ಅಧಿವೇಶನ ಸಮಯ ವ್ಯರ್ಥ ಮಾಡಿದ ಕಾಂಗ್ರೆಸ್: ಶಾಸಕ ಲಮಾಣಿ
ಶಿರಹಟ್ಟಿ 25: ಹಿಜಾಬ್ ವಿಷಯವನ್ನು ತೆಗೆದುಕೊಂಡು ವಿಧಾನ ಮಂಡಲದ ಉಭಯ ಸದನಗಳ ಅಧಿವೇಶನದ ಸಮಯವನ್ನು ಕಾಂಗ್ರೆಸ್ ಪಕ್ಷ ವ್ಯರ್ಥ ಮಾಡಿದ್ದರ ವಿರುದ್ಧ ಶಿರಹಟ್ಟಿ ಭಾರತೀಯ ಜನತಾ ಪಾರ್ಟಿ ವತಿಯಿಂದ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡುತ್ತಾ, ಕಾಂಗ್ರೆಸ್ ಪಕ್ಷದವರು ಅಧಿಕಾರವಿಲ್ಲದ್ದರಿಂದ ಹತಾಶರಾಗಿದ್ದಾರೆ. ಹಿಜಾಬ್, ರಾಷ್ಟ್ರಧ್ವಜ ಹಾಗೂ ಶಿವಮೊಗ್ಗದ ಹರ್ಷನ ಕೊಲೆ ಪ್ರಕರಣದ ಬಗ್ಗೆ ಸದನಗಳಲ್ಲಿ ಗದ್ದಲ ಎಬ್ಬಿಸಿ ಸದನವನ್ನು ಹಾಳು ಗೇಡವಿ, ರಾಜ್ಯದ ಅಭಿವೃದ್ದಿಯ ಕುರಿತು ಸದನಗಳಲ್ಲಿ ಚರ್ಚಿಸಲು ಅವಕಾಶ ಮಾಡದೇ, ಗೂಂಡಾ ವರ್ತನೆ ತೋರಿ ಅಧಿವೇಶನವನ್ನು ಮೊಟಕುಗೊಳಿಸುವಂತೆ ಹೀನ ಮಾಡಿದ್ದಾರೆ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಭೀಮಸಿಂಗ್ ರಾಠೋಡ್, ತಾಲೂಕಾ ಬಿಜೆಪಿ ಅಧ್ಯಕ್ಷ ಫಕ್ಕೀರೇಶ ರಟ್ಟಿಹಳ್ಳಿ, ಕಾರ್ಯದರ್ಶಿ ಪ್ರವೀಣಗೌಡ ಪಾಟೀಲ, ಮಹೇಶ ಲಮಾಣಿ, ನಾಗರಾಜ ಲಕ್ಕುಂಡಿ, ರಾಮಣ್ಣ ಡಂಬಳ, ಸಂದೀಪ ಕಪ್ಪತ್ತನವರ, ಜಾನು ಲಮಾಣಿ, ತಿಪ್ಪಣ್ಣ ಕೊಂಚಿಗೇರಿ, ವೀರುಪಾಕ್ಷ ಅಣ್ಣಿಗೇರಿ, ತಿಮ್ಮರಡ್ಡಿ ಮರಡ್ಡಿ, ಅಕ್ಬರ್ ಯಾದಗಿರಿ, ಮೋಹನ್ ಗುತ್ತೆಮ್ಮನವರ, ನಾಗರಾಜ ಕುಲಕರ್ಣಿ, ಮಹದೇವ ಗಾಣಿಗೇರ, ಗಂಗಾಧರ ಮೆಣಸಿನಕಾಯಿ, ಪರಶುರಾಮ ಡೊಂಕಬಳ್ಳಿ, ಶ್ರೀನಿವಾಸ ಬಾರಬಾರ್, ಯಲ್ಲಪ್ಪ ಇಂಗಳಗಿ ಸೇರಿದಂತೆ ಅನೇಕ ಕಾರ್ಯಕರ್ತರು ಹಾಜರಿದ್ದರು.