ಎಲಬುರ್ಗ

ಅವನತಿ ಹಾದಿಯಲ್ಲಿ ಕಾಂಗ್ರೆಸ್ ಪಕ್ಷ: ಸಂಗಪ್ಪ ಬಂಡಿ

ಅವನತಿ ಹಾದಿಯಲ್ಲಿ ಕಾಂಗ್ರೆಸ್ ಪಕ್ಷ: ಸಂಗಪ್ಪ ಬಂಡಿ

ಯಲಬುರ್ಗಾ 03: ದೇಶಾದ್ಯಂತ ಈಗಾಗಲೇ ಕಾಂಗ್ರೆಸ್ ಪಕ್ಷ ಕೋಮಾಸ್ಥಿತಿ ತಲುಪಿದ್ದು ಕರ್ನಾಟಕದಲ್ಲಿ ಮಾತ್ರ ಒಂದಿಷ್ಟು ಜೀವ ಹಿಡಿದಿದ್ದು ಈಗ ಕಾಂಗ್ರೆಸ್‌ನಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆ.ಪಿ.ಸಿ.ಸಿ. ಅಧ್ಯಕ್ಷ ಡಿ.ಕೆ. ಶಿವಕುಮಾರ ನಡುವೆ ಬಿಡಿಸಲಾರದಷ್ಟು ಕಂದಕ ಉಂಟಾಗಿದ್ದು, ಹೀಗಾಗಿ ರಾಜ್ಯದಲ್ಲಿ ಕಾಂಗ್ರೇಸ್ ಪಕ್ಷ ಅವನತಿಯ ಹಾದಿಯಲ್ಲಿ ಸಾಗಿದೆ ಎಂದು ಮಾಜಿ ತಾಲೂಕ ಪಂಚಾಯತಿ ಅಧ್ಯಕ್ಷ ಸಂಗಪ್ಪ ಬಂಡಿ ತಿಳಿಸಿದ್ದಾರೆ.  

ಅವರು ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ. ಕರ್ನಾಟಕ ರಾಜ್ಯದಲ್ಲಿ ಬಿ.ಜೆ.ಪಿ. ಸರ್ಕಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರವರ ಸಾರರ್ಥ್ಯದಲ್ಲಿ ಜನಪರ, ಜೀವಪರ, ಅಭಿವೃದ್ಧಿಪರ, ಕಾರ್ಯಗಳ ಮೂಲಕ ಜನ ಮಾನಸದಲ್ಲಿ ಅಚ್ಚಳಿಯ ಛಾಪು ಮೂಡಿಸಿದ್ದು, ಮುಂಬರುವ 2023ರ ವಿಧನಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಪಕ್ಷ ದೂಳಿಪಟವಾಗಿ ಮಗದೊಮ್ಮೆ ಬಿ.ಜೆ.ಪಿ. ಒಂದನೂರ ಐವತ್ತು ಸ್ಥಾನಗಳನ್ನು ಗಳಿಸುವುದು ಶತ ಸಿದ್ಧವಾಗಿದ್ದು, ಹೀಗಾಗಿ ಕಾಂಗ್ರೇಸ್ ನವರು ಅಧಿಕಾರದ ಹಪ-ಹಪಿಸುತ್ತಾ ಸರ್ಕಾರದ ಮೇಲೆ ಹಲವಾರು ಸುಳ್ಳು ಮತ್ತು ಆಧಾರ ರಹಿತ ಆಪಾದನೆಗಳನ್ನು ಮಾಡುವ ಮೂಲಕ ಜನರನ್ನು ದಿಕ್ಕು ತಪ್ಪಿಸುವ ಕಾರ್ಯದಲ್ಲಿ ತೊಡಗದ್ದು, ಆದರೆ ಕರ್ನಾಟಕದ ಪ್ರಜ್ಞಾವಂತ ಪತದಾರ ಪ್ರಭು ಕಾಂಗ್ರೆಸ್‌ನವರ ಬೂಟಾಟಿಕೆ ರಾಜಕಾರಣವನ್ನು ತಿರಸ್ಕರಿಸಿ ಮತ್ತೊಮ್ಮೆ ಮೋದಿ ಮತ್ತು ಬೊಮ್ಮಾಯಿ ರವರ ಜನಪರ ಆಡಳಿತಕ್ಕೆ ಮೆಚ್ಚಿ ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜೆ.ಡಿ.ಎಸ್‌. ತಿರಸ್ಕರಿಸಿ ಬಿ.ಜೆ.ಪಿ.ಗೆ 2023ರ ವಿಧನಸಭಾ ಚುನಾವಣೆಯಲ್ಲಿ ಬಿ.ಜೆ.ಪಿ.ಯನ್ನು ಅಧಿಕಾರಕ್ಕೆ ತರುವುದು ಶತ ಸಿದ್ಧ ಎಂದು ಮಾಜಿ ತಾ.ಪಂ. ಅಧ್ಯಕ್ಷರ ಸಂಗಪ್ಪ ಶಿವಪ್ಪ ಬಂಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 


ಸುದ್ದಿ ಓದಿ