ದೇಶದಲ್ಲಿ ಕೋವಿಡ್ ನ 39,361 ಹೊಸ ಪ್ರಕರಣಗಳು, 416 ಮಂದಿ ಸಾವು ವರದಿ

ನವದೆಹಲಿ, ಜುಲೈ 26 ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 39,361 ಹೊಸ ಕೋವಿಡ್  ಪ್ರಕರಣಗಳು ವರದಿಯಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 3,05,79,106 ಕ್ಕೆ ಏರಿದೆ.
 
ಇದೇ ಅವಧಿಯಲ್ಲಿ ಸೋಂಕಿನಿಂದ 416 ಮಂದಿ ಸಾವನ್ನಪ್ಪುವುದರೊಂದಿಗೆ ಒಟ್ಟು ಸಾವಿನ ಸಂಖ್ಯೆ 4,20,967 ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸೋಮವಾರ ತಿಳಿಸಿದೆ.
 
ಸಚಿವಾಲಯದ ಮಾಹಿತಿಯಂತೆ  ಸದ್ಯ, ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 4,11,189 ರಷ್ಟಿದ್ದು, ಇವು ಈವರೆಗೆ ದೃಢಪಟ್ಟ ಒಟ್ಟು ಪ್ರಕರಣಗಳ ಪೈಕಿ ಶೇ 1.31 ರಷ್ಟಾಗಿವೆ. ಪರೀಕ್ಷೆ ಪಾಸಿಟಿವಿಟಿ ಪ್ರಮಾಣ ಸತತ 35 ನೇ ದಿನವೂ ಕುಸಿದಿದ್ದು ಈಗ ಶೇ 3.41 ರಷ್ಟಿದೆ.
 
ಕಳೆದ 24 ಗಂಟೆಗಳಲ್ಲಿ 35,968 ಜನರು ಮಾರಣಾಂತಿಕ ಸೋಂಕಿನಿಂದ ಚೇತರಿಸಿಕೊಳ್ಳುವುದರೊಂದಿಗೆ ಈವರಗೆ ಗುಣಮುಖರಾದವರ ಸಂಖ್ಯೆ 3,05,79,106 ಕ್ಕೆ ಏರಿದೆ. ಇದರೊಂದಿಗೆ ಚೇತರಿಕೆ ಪ್ರಮಾಣ ಶೇ 97.35ಕ್ಕೆ ಏರಿದೆ.
 
ಈವರೆಗೆ ದೇಶದಲ್ಲಿ 43,51,96,001 ಕೋವಿಡ್ ಲಸಿಕೆ ಡೋಸ್ ಗಳನ್ನು ನೀಡಲಾಗಿದೆ.
 
ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಇನ್ನೂ ಬಳಕೆಯಾಗದ 3.29 ಕೋಟಿಗೂ ಹೆಚ್ಚು ಲಸಿಕೆ ಡೊಸ್‍ ಗಳು ಲಭ್ಯವಿವೆ.
 
ಕೇರಳದಲ್ಲಿ ನಿನ್ನೆ 17,466 ಪ್ರಕರಣಗಳು ಮತ್ತು 66 ಸಾವುಗಳು ವರದಿಯಾಗಿವೆ. ಈ ಮೂಲಕ ದೇಶದಲ್ಲಿ ಅತಿ ಹೆಚ್ಚು ಪ್ರಕರಣಗಳು ವರದಿಯಾದ ರಾಜ್ಯವೆನಿಸಿದೆ.
 
ಸುದ್ದಿ ಓದಿ