ಕಾಂಗ್ರೆಸ್ ಯುವ ಮುಖಂಡ, ಆನಂದ ಉಳ್ಳಾಗಡ್ಡಿ, ತೊಂಡಿಹಾಳ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ
ಯಲಬುರ್ಗಾ 02: ಕಾಂಗ್ರೆಸ್ ಯುವ ಮುಖಂಡ ಹಾಗೂ ವಕೀಲರಾದ ಆನಂದ ಉಳ್ಳಾಗಡ್ಡಿ ಅವರು ತಾಲೂಕಿನ ತೊಂಡಿಹಾಳ ಗ್ರಾಮದಲ್ಲಿ ಶನಿವಾರ ಗ್ರಾಮ ವಾಸ್ತವ್ಯ ಮಾಡಿ ಜನ ಸೇವೆಯೇ ಜನಾರ್ಧನ ಸೇವೆ ಎಂಬಂತೆ ನಾನಾ ಸಮಸ್ಯೆಗಳನ್ನು ಆಲಿಸುವ ಮೂಲಕ ವಿಶೇಷ ಗಮನ ಸೆಳೆದರು.
ಶನಿವಾರ ಬೆಳಗ್ಗೆ ಶರಣಬಸವೇಶ್ವರ ಮತ್ತು ಆಂಜನೇಯ ದೇವಸ್ಥಾನದಲ್ಲಿ ವಿಶೇಷ ರುದ್ರಾಭಿಷೇಕ ಮಾಡಿಸಿ ವಿಶೇಷ ಪೂಜೆ ಸಲ್ಲಿದರು. ನಂತರ ಡಾ. ಮನಮೋಹನ್ ಸಿಂಗ್ ಹಾಗೂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದ ಜನಪರ ಯೋಜನೆಗಳು, ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರಕಾರಗಳ ಜನವಿರೋಧಿ ನೀತಿಗಳ ಕರ ಪತ್ರವನ್ನು ಬಿಡುಗಡೆಗೊಳಿಸಿದರು.
ಬೆಳಗ್ಗೆ 9-30ಕ್ಕೆ ಗ್ರಾಮಸ್ಥರೊಂದಿಗೆ ಅಲ್ಪ ಉಪಹಾರ ಸೇವಿಸಿದರು. ನಂತರ ಗ್ರಾಮವನ್ನು ಸುತ್ತಾಡಿ ರಸ್ತೆ, ಚರಂಡಿ, ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಕಾರ್ಯಗಳ ಕೊರತೆ ಪರೀಶೀಲನೆ ನಡೆಸಿದರು. ಮಧ್ಯಾಹ್ನ ಊಟ ಸವಿದು ನಂತರ ಪ್ರತಿ ಮನೆ ಮನೆಗೆ ಭೇಟಿ ನೀಡಿ ಪ್ರತಿಯೊಬ್ಬರಿಂದಲೂ ಸಮಸ್ಯೆಗಳನ್ನು ಕೇಳುವುದರ ಜೊತೆಗೆ ಮಾಜಿ ಸಚಿವ ಬಸವರಾಜ ರಾಯರಡ್ಡಿಯವರ ಅಭಿವೃದ್ಧಿ ಕಾರ್ಯಗಳ ಬಗ್ಗೆ ಜನಜಾಗೃತಿ ಮೂಡಿಸಿದರು. ರವಿವಾರ ಬೆಳ್ಳಿಗ್ಗೆ 5-30ಕ್ಕೆ ಎದ್ದು ಗ್ರಾಮಸ್ಥರೊಂದಿಗೆ ಕುಡಿಯುವ ನೀರಿನ ಕೆರೆ ವೀಕ್ಷಣೆ ಮಾಡಿ ಆಗಬೇಕಾದ ಕೆಲಸ ಕಾರ್ಯಗಳ ಬಗ್ಗೆ ಚರ್ಚಿಸಿದರು.
