ಕೋವಿಡ್ ಹೆಚ್ಚುವರಿ ಕಂಟೈನ್‍ಮೆಂಟ್‍ ಕ್ರಮಗಳ ಜಾರಿಗೆ ಬಿಬಿಎಂಪಿಗೆ ಸೂಚನೆ

ಕೋವಿಡ್ ಹೆಚ್ಚುವರಿ ಕಂಟೈನ್‍ಮೆಂಟ್‍ ಕ್ರಮಗಳ ಜಾರಿಗೆ ಬಿಬಿಎಂಪಿಗೆ ಸೂಚನೆ

  ಬೆಂಗಳೂರು, ಜೂನ್‍ 30 - ಸ್ಥಳೀಯ ಕೋವಿಡ್‍ ಪರಿಸ್ಥಿತಿ ಆಧರಿಸಿ ಹೆಚ್ಚುವರಿ ಕಂಟೈನ್‍ಮೆಂಟ್ ಕ್ರಮಗಳನ್ನು ಜಾರಿಗೊಳಿಸುವ ಅಧಿಕಾರವನ್ನು ಸರ್ಕಾರ ಬಿಬಿಎಂಪಿ ಮತ್ತು ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ನೀಡಿದೆ.
 ‘ನೆರೆ ರಾಜ್ಯಗಳಲ್ಲಿ ಕೋವಿಡ್‍ ಪ್ರಕರಣಗಳ ತೀವ್ರ ಏರಿಕೆ ಹಿನ್ನೆಲೆಯಲ್ಲಿ, ಸೂಕ್ಷ್ಮ ಕಂಟೈನ್‍ ಮೆಂಟ್ ಕ್ರಮಗಳ ಜಾರಿ ಸೇರಿದಂತೆ ಪರೀಕ್ಷೆಗಳ ಸಂಖ್ಯೆ ಮತ್ತು ಲಸಿಕೆ ನೀಡಿಕೆ ಅಧಿಕಗೊಳಿಸುವಂತೆ ಸ್ಥಳೀಯ ಆಡಳಿತಗಳಿಗೆ ಸೂಚಿಸಲಾಗಿದೆ.’ ಎಂದು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಎನ್‍ ಮಂಜುನಾಥ ಪ್ರಸಾದ್ ತಿಳಿಸಿದ್ದಾರೆ.
  ಕಂಟೈನ್‍ಮೆಂಟ್ ಕ್ರಮಗಳ ಜಾರಿಗೆ ಬಿಬಿಎಂಪಿ ಮುಖ್ಯ ಆಯುಕ್ತರು ಮತ್ತು ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿರುವ ಹೊರತಾಗಿಯೂ, ಗಡಿಗಳಲ್ಲಿ ಸದ್ಯದ ಮಾರ್ಗಸೂಚಿಗಳಂತೆ, ಕಟ್ಟುನಿಟ್ಟಿನ ನಿಗಾ ಕ್ರಮಗಳನ್ನು ಜಾರಿಗೊಳಿಸುವಂತೆ ಸೂಚಿಸಲಾಗಿದೆ

ಸುದ್ದಿ ಓದಿ