ನಾವಲಗಿಯ ಕಾಂಗ್ರೆಸ್ನ ಕಾರ್ಯಕರ್ತರು ಬಿಜೆಪಿಗೆ ಸೇರೆ್ಡ
ರಬಕವಿ-ಬನಹಟ್ಟಿ : ತೇರದಾಳ ಮತಕ್ಷೇತ್ರದ ನಾವಲಗಿಯ ಕಾಂಗ್ರೆಸ್ನ ಅನೇಕ ಕಾರ್ಯಕರ್ತರು ಕಾಂಗ್ರೆಸ್ ತೊರೆದು ಶಾಸಕ ಸಿದ್ದು ಸವದಿ ನೇತೃತ್ವದಲ್ಲಿ ಬಿಜೆಪಿ ಪಕ್ಷವನ್ನು ಬನಹಟ್ಟಿಯ ಬಿಜೆಪಿ ಕಾರ್ಯಾಲಯದಲ್ಲಿ ಸೇರೆ್ಡಗೊಂಡರು.
ಬಿಜೆಪಿ ಅಭ್ಯರ್ಥಿ, ಶಾಸಕ ಸಿದ್ದು ಸವದಿ ಮಾತನಾಡಿ, ಪಕ್ಷದ ತತ್ವ ಸಿದ್ಧಾಂತಗಳನ್ನು ಒಪ್ಪಿ ಹಲವಾರು ಪಕ್ಷಗಳಿಂದ ಜನ ಆಗಮಿಸುತ್ತಿದ್ದು, ಅವರಿಗೆ ಸ್ವಾಗತ ಕೋರುತ್ತೇನೆ. ಪಕ್ಷದ ಏಳ್ಗೆಗೆ ಕಾರ್ಯಕರ್ತರೇ ಜೀವಾಳವಾಗಿದ್ದು, ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ಪ್ರಾಮಾಣಿಕತೆಯಿಂದ ಕೆಲಸ ಮಾಡಿ, ಮುಂದೊಂದು ದಿನ ತಮಗೆ ಇದರ ಪ್ರತಿಫಲ ಸಿಕ್ಕೆ ಸಿಗುತ್ತದೆ ಎಂದರು.
ನಾವಲಗಿಯ ಯಲ್ಲಪ್ಪ ತಮ್ಮಪ್ಪಗೋಳ, ತುಕ್ಕಪ್ಪ ಅಮ್ಮಜಿಗೋಳ, ಬಾಬು ಬರಗಲ್, ಎಲ್ಲಪ್ಪ ಹೆಗ್ಗಪ್ಪಗೋಳ, ಪುಂಡಲಿಕ ಅಮ್ಮಜಿಗೋಳ, ನಾಗಪ್ಪ ಕೆಮಕೇರಿ, ದೇವೇಂದ್ರ ರಗಪಗೋಳ, ಶಿವಪ್ಪ ನಿಂಗಾಪುರ, ಮಾರುತಿ ಕುದುರಿ, ಅಡವೆಪ್ಪ ಹಗ್ಗದವರ, ಮುದಕಪ್ಪ ಕುದರಿ, ಸಂತೋಷ ಚನ್ನಳ, ಹನುಮಂತ ನಿಂಗಪುರ, ಪರಸಪ್ಪ ಗುಡ್ಲಮನಿ ಪಕ್ಷಕ್ಕೆ ಸೇರೆ್ಡಗೊಂಡರು. ಈ ವೇಳೆ ತೇರದಾಳ ಮತಕ್ಷೇತ್ರದ ಉಸ್ತುವಾರಿ ಹರಿಯಾಣದ ಕುರುಕ್ಷೇತ್ರ ಸಂಸದ ಯುವರಾಜ್ ನಯಾಬ್ ಸಿಂಗ್, ಆನಂದ ಕಂಪು ಸೇರಿದಂತೆ ಅನೇಕರು ಇದ್ದರು.