ಅಂತರರಾಷ್ಟ್ರೀಯ

ಕೋವಿಡ್ 19 : ಸೋಂಕು ಪ್ರಕರಣ ವಿಶ್ವಾದ್ಯಂತ 33 ದಶಲಕ್ಷಕ್ಕೆ ಏರಿಕೆ

ಕೋವಿಡ್ 19 : ಸೋಂಕು ಪ್ರಕರಣ ವಿಶ್ವಾದ್ಯಂತ 33 ದಶಲಕ್ಷಕ್ಕೆ ಏರಿಕೆ

ವಾಷಿಂಗ್ಟನ್, ಸೆ 28 : ವಿಶ್ವಾದ್ಯಂತ ಕೊರೋನಾವೈರಸ್ ಪ್ರಕರಣಗಳ ಸಂಖ್ಯೆ 33 ದಶಲಕ್ಷಕ್ಕೆ ಏರಿಕೆಯಾಗಿದೆ. ಸಾವುಗಳು 9,97,000 ಕ್ಕಿಂತ ಹೆಚ್ಚಾಗಿದೆ ಎಂದು ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ ತಿಳಿಸಿದೆ. ಒಟ್ಟು ಪ್ರಕರಣಗಳ ಸಂಖ್ಯೆ 33,081,725 ​​ಮತ್ತು ಸಾವುನೋವುಗಳು 997,777 ಕ್ಕೆ ಏರಿಯಾಗಿದೆ ಎಂದು ವಿಶ್ವವಿದ್ಯಾಲಯದ ನವೀಕೃತ ಅಂಕಿಅಂಶಗಳು ಬಹಿರಂಗಪಡಿಸಿದೆ.ಅಮೆರಿಕದಲ್ಲಿ ವಿಶ್ವದ ಅತಿ ಹೆಚ್ಚು ಪ್ರಕರಣಗಳು ಮತ್ತು ಸಾವುಗಳು ಸಂಭವಿಸಿದ್ದು, ಕ್ರಮವಾಗಿ 7,115,338 ಮತ್ತು 204,758ರಷ್ಟಿದೆ.

 ಭಾರತ ಎರಡನೇ ಸ್ಥಾನದಲ್ಲಿದ್ದು, 6,074,702 ಸೋಂಕು ಹಾಗೂ 95,542 ಸೋಂಕಿತರು ಮೃತಪಟ್ಟಿದ್ದಾರೆ. ಬ್ರೆಜಿಲ್ 4,732,309, ರಷ್ಯಾ 1,146,273, ಕೊಲಂಬಿಯಾ 813,056, ಪೆರು 800,142, ಮೆಕ್ಸಿಕೊ 730,317 ಮತ್ತು ಸ್ಪೇನ್ 716,481  ಪ್ರಕರಣಗಳನ್ನು ಹೊಂದಿವೆ. ಬ್ರೆಜಿಲ್ ಪ್ರಸ್ತುತ 141,741 ಸಾವುನೋವುಗಳೊಂದಿಗೆ ಎರಡನೇ ಸ್ಥಾನದಲ್ಲಿದೆ.

 20 ಸಾವಿರಕ್ಕಿಂತ ಹೆಚ್ಚಿನ ಸಾವಿನ ಸಂಖ್ಯೆ ಹೊಂದಿರುವ ದೇಶಗಳಲ್ಲಿ ಮೆಕ್ಸಿಕೊ 76,430, ಇಂಗ್ಲೆಂಡ್ 42,077, ಇಟಲಿ 35,835, ಪೆರು 32,142, ಫ್ರಾನ್ಸ್ 31,675, ಸ್ಪೇನ್ 31,232 ಮತ್ತು ಇರಾನ್ 25,589ರಷ್ಟು ಸಾವಿನ ಸಂಖ್ಯೆ ಹೊಂದಿವೆ.


ಸುದ್ದಿ ಓದಿ