ಕೋವಿಡ್ 19 : ಒಂದೇ ದಿನ 23,239 ಪ್ರಕರಣ ದಾಖಲಿಸಿದ ರಷ್ಯಾ
ಮಾಸ್ಕೋ, ಜುಲೈ 26 ರಷ್ಯಾ ಕಳೆದ 24 ಗಂಟೆಗಳಲ್ಲಿ 23,239 ಕೋವಿಡ್ 19 ಪ್ರಕರಣಗಳನ್ನು ದಾಖಲಿಸಿದ್ದು, ಸೋಂಕಿನ ಒಟ್ಟು ಸಂಖ್ಯೆ 6,149,780 ಕ್ಕೆ ತಲುಪಿದೆ ಎಂದು ಫೆಡರಲ್ ಪ್ರತಿಕ್ರಿಯೆ ಕೇಂದ್ರ ಸೋಮವಾರ ತಿಳಿಸಿದೆ.
"ಕಳೆದ ದಿನದಲ್ಲಿ, 84 ರಷ್ಯಾದ ಪ್ರದೇಶಗಳಲ್ಲಿ 23,239 ಕೋವಿಡ ಪ್ರಕರಣಗಳು ದೃಢಪಟ್ಟಿದ್ದು, ಇದರಲ್ಲಿ 2,137 ಪ್ರಕರಣಗಳು ಕ್ಲಿನಿಕಲ್ ಲಕ್ಷಣಗಳನ್ನು ಹೊಂದಿಲ್ಲ" ಎಂದು ಕೇಂದ್ರ ಹೇಳಿದೆ.
ಸೋಂಕು ಹೆಚ್ಚಳದ ಪ್ರಮಾಣವು 0.38% ಕ್ಕೆ ಇಳಿದಿದೆ. 2,629 ದೈನಂದಿನ ಸೋಂಕುಗಳೊಂದಿಗೆ ಮಾಸ್ಕೋ ಅತಿ ಹೆಚ್ಚು ಹೊಸ ಪ್ರಕರಣಗಳನ್ನು ಹೊಂದಿದೆ,
ಕಳೆದ 24 ಗಂಟೆಯಲ್ಲಿ 727 ಹೊಸ ಸಾವುಗಳು ದಾಖಲಾಗಿದ್ದು, ಇದು ದೇಶದ ಒಟ್ಟು ಸಾವಿನ ಸಂಖ್ಯೆಯನ್ನು 154,601 ಕ್ಕೆ ಏರಿಸಿದೆ ಎಂದು ಪ್ರತಿಕ್ರಿಯೆ ಕೇಂದ್ರ ಮಾಹಿತಿ ನೀಡಿದೆ.
ಅದೇ 24 ಗಂಟೆಗಳಲ್ಲಿ, 16,200 ಕೋವಿಡ್ -19 ರೋಗಿಗಳು ದೇಶಾದ್ಯಂತದ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದು, ಗುಣಮುಖರಾದವರ ಸಂಖ್ಯೆ ಒಟ್ಟು 5,506,834 ಕ್ಕೆ ತಲುಪಿದೆ.