ಅಶೋಕ ಪಟ್ಟಣರ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ
ರಾಮದುರ್ಗ,22: ಶುದ್ದ ಹಸ್ತ ಮುಖ್ಯ ಮಂತ್ರಿ ಸಿದ್ದರಾಮಯ್ಯನವರ ವಿರುದ್ದ ರಾಜ್ಯಪಾಲರು ಪ್ರಾಸಿಕ್ಯೂಷನ್ ಶೋಕಾಸ ನೋಟಿಸ ನೀಡಿದ್ದನ್ನು ಹಿಂಪಡೆದುಕೋಳ್ಳಬೇಕೆಂದು ಒತ್ತಾಯಿಸಿ ವಿಧಾನ ಸಭೆ ಮುಖ್ಯ ಸಚೇತ ಹಾಗೂ ಶಾಸಕ ಅಶೋಕ ಪಟ್ಟಣರ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.
ಪಟ್ಟಣದ ತಾಲೂಕ ಪಂಚಾಯತ ಆವರಣದಿಂದಾ ಪ್ರಾರಂಭವಾದ ಪ್ರತಿಭಟನೆ ನಗರದ ಪ್ರಮಖ ಬೀದಿಗಳಲ್ಲಿ ಸಂಚರಿಸಿ ಕೇಂದ್ರ ಸರಕಾರದ ವಿರುದ್ದ ಘೋಷಣೆ ಕೂಗುತ್ತಾ ಮಿನಿ ವಿಧಾನಸೌಧದಲ್ಲಿ ಸಮಾವೇಶಗೊಂಡು ರಾಷ್ಟ್ರಪತಿಗಳಿಗೆ ತಹಶೀಲ್ದಾರ ಮುಖಾತಂರ ಮನವಿ ಸಲ್ಲಿಸಿ ಮಾತನಾಡಿದ ವಿಧಾನಸಭೆ ಮುಖ್ಯ ಸಚೇತಕ ಅಶೋಕ ಪಟ್ಟಣ, ಯಾವುದೇ ಕಪ್ಪು ಚುಕ್ಕೆ ಇಲ್ಲದ ಪ್ರಾಮಾಣಿಕ ಮುಖ್ಯಮಂತ್ರಿ ಸಿದ್ದರಾಮಯ್ಯರು ಉತ್ತಮ ಆಡಳಿತ ನೀಡಿ ಬಡವರ ಧೀನ ದಲಿತರ ಉದ್ದಾರಕ್ಕಾಗಿ ಶ್ರಮಿಸುತ್ತಿದ್ದಾರೆ, ರಾಜಕೀಯ ದ್ವೇಷಕ್ಕಾಗಿ ಸಂವಿಧಾನಿಕ ಹುದ್ದೆ ದುರುಪಯೋಗ ಪಡಿಸಿಕೋಳ್ಳುವುದು ಖಂಡನೀಯ. ಭ್ರಷ್ಟಾಚಾರ ತಡೆ ಕಾಯಿದೆಯನ್ನು ಸಹ ರಾಜ್ಯಪಾಲರು ಕಾನುನೂ ಬಾಹೀರವಾಗಿ ಪ್ರಾಸಿಕ್ಯೂಷನೆ ಅವಕಾಶ ನೀಡಿರುವುದು ಸಿದ್ದರಾಮಯ್ಯರಿಗೆ ಮಾಡಿದ ಘೋರ ಅನ್ಯಾವಾಗಿದೆ. ಗೌರವಾನ್ವಿತ ರಾಜ್ಯಪಾಲರ ಹುದ್ದೆಯನ್ನು ರಾಜಕೀಯ ದ್ವೇಷಕ್ಕಾಗಿ ಬಳಕೆ ಮಾಡುವುದು ರಾಜ್ಯದ ಜನತೆಗೆ ನೋವು ತಂದಿದೆ ಎಂದು ಆಕ್ರೋಷ ವ್ಯಕ್ತಪಡಿಸಿದರು.
ಬ್ಲಾಕ್ ಕಾಂಗ್ರಸ್ ಅಧ್ಯಕ್ಷ ಜಿ ಬಿ ರಂಗನಗೌಡ್ರ, ಮುಖಂಡರಾದ ಪ್ರದೀಪ ಪಟ್ಟಣ,ಸುರೇಶ ಪತ್ತೆಪೂರ, ಶೇಖರ ಸಿದ್ಲಿಂಗಪ್ಪನವರ, ಶೀವಯೋಗಿ ಚಿಕ್ಕೊಡಿ, ಜಹೂರ ಹಾಜಿ, ರಾಜು ಮಾನೆ, ರಾಮಣ್ಣಾ ಬೀಡಕಿ ಇತರರು ಇದ್ದರು.