ಕೋವಿಡ್ 19 : ದೇಶಾದ್ಯಂತ ಕಳೆದ 24 ಗಂಟೆಗಳಲ್ಲಿ 42,982 ಹೊಸ ಪ್ರಕರಣ, 533 ಸಾವು

ಕೋವಿಡ್ 19 : ದೇಶಾದ್ಯಂತ ಕಳೆದ 24 ಗಂಟೆಗಳಲ್ಲಿ 42,982 ಹೊಸ ಪ್ರಕರಣ, 533 ಸಾವು
  ನವದೆಹಲಿ, ಆಗಸ್ಟ್ 05  ದೇಶಾದ್ಯಂತ ಕಳೆದ 24 ಗಂಟೆಗಳಲ್ಲಿ 42,982 ಹೊಸ ಕೋವಿಡ್ -19 ಪ್ರಕರಣಗಳು ದಾಖಲಾಗಿದ್ದು, ಪ್ರಕರಣಗಳ ಸಂಖ್ಯೆ 3,18,12,114 ಕ್ಕೆ ತಲುಪಿದೆ.  533 ಮಂದಿ ಮೃತಪಟ್ಟಿದ್ದು, ಸಾವಿನ ಸಂಖ್ಯೆ 4,26,290 ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಗುರುವಾರ ತಿಳಿಸಿದೆ.
    ಸಚಿವಾಲಯದ ಪ್ರಕಾರ, ಸಕ್ರಿಯ ಪ್ರಕರಣಗಳು 723 ರಷ್ಟು ಹೆಚ್ಚಾಗಿದ್ದು, 4,11,076 ಕ್ಕೆ ತಲುಪಿದೆ. ಇದು ಪ್ರಸ್ತುತ ಒಟ್ಟು ಪ್ರಕರಣಗಳ ಶೇಕಡಾ 1.29 ರಷ್ಟಿದೆ. ಕಳೆದ 24 ಗಂಟೆಗಳಲ್ಲಿ 41,726 ಜನರು ವೈರಸ್‌ನಿಂದ ಚೇತರಿಸಿಕೊಂಡಿದ್ದು, ಒಟ್ಟು ಚೇತರಿಕೆಯ ಸಂಖ್ಯೆ 3,09,74,748 ಕ್ಕೆ ತಲುಪಿದೆ. ಇದು ಪ್ರಕರಣದ ಶೇಕಡಾ 97.37 ರಷ್ಟಿದ್ದು, ಸಾವಿನ ಪ್ರಮಾಣ ಶೇ 1.34 ರಷ್ಟಿದೆ.
    ಏತನ್ಮಧ್ಯೆ, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಐಸಿಎಂಆರ್ ಕೊರೋನಾ ಸೋಂಕು ಪತ್ತೆಗಾಗಿ ಇಲ್ಲಿಯವರೆಗೆ 47,48,93,363 ಮಾದರಿಗಳನ್ನು ಪರೀಕ್ಷಿಸಿದೆ. ಅದರಲ್ಲಿ ಬುಧವಾರ 16,64,030 ಮಾದಿರಗಳನ್ನು ಪರೀಕ್ಷಿಸಲಾಗಿದೆ.
    ಸೋಂಕು ನಿಯಂತ್ರಣಕ್ಕಾಗಿ ಇಲ್ಲಿಯವರೆಗೆ, 48,93,42,295 ಜನರಿಗೆ ಕೋವಿಡ್ 19 ಲಸಿಕೆಗಳನ್ನು ನೀಡಲಾಗಿದ್ದು, ಕಳೆದ 24 ಗಂಟೆಗಳಲ್ಲಿ 37,55,115 ಮಂದಿಗೆ ವೈರಸ್ ವಿರುದ್ಧ ಲಸಿಕೆ ಹಾಕಲಾಗಿದೆ.

ಸುದ್ದಿ ಓದಿ