ಉದ್ಯೋಗ ಖಾತ್ರಿ ಯೋಜನೆಯ ಕೂಲಿಕಾರರಿಗೆ ಕೋವಿಡ್ ಲಸಿಕೆ
ಯಲಬುರ್ಗಾ 30: ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಕೂಲಿಗಾರರಿಗೆ ಸ್ಥಳದಲ್ಲೇ ಕೋವಿಡ್-19 ಲಸಿಕೆಯನ್ನು ನೀಡಲಾಯಿತು. ಈಗಾಗಲೇ 220 ಕೂಲಿಕಾರರು ಕಾರ್ಯನಿರ್ವಹಿಸುತ್ತಿದ್ದು, 150 ಜನರು ಸ್ಥಳದಲ್ಲಿಯೇ ಕೋವ್ಯಾಕ್ಸಿನ್ ಲಸಿಕೆಯನ್ನು ಪಡೆದರು.ತಾಲೂಕಿನ ಬೇವೂರು ಗ್ರಾಪಂ ವ್ಯಾಪ್ತಿಯಲ್ಲಿ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಕೂಲಿಕಾರರಿಗೆ ಕೋವಿಡ್ ಲಸಿಕೆಯನ್ನು ಬುಧವಾರ ದಿನ ನೀಡಲಾಯಿತು. ಉದ್ಯೋಗ ಹುಡುಕಿಕೊಂಡು ಗುಳೆ ಹೊಗದೇ ಸ್ಥಳೀಯವಾಗಿ ಗ್ರಾಮ ಪಂಚಾಯಿತಿಯನ್ನು ಸಂಪರ್ಕಿಸಿ ಎಂದು ಮನವಿ ಮಾಡಲಾಯಿತು.ತಾಪಂ ಪ್ರಭಾರಿ ಇಒ ಸೋಮಶೇಖರ ಬಿರಾದಾರ್ ಮಾತನಾಡಿ, “ಕೂಲಿ ಕೆಲಸಕ್ಕಿಂತ ದೇಹದ ಆರೋಗ್ಯ ಮುಖ್ಯವಾಗಿದ್ದು, ಗ್ರಾಮೀಣ ಭಾಗದಲ್ಲಿ ನರೇಗಾ ಯೋಜನೆಯಲ್ಲಿ ಕೆಲಸ ನಿರ್ವಹಿಸುವ ಕೂಲಿಕಾರರು ಪ್ರಮುಖ ಘಟ್ಟದಲ್ಲಿ ಬರುವುದರಿಂದ ಎಲ್ಲರೂ ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಂಡಲ್ಲಿ ಕೋವಿಡ್ನಿಂದ ಪಾರಾಗಬಹುದು” ಎಂದರು.
ತಾಲೂಕು ಪಂಚಾಯಿತಿ ನರೇಗಾ ಸಹಾಯಕ ಅಧಿಕಾರಿ ಬಸವರಾಜ ಬಡಿಗೇರ್, ಗ್ರಾಮ ಪಂಚಾಯಿತಿ ಪಿಡಿಒ ಗೋಣೆಪ್ಪ ಜಿರ್ಲಿ,ತಾಂತ್ರಿಕ ಸಹಾಯಕ ಸಂತೋಷ ನಂದಾಪೂರ, ಐಇಸಿ ಸಂಯೋಜಕ ಲಕ್ಷ್ಮಣ್ ಕೆರಳ್ಳಿ,ಆರೋಗ್ಯ ಅಧಿಕಾರಿಗಳು ಹಾಗೂ ಪಂಚಾಯಿತಿ ಆಡಳಿತ ಅಧಿಕಾರಿಗಳು ಸಿಬ್ಬಂದಿಗಳು ಇದ್ದರು.