ರಬಾಕಾವಿಬನಹಟ್ಟಿ

ಡಾ. ದಡ್ಡೆನ್ನವರಿಗೆ ಕಾಂಗ್ರೆಸ್ ಟಿಕೆಟ್ ನೀಡಲು ಹಟಗಾರ ಶ್ರೀಗಳ ಒತ್ತಾಯ

ಡಾ. ದಡ್ಡೆನ್ನವರಿಗೆ ಕಾಂಗ್ರೆಸ್ ಟಿಕೆಟ್ ನೀಡಲು ಹಟಗಾರ ಶ್ರೀಗಳ ಒತ್ತಾಯ

ರಬಕವಿ-ಬನಹಟ್ಟಿ : ಕರ್ನಾಟಕ ರಾಜ್ಯದಲ್ಲಿ ನೇಕಾರಿಕೆ ವೃತ್ತಿಯನ್ನು ನಂಬಿ ಬದುಕುವ ಲಿಂಗಾಯತ ಹಟಗಾರ ನೇಕಾರ ಸಮಾಜಕ್ಕೆ  ಕಾಂಗ್ರೆಸ್ ಹೆಚ್ಚಿನ ಆದ್ಯತೆ ನೀಡಬೇಕು. ಈ ಸಲ ತೇರದಾಳ ಕ್ಷೇತ್ರದಲ್ಲಿ ನೇಕಾರ ಸಮುದಾಯದ ಕಾಂಗ್ರೆಸ್ ಪಕ್ಷದ ಡಾ.ದಡ್ಡೆನ್ನವರಿಗೆ ಟಿಕೆಟ್ ನೀಡಬೇಕೆಂದು ಮೈಂದರಗಿಯ ಗುರು ಹಿರೇಮಠದ ಪರಮಪೂಜ್ಯ ಅಭಿನವ ರೇವಣಸಿದ್ದ ಪಟ್ಟದ್ದೇವರ ಮಹಾಸ್ವಾಮಿಗಳು ಹೇಳಿದರು.

ಬೆಂಗಳೂರಿನ ಪ್ರೆಸ್ ಕ್ಲಬ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಾಗಲಕೋಟೆ ಜಿಲ್ಲೆಯ ರಬಕವಿ- ಬನಹಟ್ಟಿ ತಾಲೂಕಿನ ತೇರದಾಳ ಮತಕ್ಷೇತ್ರದಲ್ಲಿ ಅತಿ ಹೆಚ್ಚು ನೇಕಾರ ಹೊಂದಿರುವ ಕ್ಷೇತ್ರ ಅದರಲ್ಲಿ ಲಿಂಗಾಯತ ಹಟಗಾರ ನೇಕಾರ  ಸಮಾಜದ ಜನರು ಬಹುಸಂಖ್ಯಾತರಿದ್ದು  ರಾಜಕೀಯದಲ್ಲಿ ಪ್ರಾತಿನಿಧ್ಯ ನೀಡಬೇಕು. ತೇರದಾಳ ಮತಕ್ಷೇತ್ರದಲ್ಲಿ ಲಿಂಗಾಯತ ಹಟಗಾರ ನೇಕಾರರು ಸುಮಾರು 60 ಸಾವಿರಕ್ಕೂ ಹೆಚ್ಚು ಮತಗಳಿರುವುದರಿಂದ 2023 ರ ವಿಧಾನ ಸಭಾ ಚುನಾವಣೆಯಲ್ಲಿ  ಡಾ. ಎಂ.ಎಸ್. ದಡ್ಡೇನವರ ಅವರಿಗೆ ತೇರದಾಳ ಮತಕ್ಷೇತ್ರದ ಕಾಂಗ್ರೆಸ್ ಪಕ್ಷದ  ಟಿಕೆಟ್ ನೀಡಲೇಬೇಕು. ಸಮಾಜದಲ್ಲಿ ಹಾಗೂ ಸಂಘ-ಸಂಸ್ಥೆಗಳಲ್ಲಿ ಅನೇಕ ಸಮಾಜಮುಖಿ ಕಾರ್ಯಗಳನ್ನು ಮಾಡಿರುವ ಡಾ. ದಡ್ಡನ್ನವರಿಗೆ ಟಿಕೆಟ್ ನೀಡಿದರೆ ಸಮುದಾಯದವರು ಒಗ್ಗಟ್ಟಾಗಿ ಅಭ್ಯರ್ಥಿಯನ್ನು ಗೆದ್ದೇ ಗೆಲ್ಲಿಸುತ್ತೇವೆೆ ಎಂದರು. 

ಮೈಂದರಗಿಯ ವಿರಕ್ತಮಠದ ನಿ.ಪ್ರ.ಸ್ವ. ಮೃತುಂಜಯ ಮಹಾಸ್ವಾಮಿಗಳು, ಬಾಗಲಕೋಟೆ ನೀರಲಕೇರಿ ಸಿದ್ದಾರೂಢ ಮಠದ ಘನಲಿಂಗ ಮಹಾಸ್ವಾಮೀಜಿಗಳು ಹಾಗೂ ಹಟಗಾರ ಸಮಾಜದ ಹಿರಿಯರಾದ ಡಾ. ಪಂಡಿತ ಪಟ್ಟಣ, ಚಂದ್ರಶೇಖರ ಶಿವಪೂಜಿ, ಮಲ್ಲಪ್ಪ ಭಾವಿಕಟ್ಟಿ, ಶಂಕರ ಜಾಲಿಗಿಡದ ಸೇರಿದಂತೆ ಅನೇಕ ಮುಖಂಡರು ಭಾಗವಹಿಸಿದ್ದರು 

ಸುದ್ದಿ ಓದಿ