ಕ್ಷತ್ರಿಯ ಒಳಪಂಗಡಗಳ ಕೊಡುಗೆ ಅಪಾರ : ತಾರಾ ಸಿಂಗ
ರಬಕವಿ-ಬನಹಟ್ಟಿ 15: ಸ್ವಾತಂತ್ರ ಪೂರ್ವದಲ್ಲಿ ಕ್ಷತ್ರೀಯ ಒಳಪಂಡಗಳು ಈ ದೇಶಕ್ಕೆ ಅಪಾರವಾದ ಕೊಡುಗೆ ನೀಡಿವೆ. ಕ್ಷಾತ್ರಧರ್ಮ ಪರಿಪಾಲನೆ ಮಾಡಿ, ದೇಶಕ್ಕೆ ಬಂದೊದಗಿದ ದ್ರೋಹಿಗಳನ್ನು ಸದೆ ಬಡೆದು, ಸ್ವಾತಂತ್ರ್ಯ ದೊರಕಿಸುವಲ್ಲಿ ಪ್ರಮುಖ ಪಾತ್ರವಹಿಸಿವೆ. ಇಂದು ಸಾಮಾಜಿಕ, ಅರ್ಥಿಕ ಹಾಗೂ ಶೈಕ್ಷಣಿಕವಾಗಿ ಪ್ರಬಲರಾಗಿರುವ ರಾಜ್ಯದ 36 ಕ್ಷತ್ರೀಯ ಒಳಪಂಗಡಗಳು ಒಂದಾದರೆ ಇನ್ನಷ್ಟು ಬಲಾಢ್ಯರಾಗಲು ಸಾಧ್ಯ ಎಂದು ಕರ್ನಾಟಕ ಕ್ಷತ್ರೀಯ ಒಕ್ಕೂಟದ ರಾಜ್ಯ ಸಂಚಾಲಕ ತಾರಾಸಿಂಗ ಹೇಳಿದರು.
ಬನಹಟ್ಟಿ ನಗರದ ವಿಠ್ಠಲ ಮಂದಿರದಲ್ಲಿ ನಡೆದ ಕ್ಷತ್ರೀಯ ಒಳಪಂಗಡಗಳ ಚಿಂತನಾ ಸಭೆಯಲ್ಲಿ ರಬಕವಿ-ಬನಹಟ್ಟಿ ತಾಲೂಕಿನ ಕ್ಷತ್ರೀಯ 14 ಒಳ ಪಂಗಡಗಳ ಪ್ರಮುಖರನ್ನುದ್ದೇಶಿಸಿ ಮಾತನಾಡಿದರು.
ಎಲ್ಲ ಬೇಧಗಳನ್ನು ಮರೆತು ಕ್ಷತ್ರೀಯ ಸಮುದಾಯದ ಒಳ ಪಂಗಡಗಳು ಒಂದಾಗಿ ನಮ್ಮ ಹಕ್ಕುಗಳನ್ನು ನಾವು ಪಡೆಯಬೇಕಾಗಿದೆ. ರಾಜ್ಯದಲ್ಲಿ ಕ್ಷತ್ರಿಯ ಸಮುದಾಯದ 36 ಒಳಪಂಗಡಗಳು ಸೇರಿ ಅಂದಾಜು 1 ಕೋಟಿ 50 ಲಕ್ಷ ಜನರಿದ್ದರೂ ಸರಕಾರದ ಯಾವುದೇ ಯೋಜನೆಗಳು ಸಿಗದೆ ಇರುವುದು ನೋವಿನ ಸಂಗತಿ. ಅಸಂಘಟಿತವಾಗಿರುವ ನಾವುಗಳು ಸಂಘಟಿತ ಶಕ್ತಿಯಾಗಿ ಹೊರಹೊಮ್ಮಬೇಕಿದೆ ಎಂದರು. ಕ್ಷತ್ರೀಯ ಒಳಪಂಗಡಗಳು ಒಗ್ಗಟ್ಟು ಪ್ರದರ್ಶಿಸಿದರೆ ಮುಂದೆ ರಾಜ್ಯದಲ್ಲಿಲ್ಲೊಂದು ಹೊಸ ಸಂಚಲನ ಮೂಡಿಸಬಹುದು. ಕ್ಷತ್ರೀಯ ಒಳಪಂಗಡಗಳ ಈಗಾಗಲೇ ಅನೇಕರು ಶಾಸಕರಿದ್ದು, ಮುಂದೆ ಇದಕ್ಕಿಂತಲೂ ಅಧಿಕ ಸಂಖ್ಯೆಯಲ್ಲಿ ಕ್ಷತ್ರೀಯ ಸಮುದಾಯಗಳ ನಾಯಕರನ್ನು ವಿಧಾನಸಭೆಯಲ್ಲಿ ಕಾಣಬಹುದಾಗಿದೆ. ಬರುವ ಡಿಸೆಂಬರ್ನಲ್ಲಿ ರಾಜ್ಯಮಟ್ಟದ ಬೃಹತ್ ಸಮಾವೇಶವನ್ನು ಬೆಂಗಳೂರಿನಲ್ಲಿ ಏರಿ್ಡಸಿ, ಕ್ಷತ್ರೀಯರ ಏಕತೆ ಪ್ರದರ್ಶನ ಮಾಡಲಾಗುತ್ತದೆ ಎಂದರು ಹೇಳಿದರು.
