ಅಂತರರಾಷ್ಟ್ರೀಯ

ಜಗತ್ತಿನಾದ್ಯಂತ 3 ಕೋಟಿ ಗಡಿ ದಾಟಿದ ಕೊರೊನಾ ಸೋಂಕು ಪ್ರಕರಣಗಳು

ಜಗತ್ತಿನಾದ್ಯಂತ  3 ಕೋಟಿ ಗಡಿ ದಾಟಿದ ಕೊರೊನಾ ಸೋಂಕು ಪ್ರಕರಣಗಳು

ವಾಷಿಂಗ್ಟನ್, ಸೆಪ್ಟೆಂಬರ್ 18: ಜಗತ್ತಿನಾದ್ಯಂತ   ದೃಢಪಟ್ಟ ಕೊರೊನಾ ವೈರಸ್  ಪ್ರಕರಣಗಳ ಸಂಖ್ಯೆ ಈಗ   ಮೂರು ಕೋಟಿ ಗಡಿ ದಾಟಿದೆ  ಎಂದು   ಅಮೆರಿಕದ ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ ಶುಕ್ರವಾರ ತಿಳಿಸಿವೆ 

ಕಳೆದ ವರ್ಷ ಚೈನಾದಲ್ಲಿ  ಕೋವಿಡ್  -19  ಸೋಂಕು  ಕಾಣಿಸಿಕೊಂಡ  ನಂತರ ಜಗತ್ತಿನಾದ್ಯಂತ  ಈವರೆಗೆ  9 ಲಕ್ಷದ 40 ಸಾವಿರ ಮಂದಿ  ಸೋಂಕಿನಿಂದ  ಮೃತಪಟ್ಟಿದ್ದಾರೆ. 

ಅಮೆರಿಕಾ, ಭಾರತ ಹಾಗೂ ಬ್ರಿಜೆಲ್ ದೇಶಗಳು  ಕೊರೊನಾ ಸಾಂಕ್ರಾಮಿಕದಿಂದ ತೀವ್ರ ತತ್ತರಗೊಂಡಿರುವ ದೇಶಗಳಾಗಿವೆ, ಐರೋಪ್ಯ ದೇಶಗಳಲ್ಲಿ ಸೋಂಕಿನ ಪ್ರಕರಣಗಳು ಮತ್ತೆ ಹೆಚ್ಚಳಗೊಂಡಿವೆ ಎಂದು ವರದಿ ಹೇಳಿದೆ.

ಉತ್ತರ ಗೋಳಾರ್ಧದ   ಹಲವು  ದೇಶಗಳಲ್ಲಿ ಚಳಿಗಾಲ ಸಮೀಪಿಸುತ್ತಿರುವಂತೆ  ಸಾಂಕ್ರಾಮಿಕ ರೋಗದ ಎರಡನೇ  ಅಲೆ  ಕಾಣಿಸಿಕೊಳ್ಳುತ್ತಿದೆ ಎಂದು  ಎಂದು ಬಿಬಿಸಿ ವರದಿ ತಿಳಿಸಿದೆ 

ಬ್ರಿಟನ್ ನಲ್ಲಿ  ಎರಡನೇ ಹಂತದ ಸೋಂಕು ಹರಡುವಿಕೆ  ನಿಯಂತ್ರಿಸಲು  ಅಲ್ಪಾವಧಿಯ  ಲಾಕ್ ಡೌನ್  ಸೇರಿದಂತೆ   ವ್ಯಾಪಕ ನಿರ್ಬಂಧ  ಕ್ರಮಗಳನ್ನು ಜಾರಿಗೊಳಿಸಲು ಪರಿಶೀಲಿಸುತ್ತಿದೆ.

ಸ್ಪೇನ್ ಹಾಗೂ ಫ್ರಾನ್ಸ್  ದೇಶಗಳಲ್ಲಿ ಇತ್ತೀಚಿನ ದಿನಗಳಲ್ಲಿ   ಕೋವಿಡ್  ಪ್ರಕರಣಗಳ ಸಂಖ್ಯೆ  ಹೆಚ್ಚಳ ಕಂಡಿವೆ

ಇಸ್ರೇಲ್ ನಲ್ಲಿ   ಶುಕ್ರವಾರದ ನಂತರ ಎರಡನೇ  ಸುತ್ತಿನ  ರಾಷ್ಟ್ರೀಯ  ಲಾಕ್ ಡೌನ್  ಜಾರಿಗೊಳಿಲು ಮುಂದಾಗಿದೆ.

ಅಮೆರಿಕಾ  ಕೊರೊನಾದಿಂದ ತೀವ್ರವಾಗಿ ನಲುಗಿದ್ದು 6.6 ದಶಲಕ್ಷ  ಸೋಂಕು ಪ್ರಕರಣಗಳು  ಪತ್ತೆಯಾಗಿದ್ದು,  ಸುಮಾರು 1, 97000 ಮಂದಿ ಮೃತಪಟ್ಟಿದ್ದಾರೆ.

ಜುಲೈ ತಿಂಗಳಿಗೆ ಹೋಲಿಸಿದರೆ  ನಿತ್ಯ ವರದಿಯಾಗುತ್ತಿರುವ ಹೊಸ ಸೋಂಕು ಪ್ರಕರಣಗಳ ಸಂಖ್ಯೆ ಇಳಿಕೆ ಪ್ರವೃತ್ತಿ ಕಂಡುಬಂದಿದೆ.

ಸುದ್ದಿ ಓದಿ