ಗ್ರಾಮ ವಾಸ್ತವ್ಯದ ಉದ್ದೇಶ: ಗ್ರಾಮದ ಸಮಸ್ಯೆಗಳ ಬಗ್ಗೆ ಹಾಲಿ ಶಾಸಕರು ಗಮನ ಹರಿಸದೇ ಇರುವುದರಿಂದ ಗ್ರಾಮದಲ್ಲಿ ವಾಸ್ತವ್ಯ ಮಾಡಿ ಸಮಸ್ಯೆಗಳನ್ನು ಆಲಿಸಿ ಮಾಹಿತಿ ಸಂಗ್ರಹಣೆ ಮಾಡುವುದು. ಮಾಜಿ ಸಚಿವ ಬಸವರಾಜ ರಾಯರಡ್ಡಿಯವರ ಜನಪರ ಅಭಿವೃದ್ಧಿ ಯೋಜನೆಗಳ ಜಾಗೃತಿ ಮೂಡಿಸುವುದು ಗ್ರಾಮ ವಾಸ್ತವ್ಯದ ಮುಖ್ಯ ಉದ್ದೇಶವಾಗಿದೆ.
ಸಮಸ್ಯೆಗಳ ಮಹಾಪೂರ: ಆನಂದ ಉಳ್ಳಾಗಡ್ಡಿಯವರು ಗ್ರಾಮ ವಾಸ್ತವ್ಯದ ದಿನದಂದು ರಸ್ತೆ, ಚರಂಡಿ, ಸಮಸ್ಯೆಗಳ ಕೇಳಿ ಬಂದವು. ಇನ್ನೂ ಮನೆ ಮನೆಗೆ ಭೇಟಿ ನೀಡಿದಾಗ ಈ ಗ್ರಾಮದಲ್ಲಿ ವಿಧವಾ ವೇತನ, ವೃದ್ದಾಪ್ಯ ವೇತನ, ರೇಷನ್ ಕಾರ್ಡ್, ಸೇರಿದಂತೆ ಅನೇಕ ಸಮಸ್ಯೆಗಳ ಮಹಾಪುರವೇ ಹರಿದು ಬಂದಿವೆ. ಇವುಗಳ ಪಟ್ಟಿ ತಯಾರಿಸಿ ಮುಂದಿನ ದಿನಗಳಲ್ಲಿ ಸಮಸ್ಯೆಗಳ ಪರಿಹಾರ ಕ್ರಮಕೈಗೊಳ್ಳುವುದಾಗಿ ಕಾಂಗ್ರೆಸ್ ಮುಖಂಡ ಆನಂದ ಉಳ್ಳಾಗಡ್ಡಿ ತಿಳಿಸಿದರು.
ಮಾಜಿ ಸಚಿವ ಜನಪರ ಯೋಜನೆಗಳು: ಮಾಜಿ ಸಚಿವ ಬಸವರಾಜ ರಾಯರಡ್ಡಿ ಆಡಳಿತದಲ್ಲಿ ಸಿಂಗಟಾಲೂರು ನೀರಾವರಿ, ಯೋಜನೆಯಿಂದ ತಳಕಲ್ಲ, ಬನ್ನಿಕೊಪ್ಪ ಗ್ರಾಮಗಳ 15000 ಎಕರೆ ಭೂಮಿಗೆ ಹನಿ ನೀರಾವರಿ ಯೋಜನೆ ಮುಂಜೂರು. ಕೆರೆ ತುಂಬಿಸುವ ಯೋಜನೆಯ ಕಲ್ಪನೆ ಕೂಡಾ ರಾಯರೆಡ್ಡಿಯವರಿಗೆ ಸಲ್ಲುತ್ತದೆ.
