೌಡ, ರ-ಬ ನಗರಸಭೆ ಪೌರಾಯುಕ್ತ ಶ್ರೀನಿವಾಸ ಜಾಧವ, ಮಹಾಲಿಂಗಪುರ ಪುರಸಭಾ ಮುಖ್ಯಾಧಿಕಾರಿ ಹೆಚ್.ಎಸ್. ಚಿತ್ತರಗಿ, ಬನಹಟ್ಟಿ ಸಮುದಾಯ ಆರೋಗ್ಯಾಧಿಕಾರಿ ಡಾಽಽ ಎನ್. ಎಂ. ನದಾಫ, ಕಿರಿಯ ಆರೋಗ್ಯ ಸಹಾಯಕ ಅಪ್ಪಾಜಿ ಹೂಗಾರ, ಬನಹಟ್ಟಿ ಪಿಎಸ್ಆಯ್ ರವಿಕುಮಾರ ಧರ್ಮಟ್ಟಿ, ತೇರದಾಳ ವಿಜಯಕುಮಾರ ಕಾಂಬಳೆ, ಮಹಾಲಿಂಗಪುರ ಪಿಎಸ್ಆಯ್ ಆನಂದ ಆದಗೊಂಡ ಸೇರಿದಂತೆ ಕಂದಾಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು. 24 ಃಓಖಿ 1