ರಾಜ್ಯ ಪದಾಧಿಕಾರಿಗಳಾದ ಶಿವಾನಂದ ಹಾಗೂ ಹನಮಂತ ದೊಡಮನಿ ಇದ್ದರು. ಸಭೆಯಲ್ಲಿ ಸದಾಶಿವ ಗೊಂದಕರ, ಲಕ್ಷ-್ಮಣ ನಾಯಿಕ, ಸತ್ಯವಾನ ಬಕರೆ ಅವರು ಮಾತನಾಡಿದರು.
ಸಭೆಯಲ್ಲಿ ಡಾ. ಶ್ರೀನಾಥ ಖಮಿತ್ಕರ, ಬಸಪ್ಪಾ ಗೋಪಾಲಿ, ರಾಜು ಪಾಟೀಲ, ಕುಮಾರ ಕದಮ, ಸುರೇಶ ಕೋಪರ್ಡೆ, ನಗರಸಭೆ ಚೇರಮನ್ ಸದಾಶಿವ ಪರೀಟ, ನಗರಸಭಾ ಸದಸ್ಯ ವಿಜಯ ಕಲಾಲ, ಯಮನಪ್ಪ ಗೋಸರವಾಡ, ಬಂಡು ಪೀಸೆ, ಮಾಧವಾನಂದ ಪ್ರಭು ಕೋಪರ್ಡೆ, ನಿಂಗರಾಜ ನಾಯಿಕ, ನಂದು ಗಾಯಕವಾಡ, ವಿಠ್ಠಲ ಕ್ಷತ್ರಿ, ಮಹಾದೇವ ಭಸ್ಮೆ, ಬಸವರಾಜ ನಾಯಿಕ, ಪರಶುರಾಮ ಕಾಖಂಡಕಿ, ವಿಜಯ ಕೋಪರ್ಡೆ, ಶ್ರೀಧರ ಪಾಸ್ತೆ, ಕಿಟ್ಟು ಗೊಂದಕರ, ಲಕ್ಕಪ್ಪ ಗುಡ್ಡಾಕಾರ, ದಾನಪ್ಪ ಭಸ್ಮೆ ಸೇರಿದಂತೆ ರಬಕವಿ-ಬನಹಟ್ಟಿ ತಾಲೂಕಿನ ನಾಮದೇವ ಶಿಂಪಿ, ಶ್ರೀರಾಮ ಕ್ಷತ್ರಿಯ, ಉಪ್ಪಾರ, ಮರಾಠಾ, ಗೋಂಧಳಿ, ಕಲಾಲ, ರಜಪೂತ, ಸಹಸ್ರಾರ್ಜುನ, ಗೌಳಿ, ಭಾವಸಾರ, ಬಂಜಾರ, ಸಮಾಜಗಳ ಮೂರಕ್ಕೂ ಅಧಿಕ ಪ್ರಮುಖರು ಉಪಸ್ಥಿತರಿದ್ದರು.