ಎಲಬುರ್ಗ

ಕೆರೆಗೆ ತಡೆಗೋಡೆ ನಿರ್ಮಾಣ: ಅಭಿವೃದ್ದಿ ಅಧಿಕಾರಿ

ಕೆರೆಗೆ ತಡೆಗೋಡೆ ನಿರ್ಮಾಣ: ಅಭಿವೃದ್ದಿ ಅಧಿಕಾರಿ

ಯಲಬುರ್ಗಾ 23: ತಾಲೂಕಿನ ಗೆದಗೇರಿ ಗ್ರಾಪಂ ವ್ಯಾಪ್ತಿಗೆ ಒಳಪಡುವ ಹನಮಾಪೂರು ಗ್ರಾಮದಲ್ಲಿರುವ ಕೆರೆಗೆ ಅಡ್ಡಗೋಡೆ ನಿರ್ಮಿಸಿ, ಕೆರೆಯನ್ನು ಅಭಿವೃದ್ದಿಪಡಿಸಲಾಗುತ್ತಿದೆ ಎಂದು ಗ್ರಾಪಂ ಅಭಿವೃದ್ದಿ ಅಧಿಕಾರಿ ವೀರಭದ್ರಗೌಡ ಹೇಳಿದರು.

ಗ್ರಾಮದ ಕೆರೆಗೆ ಭೇಟಿ ನೀಡಿ ಗ್ರಾಮದ ಪ್ರಮುಖರ ಜತೆ ಚರ್ಚಿಸಿದ ನಂತರ ಮಾತನಾಡಿ, ಗ್ರಾಮದ ರಸ್ತೆ ಮಧ್ಯೆ ಇರುವ ಈ ಕೆರೆ ಅಭಿವೃದ್ದಿಗಾಗಿ ನಮ್ಮ ಗ್ರಾಪಂ ವತಿಯಿಂದ ಈಗಾಗಲೇ ಅಧಿಕಾರಿಗಳ ಜತೆ ಚರ್ಚಿಸಿದ್ದು, ಮುಂದಿನ ದಿನದಲ್ಲಿ ಕೆರೆಯನ್ನು ಹೂಳು ತಗೆದು, ಸುತ್ತ ತಡೆಗೊಡೆಯನ್ನು ನಿರ್ಮಿಸಿ ಗೋಕಟ್ಟೆ ನಿರ್ಮಿಸಲಾಗುತ್ತಿದೆ ಎಂದರು. 

ಈ ಸಂದರ್ಭದಲ್ಲಿ ಮುಖಂಡರಾದ ರುದ್ರಪ್ಪ ನಡುಲಮನಿ, ಸಿದ್ದಪ್ಪ ಮಸ್ಕಿ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

ಸುದ್ದಿ ಓದಿ