ಮಹಲಿಂಗಪುರ

ಕಾಂಗ್ರೆಸ್ ಹಿರಿಯ ಧುರೀಣರಿಂದ ಕೊರೊನಾ ನಿಧಿಗೆ 1ಲಕ್ಷ ರೂ ದೇಣಿಗೆ

ಕಾಂಗ್ರೆಸ್ ಹಿರಿಯ ಧುರೀಣರಿಂದ ಕೊರೊನಾ ನಿಧಿಗೆ 1ಲಕ್ಷ ರೂ ದೇಣಿಗೆ

ಮಹಾಲಿಂಗಪುರ 12: ತೇರದಾಳ ಮತ ಕ್ಷೇತ್ರದ ಕಾಂಗ್ರೆಸ್ ಮುಖಂಡ ಸ್ಥಳೀಯ ನಿವಾಸಿ ಡಾ. ಎ. ಆರ್‌. ಬೆಳಗಲಿಯವರು ಕೆಪಿಸಿಸಿ ಕಾರ್ಯಧ್ಯಕ್ಷ ಸತೀಶ ಜಾರಕಿಹೊಳಿ ಅವರನ್ನು ಭೇಟಿ ಮಾಡಿ ಕೊರೊನಾ ನಿಧಿಗೆ 1ಲಕ್ಷ ರೂ.ಗಳ ಚೆಕ್ ನೀಡಿ ಓದಾರ್ಯ ಮೆರೆದರು. 

ದೇಣಿಗೆ ಸ್ವೀಕರಿಸಿ ಮಾತನಾಡಿದ ಸತೀಶ ಜಾರಕಿಹೊಳಿ ರಾಜ್ಯಾದ್ಯಂತ ಬಡವರು, ಮಧ್ಯಮ ಸ್ತರು, ಕೊರೊನಾ ಕಾಯಿಲೆಯಿಂದ ಬಹಳ ಸಂಕಷ್ಟಕ್ಕೆ ಒಳಗಾಗಿ ಬದುಕು ಸಾಗಿಸುವುದು ಕಷ್ಟಕರವಾಗಿದೆ. ಇಂಥ ಸಮಯದಲ್ಲಿ ಅವರ ನೆರವಿಗೆ ಸಹಕಾರ ನೀಡುತ್ತಿರುವ ಡಾ. ಬೆಳಗಲಿಯವರ ಕಾರ್ಯ ಮೆಚ್ಚುವಂತಹದ್ದಾಗಿದೆ ಎಂದರು. 

ಕೆಪಿಸಿಸಿ ರಾಜ್ಯ ಒಬಿಸಿ ಘಟಕದ ಉಪಾಧ್ಯಕ್ಷ ಬಸವರಾಜ ಕೊಕಟನೂರ, ಯೂಥ್ ಕಾಂಗ್ರೆಸ್ ಉಪಾಧ್ಯಕ್ಯ ಯಶವಂತ ಮಂಜರಿ, ಬರಮು ಉಳ್ಳಾಗಡ್ಡಿ, ಸಂಗಮೇಶ ಮುಧೋಳ, ಶ್ರೀಶೈಲ ಉಳ್ಳಾಗಡ್ಡಿ, ಚಂದ್ರಶೇಖರ ಕುರಿ, ಶಂಕರ ಕೆಸರಗೊಪ್ಪ, ಅರುಣ ಗಾಣಿಗೇರ, ಮಹಾಲಿಂಗ ಅಂಬಿಗೇರ ಇತರ ಮುಖಂಡರು ಉಪಸ್ಥಿತರಿದ್ದರು. 


ಸುದ್ದಿ ಓದಿ