ಕುಷ್ಟಗಿ

ಪ್ರತಿಯೊಬ್ಬ ಪ್ರಜೆ ಆಧಾರ ಜೋಡಣೆಗೆ ಸಹಕರಿಸಿ: ದೇವರಾಜ ಪತ್ತಾರ

ಪ್ರತಿಯೊಬ್ಬ ಪ್ರಜೆ ಆಧಾರ ಜೋಡಣೆಗೆ ಸಹಕರಿಸಿ: ದೇವರಾಜ ಪತ್ತಾರ

ಕುಷ್ಟಗಿ 24: ಪ್ರತಿಯೊಬ್ಬ ಭಾರತೀಯ ಪ್ರಜೆ ಆಧಾರ ಜೋಡಣೆ ಮಾಡಲು ಅಗತ್ಯವಾದ ಮಾಹಿತಿಯನ್ನು ಮತದಾರರಿಗೆ ಮಾಹಿತಿ ನೀಡಲು ನಿರ್ದೇಶನ ನೀಡಿದೆ. ಅದರಂತೆ ಪ್ರತಿ ವಾರ್ಡನಲ್ಲಿರುವ ಮತದಾರರಿಗೆ ಮಾಹಿತಿ ನೀಡಿ ಆಧಾರ ಜೋಡಣೆಗೆ ಸಹಕರಿಸಬೇಕೆಂದು ನರೇಗಾ ಯೋಜನೆಯ ತಾಲೂಕ ಐಇಸಿ ಸಂಯೋಜಕ ದೇವರಾಜ ಪತ್ತಾರ ಸಲಹೆ ನೀಡಿದರು.  

ತಾಲೂಕಿನ ಬಿಜಕಲ್ ಗ್ರಾಮ ಪಂಚಾಯತಿಯಲ್ಲಿ ಬುಧವಾರ ಬೆಳಗ್ಗೆ ಏರಿ​‍್ಡಸಿದ್ದ ಮತದಾರರ ಗುರುತಿನ ಚೀಟಿಯೊಂದಿಗೆ ಆಧಾರ ಕಾರ್ಡ ಜೋಡಣೆಯ ಕುರಿತು ಮತದಾರರಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಭಾರತ ಚುನಾವಣಾ ಆಯೋಗವು ಪ್ರತಿ ಮತದಾರರು ತಮ್ಮ ಮತದಾನ ಗುರುತಿನ ಚೀಟಿಯೊಂದಿಗೆ ಆಧಾರ ಕಾರ್ಡ ಜೋಡಣೆಯನ್ನು ಮಾಡುವಂತೆ ನಿರ್ದೇಶನ ನೀಡಿರುವ ಹಿನ್ನೆಲೆಯಲ್ಲಿ ನಿಮ್ಮ ವಾರ್ಡನ ಬೂತ್   

ಮಟ್ಟದ ಅಧಿಕಾರಿಗಳು ನಿಮ್ಮ ಮನೆ ಬಾಗಿಲಿಗೆ ಬಂದಾಗ ನಿಮ್ಮ ಆಧಾರ ಕಾರ್ಡ ಮತ್ತು ಮತದಾರರ ಗುರುತಿನ ಚೀಟಿ ನೀಡುವಂತೆ ಹಾಜರಿದ್ದವರಿಗೆ ತಿಳಿಸಿದರು.   

ಚುನಾವಣಾ ಆಯೋಗವು ದೇಶದಾದ್ಯಂತ ಈ ಪ್ರಕ್ರಿಯೆಯನ್ನು ಜರುಗಿಸಿದ್ದು . ನರೇಗಾ ಯೋಜನೆಯ ಎಲ್ಲಾ ಕೂಲಿಕಾರರು ತಮ್ಮ ಆಧಾರ ಕಾರ್ಡ ಹಾಗು ಮತದಾನದ ಗುರುತಿನ ಚೀಟಿಯನ್ನು ಪಡೆದು ಗುಂಪಿನಲ್ಲಿರುವ ಎಲ್ಲಾ ಕೂಲಿಕಾರರ ಆಧಾರ ಜೊಡಣೆಯಾಗಬೇಕೆಂದು ತಿಳಿಸಲಾಯಿತು. ನಂತರ ಮೊಬೈಲ್ ಮೂಲಕ ಮತದಾನದ ಗುರುತಿನ ಚೀಟಿಯೊಂದಿಗೆ ಆಧಾರ ಕಾರ್ಡ ಜೋಡಣೆ ಕುರಿತು ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ನೀಡಲಾಯಿತು. ಇದೇ ಸಂದರ್ಭದಲ್ಲಿ 75 ಜನರ ಆಧಾರ ಜೋಡಣೆ ಮಾಡಲಾಯಿತು.  

ಈ ಸಂದರ್ಭದಲ್ಲಿ ಪಂಚಾಯತ ಅಭಿವೃದ್ದಿ ಅಧಿಕಾರಿ ನಾಗೇಶ್ ಅರಳಿಗನೂರು, ಕರವಸೂಲಿಗಾರ ಹನಮಂತಪ್ಪ ತಳವಾರ, ಗ್ರಾಮ ಕಾಯಕ ಮಿತ್ರರಾದ ಸ್ವಾತಿ ಮಾಲಿಪಾಟೀಲ್, ಕಂದಾಯ ಇಲಾಖೆಯ ವಾಲೀಕಾರ ಶರಣಪ್ಪ ಪಿಡ್ಡಪ್ಪನವರ, ಕಾಯಕ ಬಂಧುಗಳು, ಮತದಾರರು, ಸಂಜೀವಿನಿ ಯೋಜನೆಯ ಮಹಿಳೆಯರು ಹಾಜರಿದ್ದರು. 


ಸುದ್ದಿ ಓದಿ