ರಾಜ್ಯ ಸರಕಾರವನ್ನು ಅಸ್ತಿರಗೊಳಿಸುವ ಕುತಂತ್ರ: ಆರೋಪ
ರಾಮದುರ್ಗ 19: ಮೈಸೂರ ನಗರ ಅಭಿವೃದ್ದಿ ಪ್ರಾಧಿಕಾರದ ನಿವೇಶನ ಹಂಚಿಕೆಯಲ್ಲಿ ಕ್ರಮಿನಲ್ ಪ್ರಕರಣ ದಾಖಲಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ರಾಜ್ಯಪಾಲರು ಶೋಕಾಸ ನೋಟಿಸ್ ನೀಡಿದ್ದು ರಾಜ್ಯ ಸರಕಾರವನ್ನು ಅಸ್ತಿರಗೊಳಿಸುವ ಕುತಂತ್ರ ಹಾಗೂ ರಾಜ್ಯಪಾಲರು ಬಿಜೆಪಿಯ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ ಎಂದು ಕರ್ನಾಟಕ ಪ್ರದೇಶ ಕುರುಬರ ಸಂಘದ ತಾಲೂಕ ಘಟಕದ ಅಧ್ಯಕ್ಷ ಪಡಿಯಪ್ಪ ಕ್ವಾರಿ ಆರೋಪಿಸಿದರು.
ರಾಮದುರ್ಗ ತಾಲೂಕ ವಿವಧ ಸಂಘಟನೆಗಳ ವೇದಿಕೆ ಪದಾಧಿಕಾರಿಗಳು ನಗರದ ಸಂಗೋಳ್ಳಿ ರಾಯಣ್ಣ ಸರ್ಕಲದಿಂದ ಪ್ರತಿಭಟನೆ ಮೆರವಣಿಗೆ ಪ್ರಾರಂಭಿಸಿ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮಿನಿ ವಿಧಾನಸೌಧದ ಮುಂದೆ ಸಮಾವೇಶಗೊಂಡ ಸಭೆಯಲ್ಲಿ ಮಾತನಾಡಿದ ಅವರು ರಾಜ್ಯಪಾಲರ ನಡೆಯು ಪ್ರಜಾಪ್ರಭತ್ವದ ವಿರೋಧವಾಗಿದ್ದು ಇದನ್ನು ರಾಮದುರ್ಗ ತಾಲೂಕ ವಿವಿಧ ಸಂಘಟನೆಗಳ ವೇದಿಕೆ ಪದಾಧಿಕಾರಿಗಳು ಖಂಡಿಸುತ್ತೆವೆ ಎಂದು ಹೇಳಿದರು.
ಸಿಪಿಐ್ಲಎಮ್ವ್ ಪಕ್ಷದ ಮುಖಂಡ ಗೈಬು ಜೈನೆಖಾನ ಮಾತನಾಡಿ ಜಾಖಂಡ. ತಮಿಳನಾಡ, ಪಶ್ಚಿಮ ಬಂಗಾಲ ಮತ್ತು ಕೇರಳ ರಾಜ್ಯ ಸರ್ಕಾರಗಳ ಹಗೆತನ ಸಾಧಿಸಲಿಕ್ಕೆ ಕೆಂದ್ರ ಸರ್ಕಾರ ಚುನಾಯಿತ ರಾಜ್ಯ ಸರಕಾರಗಳಿಗೆ ಸಂವಿಧಾನ ದಡಿಯಲ್ಲಿ ಸ್ವಾಯತತ್ತೆಗಳನ್ನು ಕಿತ್ತುಕೊಂಡು ರಾಜ್ಯ ಸರ್ಕಾವನ್ನು ಅತಂತ್ರ ಮಾಡುವ ದುರುದ್ದೇಶವಾಗಿದೆ ಎಂದು ಆರೋಪಿಸಿ, ಮುಡಾದಲ್ಲಿ ನಡದ ಬ್ರಷಾಚರದ ಬಗ್ಗೆ ತನಿಖೆಯಾಗಿಲಿ ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ, ಮಾನ್ಯ ರಾಜ್ಯಪಾಲರು ನೀಡಿದ ನೋಟಿಸ ವಾಪಾಸ ತಗೆದುಕೊಳ್ಳಬೇಕು ಎಂದು ಅವರು ಆಗ್ರಹಿಸಿದರು. ಕರ್ನಾಟಕ ಪ್ರದೇಶ ಕುರುಬರ ರಾಜ್ಯ ಸಂಘದ ನಿರ್ದೇಶಕ ಅಶೊಕ ಮೆಟಗುಡ್ಡ, ಕೆಂಪಣ್ಣಾ ಕ್ವಾರಿ, ನಾಗೇಶ ಚಂದರಗಿ, ಬಾಲನಗೌಡ ಪಾಟೀಲ, ಬಾಬು ಹುದ್ದಾರ, ಸಿದ್ದಪ್ಪ ಮಕ್ಕನ್ನವರ ಇದ್ದರು. ಹಾಗೂ ಇತರರು ಇದ್ದರು.