ಕೊರೋನಾ ವಿರುದ್ಧದ ಹೋರಾಟಕ್ಕೆ ವ್ಯಾಪಾರಸ್ಥರಿಂದ ಸಹಕಾರ
ಇಂಡಿ 28: ಸರಕಾರ 14 ದಿನಗಳ ಕಾಲ ಜನತಾ ಕರ್್ಯೂ ಹೇರಿದ ಹಿನ್ನೆಲೆ ಇಂಡಿ ನಗರದಲ್ಲಿ ಬುಧವಾರ ವ್ಯಾಪಾರಸ್ಥರು ತಮ್ಮ ಅಂಗಡಿ-ಮುಂಗಟ್ಟುಗಳನ್ನು ಮುಚ್ಚಿ ಕೊರೋನಾ ವಿರುದ್ಧದ ಹೋರಾಟಕ್ಕೆ ಕೈ ಜೋಡಿಸಿದರು.
ಬೆಳಿಗ್ಗೆ 6:00 ಘಂಟೆಯಿಂದ 10ಘಂಟೆಯವರೆಗೆ ಅಗತ್ಯ ವಸ್ತುಗಳ ಮಾರಾಟಕ್ಕೆ ಅವಕಾಶ ನೀಡಲಾಗಿತ್ತು. ತರಕಾರಿ, ದಿನಸಿ, ಬೇಕರಿ, ಹಾಗೂ ಮದ್ಯದಂಗಡಿಗಳು ಮತ್ತು ಕೆಲ ಹೋಟೆಲ್ಗಳು ಬೆಳಿಗ್ಗೆ ತಮ್ಮ ಸೇವೆ ನೀಡಿದವು.
ನಗರದ ಅಗರಖೇಡ ರಸ್ತೆ, ವಿಜಯಪುರ ರಸ್ತೆ, ಸಿಂದಗಿ ರಸ್ತೆಗಳಲ್ಲಿ ತರಕಾರಿ, ಹಣ್ಣು-ಹಂಪಲು ವ್ಯಾಪಾರಸ್ಥರಿಗೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಸಾರ್ವಜನಿಕರು ಬೆಳಿಗ್ಗೆಯೇ ಅಗತ್ಯ ವಸ್ತುಗಳಿಗಾಗಿ ಮುಗಿಬಿದ್ದಿದ್ದರು.
ಬೆಳಿಗ್ಗೆ 10 ಘಂಟೆಯಿಂದ ಪೊಲೀಸರು ನಗರದ ವಿವಿಧ ರಸ್ತೆಗಳಲ್ಲಿ ಕಬ್ಬಿಣದ ಎಂಗಲ್ ಕಟ್ಟಿ ರಸ್ತೆ ಬಂದ್ ಮಾಡಿದರು. ವಿವಿಧ ವಾರ್ಡಗಳಿಂದ ಮುಖ್ಯ ರಸ್ತೆಗೆ ಕೂಡುವ ರಸ್ತೆಗಳನ್ನೂ ಬಂದ್ ಮಾಡಿದ್ದರು. ಆದರೂ ಸಾರ್ವಜನಿಕರು ನಗರದಲ್ಲಿ ಬೈಕ್ ಮೇಲೆ ಸುಖಾ ಸುಮ್ಮನೆ ತಿರುಗಾಡುತ್ತಿರುವುದು ಕಂಡು ಬಂದಿತು. ಕರ್್ಯೂ ಇದ್ರೂ ಕೆಲ ಖಾಸಗಿ ವಾಹನಗಳು ಅಡ್ಡಾಡುತ್ತಿದ್ದವು ಪೊಲೀಸರು ಅವುಗಳನ್ನು ತಡೆದು ವಿಚಾರಿಸಿ ಮತ್ತೆ ನಗರದಲ್ಲಿ ಅಡ್ಡಾಡದಂತೆ ತಿಳುವಳಿಕೆ ನೀಡಿದರು.
ನಗರದ ಹಲವು ಒಳ ರಸ್ತೆಗಳನ್ನು ಬಂದ್ ಮಾಡಲಾಗಿದೆ. ಅಗತ್ಯೆ ಸೇವೆಗಳಿಗೆ ಬೆಳಿಗ್ಗೆ 6ರಿಂದ 10 ಘಂಟೆಯವರೆಗೆ ಅವಕಾಶ ಕಲ್ಪಿಸಲಾಗಿದೆ. ಸಾರ್ವಜನಿಕರು ಅನವಶ್ಯಕವಾಗಿ ಮನೆಯಿಂದ ಹೊರಗಡೆ ಬರಬಾರದು. ಸರಕಾರ ನಿಮ್ಮ ಒಳಿತಿಗಾಗಿಯೇ ಕರ್್ಯೂ ಹೇರಿದೆ. ಅನಗತ್ಯವಾಗಿ ತಿರುಗಾಡಿ ಜೀವಹಾನಿ ಮಾಡಿಕೊಳ್ಳಬೇಡಿ.
ಭೀಮನಗೌಡ ಬಿರಾದಾರ
ಠಾಣಾಧಿಕಾರಿ, ಇಂಡಿ ನಗರ ಪೊಲೀಸ್ ಠಾಣೆ.
ಮೇ 12ರವರೆಗೆ ಸರಕಾರ ಜನತಾ ಕರ್್ಯೂ ಘೋಷಣೆ ಮಾಡಿದ್ದು ಸಾರ್ವಜನಿಕರು ಯಾರೂ ಹೊರಗಡೆ ಅಡ್ಡಾಡಬಾರದು. ಅಗತ್ಯ ವಸ್ತಗುಗಳಿಗೆ ಅವಕಾಶ ಕಲ್ಪಿಸಲಾಗಿದ್ದು ಮಾಸ್ಕ್ ಹಾಕಿಕೊಂಡು ಸಾಮಾಜಿಕ ಅಂತರ ಕಾಯ್ದುಕೊಂಡು ಅಗತ್ಯೆ ವಸ್ತು ಖರೀದಿಸಬೇಕು. ಪುರಸಭೆಯಿಂದ ನಗರದೆಲ್ಲೆಡೆ ಸ್ಯಾನಿಟೈಜರ್ ಸಿಂಪರಣೆ ಮಾಡುತ್ತಿದ್ದೇವೆ. ಮನೆಯಲ್ಲೇ ಇದ್ದು ಆರೋಗ್ಯ ರಕ್ಷಿಸಿಕೊಳ್ಳಿ. ಶೈಲಜಾ ಪೂಜಾರಿ ಪುರಸಭೆ ಅಧ್ಯಕ್ಷೆ ಇಂಡಿ.