ಇಂಡಿ

ಕೊರೊನಾ ಭೀತಿ ಸರಕಾರದ ಮಾರ್ಗಸೂಚಿ ಪಾಲಿಸಿ : ಬಿರಾದಾರ

ಕೊರೊನಾ ಭೀತಿ ಸರಕಾರದ ಮಾರ್ಗಸೂಚಿ ಪಾಲಿಸಿ : ಬಿರಾದಾರ

ಇಂಡಿ 17: ಜಿಲ್ಲೆಯಲ್ಲಿ ಕೊರೊನಾ ಎರಡನೇ ಅಲೆ ತೀವ್ರವಾಗಿ ಹರಡುತ್ತಿದ್ದು, ಜನರು ಜಾಗೃತರಾಗುವವರೆಗೂ ಕೊರೊನಾ ನಿಯಂತ್ರಣಕ್ಕೆ ಬರಲ್ಲ. ಸರಕಾರದ ಮಾರ್ಗಸೂಚಿಗಳನ್ನು ಪಾಲಿಸಿ ಜನತೆ ಮನೆಯಿಂದ ಹೊರಬರದೆ ಇದ್ದರೆ ಮಾತ್ರ ಕೊರೊನಾ ಹೊಡೆದೋಡಿಸಲು ಸಾಧ್ಯವಾಗುತ್ತದೆ ಎಂದು ಬಿಜೆಪಿ ರೈತಮೋರ್ಚಾ ಜಿಲ್ಲಾಧ್ಯಕ್ಷ ಕಾಸುಗೌಡ ಬಿರಾದಾರ ಹೇಳಿದರು. 

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈಗಾಗಲೇ ಜಿಲ್ಲೆಯಲ್ಲಿ ಸಾವಿರಾರು ಜನ ಈ ಕೊರೊನಾದಿಂದ ಪ್ರಾಣ ಕಳೆದುಕೊಂಡಿದ್ದಾರೆ. ಇಂಡಿ ತಾಲೂಕಿನಲ್ಲಿಯೂ ಸಹ ನೂರಾರು ಸಂಖ್ಯೆಯಲ್ಲಿ ಸಾವು-ನೋವು ಸಂಭವಿಸಿವೆ. ಹೀಗಾಗಿ ನಾವು ಜಾಗೃತವಾಗಬೇಕಿದೆ. ಮನೆಯಿಂದ ಸುಮ್ಮ-ಸುಮ್ಮನೆ ಹೊರಬರಲೇ ಬಾರದು ಅತೀ ಅವಶ್ಯವಿದ್ದಾಗ ಮಾತ್ರ ಹೊರಬರಬೇಕು, ಮಾಸ್ಕ್‌, ಸ್ಯಾನಿಟೈಜರ್, ಸಾಮಾಜಿಕ ಅಂತರ ಕಾಪಾಡಕೊಳ್ಳಬೇಕು. ನಮ್ಮ ನೆರೆಯ ರಾಷ್ಟ್ರ ಇಸ್ರೇಲ್‌ನಲ್ಲೂ ಸಾಕಷ್ಟು ಜನ ಕೊರೊನಾದಿಂದ ಸಾವೀಗೀಡಾದರು. ಆನ ಜಾಗೃತರಾಗಿ ಸ್ವಯಂ ಪ್ರೇರಿತವಾಗಿ ಹಿರಗಡೆ ಬರದಿದ್ದ ಕಾರಣ ಅಲ್ಲಿ ಈಗ ಕೊರೊನಾ ನಿರ್ಮೂಲನೆಯಾಗಿದೆ. ಅಲ್ಲಲಿನ ಜನ ಮಾಸ್ಕ್‌ ಇಲ್ಲದೆ ಈಗ ಬದುಕು ಸಾಗಿಸುತ್ತಿದ್ದಾರೆ. ಅವರಂತೆ ನಾವೂ ಜಾಗೃತರಾಗಬೇಕು. ಅಂಧಾಗ ಮಾತ್ರ ಕೊರೊನಾ ಹೊಡೆದೋಡಿಸಲು ಸಾಧ್ಯವಾಗುತ್ತದೆ ಎಂದರು. 

ಗ್ರಾಮೀಣ ಭಾಗದಲ್ಲಿ ಕೊರೊನಾ ವೇಗವಾಗಿ ಹಬ್ಬುತ್ತಿದೆ. ಬೆಂಗಳೂರು, ಮುಂಬೈ, ಪುಣೆಗಳಿಗೆ ದುಡಿಯಲು ಹೋದವರು ಗ್ರಾಮಕ್ಕೆ ಬಂದು ಮನೆಯಲ್ಲಿರದೆ ಹೊರಗಡೆ ಅಡ್ಡಾಡುತ್ತಿರುವುದರಿಂದಲೇ ಕೊರೊನಾ ಹೆಚ್ಚಿಗೆ ಹಬ್ಬುತ್ತಿದೆ. ಆರೋಗ್ಯ ಇಲಾಖೆ ಈ ಬಗ್ಗೆ ಕಾಳಜಿವಹಿಸಿ ಹೊರಗಡೆಯಿಂದ ಬಂದ ಜನರಿಗೆ ಕ್ವಾರಂಟೈನ್ ಮಾಡಿಸಬೇಕು ಎಂದು ಮನವಿ ಮಾಡಿದರು. 


ಸುದ್ದಿ ಓದಿ