ತಾಲೂಕಿನ ಎಲ್ಲಾ ಗ್ರಾಮಗಳಲ್ಲಿ ಪ್ರಾಥಮಿಕ ಶಾಲೆಗಳ ಸ್ಥಾಪನೆ. ಹಾಗೂ 60ಕ್ಕೂ ಹೆಚ್ಚು ಸರಕಾರಿ ಪ್ರೌಢ ಶಾಲೆಗಳ ಸ್ಥಾಪನೆ. 15 ಸರಕಾರಿ ಪ.ಪೂ. ಕಾಲೇಜ್ಗಳ ಸ್ಥಾಪನೆ. ಯಲಬುರ್ಗಾ, ಮಂಗಳೂರು, ಹಿರೇವಂಕಲಕುಂಟಾ ತಳಬಾಳ ಸರಕಾರಿ ಪದವಿ ಕಾಲೇಜ್ಗಳ ಸ್ಥಾಪನೆ. ಯಲಬುರ್ಗಾದಲ್ಲಿ ಸರಕಾರಿ ಸ್ನಾತಕೋತ್ತರ ಕೇಂದ್ರ, ತಳಕಲ್ಲ ಗ್ರಾಮದಲ್ಲಿ ವಸತಿಯುಕ್ತ ಎಂಜನೀಯರಿಂಗ್ ಕಾಲೇಜ್ ನಿರ್ಮಾಣ, ಮೊರಾರ್ಜಿ ದೇಸಾಯಿ ಕಿತ್ತೂರ ರಾಣಿ ಚನ್ನಮ್ಮ ವಸತಿ ಶಾಲೆಗಳನ್ನು ನಿರ್ಮಿಸಿ ಶೈಕ್ಷಣಿಕವಾಗಿ ಅಭಿವೃದ್ಧಿಗೊಳಿಸಿದ ಕೀರ್ತಿ ರಾಯರಡ್ಡಿಯವರಿಗೆ ಸಲ್ಲುತ್ತದೆ.
ತಾಲೂಕಿನಲ್ಲಿ ಹೆಚ್ಚುವರಿ ವಿದ್ಯತ್ ಸ್ಟೇಷನ್ ನಿರ್ಮಾಣ. ಭವನಗಳ ನಿರ್ಮಾಣ, 600ಕ್ಕೂ ಅಧಿಕ ದೇವಸ್ಥಾನಗಳ ಜೀಣೋದ್ಧಾರ. ನಾನಾ ಕಡೆಗಳಲ್ಲಿ ಯಾತ್ರಿ ನಿವಾಸ ನಿರ್ಮಾಣ ಸೇರಿದಂತೆ ಇನ್ನಿತರ ಅಭಿವೃದ್ದಿ ಕೆಲಸಗಳ ಬಗ್ಗೆ ಗ್ರಾಮಸ್ಥರಿಗೆ ಮನವರಿಕೆ ಮಾಡಿಕೊಡುವ ಕೆಲಸವನ್ನು ಆನಂದ ಉಳ್ಳಾಗಡ್ಡಿ ಮಾಡಿರುವದಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದರು. ಗ್ರಾಮ ವಾಸ್ತವ್ಯಕ್ಕೆ ಗ್ರಾಮಸ್ಥರು,ಪಕ್ಷದ ಮುಖಂಡರು ಅಭೂತ ಪೂರ್ವ ಸಹಕಾರ ನೀಡಿದರು.
ಆನಂದ ಉಳ್ಳಾಗಡ್ಡಿಯವರ ಗ್ರಾಮ ವಾಸ್ತವ್ಯ ತಾಲೂಕಿನ ರಾಜಕಾರಣದಲ್ಲಿ ನಾನಾ ಚರ್ಚೆಗಳನ್ನು ಹುಟ್ಟು ಹಾಕುವದರ ಕೊತೆಗೆ ಮಿಂಚಿನ ಸಂಚಲನಕ್ಕೂ ಕಾರಣವಾಗಿದೆ ಎನ್ನುಬಹುದಾಗಿದೆ. ಮುಂಬರುವ ಜಿಪಂ ಚುನಾವಣೆಗೆ ಗ್ರಾಮ ವಾಸ್ತವ್ಯದ ಮೂಲಕ ಆನಂದ ಉಳ್ಳಾಗಡ್ಡಿ ಅಧಿಕೃತವಾಗಿ ಅಖಾಡಕ್ಕೆ ಇಳಿದಂತಾಗಿದೆ.