ಜಾಗತಿಕವಾಗಿ 4 ಕೋಟಿ ಸನಿಹಕ್ಕೆ ತಲುಪಿದ ಕರೋನ ಸೋಂಕು ಪ್ರಕರಣಗಳು
ವಾಷಿಂಗ್ಟನ್, ಅಕ್ಟೋಬರ್ 14 :ಜಗತ್ತಿನಾದ್ಯಂತ ಕರೋನ ಸೋಂಕು ಪ್ರಕರಣಗಳ ಸಂಖ್ಯೆ 3 ಕೋಟಿ 80 ಲಕ್ಷಕ್ಕೆ ಏರಿಕೆಯಾಗಿದೆ ಎಂದು ಅಮೆರಿಕದ ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ ಬುಧವಾರ ತಿಳಿಸಿದೆ.ಪ್ರಸ್ತುತ ಪ್ರಕರಣವು 38,041,143 ರಷ್ಟಿದ್ದು, 1,084,888 ಸಾವುಗಳು ಮತ್ತು ಈವರೆಗೆ 26,388,633 ಜನರು ಚೇತರಿಸಿಕೊಂಡಿದ್ದಾರೆ ಎಂದೂ ವಿಶ್ವವಿದ್ಯಾಲಯದ ಇತ್ತಿಚಿನ ವರದಿ ತಿಳಿಸಿದೆ.