ಮಹಲಿಂಗಪುರ

ಬಡ ತಾಯಿಯ ಗರ್ಭದಲ್ಲಿ ಬೆಳೆಯುತ್ತಿರುವ ಕಂದಮ್ಮಗಳಿಗೆ ಅನ್ನ ಕೊಟ್ಟದ್ದು ಕಾಂಗ್ರೆಸ್ : ಆರ್‌.ಬಿ.ತಿಮ್ಮಾಪುರ.

ಬಡ ತಾಯಿಯ ಗರ್ಭದಲ್ಲಿ ಬೆಳೆಯುತ್ತಿರುವ ಕಂದಮ್ಮಗಳಿಗೆ ಅನ್ನ ಕೊಟ್ಟದ್ದು ಕಾಂಗ್ರೆಸ್ : ಆರ್‌.ಬಿ.ತಿಮ್ಮಾಪುರ.

ಮಹಾಲಿಂಗಪುರ 05: ಹರಿದ ಸೀರೆಯನುಟ್ಟು ಗುಡಿಸಲಲ್ಲಿ ವಾಸಿಸುವ ತಾಯಂದಿರಿಗೆ ಹಾಗೂ ಬಡ ತಾಯಿಯ ಗರ್ಭದಲ್ಲಿ ಬೆಳೆಯುತ್ತಿರುವ ಕಂದಮ್ಮಗಳಿಗೆ ಅನ್ನ ಕೊಟ್ಟವರು ನಮ್ಮ ನಾಯಕರು. ಅದಾನಿ,ಅಂಬಾನಿಯಂಥವರ ಜೇಬು ತುಂಬಿಸುತ್ತಿರುವ ಬಿಜೆಪಿಗರು ಯೋಗ್ಯತೆ ಇಲ್ಲದವರು ಎಂದು ಅಬಕಾರಿ ಸಚಿವ ಆರ್‌.ಬಿ.ತಿಮ್ಮಾಪುರ ಹೇಳಿದರು. 

ಸಮೀಪದ ರನ್ನಬೆಳಗಲಿಯಲ್ಲಿ ಹಮ್ಮಿಕೊಂಡಿದ್ದ ಪೌರ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಪ್ರಮಾಣ ವಚನ ಸ್ವೀಕರಿಸಿ ಮನೆ ತಲುಪುವುದರೊಳಗಾಗಿ ಕೊಟ್ಟ ಐದೂ ಭರವಸೆಗಳನ್ನು ಈಡೇರಿಸಿ ನುಡಿದಂತೆ ನಡೆದ ಏಕೈಕ ಪಕ್ಷ ನಮ್ಮದು, 2013 ರಲ್ಲಿ ಸಿದ್ಧರಾಮಯ್ಯನವರು ನೀಡಿದ ಭರವಸೆಗಳಲ್ಲಿ ಶೇ.99 ರಷ್ಟು ಈಡೇರಿಸಿದರೆ, ಬಿಜೆಪಿ ಕೊಟ್ಟ 600 ಭರವಸೆಗಳಲ್ಲಿ ಶೇ.5 ರಷ್ಟನ್ನೂ ಈಡೇರಿಸಿಲ್ಲ. ನುಡಿದಂತೆ ನಡೆಯುವ ಹಾಗೂ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಕಾಂಗ್ರೆಸ್ ಬಗ್ಗೆ ಮಾತನಾಡುವ ಯೋಗ್ಯತೆ ಬಿಜೆಪಿಗರಿಗಿಲ್ಲ ಎಂದ ಅವರು ಅತೀ ಹೆಚ್ಚು ಲೀಡ್ ಕೊಟ್ಟ ಬೆಳಗಲಿ ಜನತೆಗೆ ಕೃತಜ್ಞತೆ ಸಲ್ಲಿಸಿ ಹೆಚ್ಚು ಲೀಡ್ ಕೊಟ್ಟ 3 ನೇ ವಾರ್ಡಿಗೆ 1 ಲಕ್ಷ ಬಹುಮಾನ ನೀಡಿದರು, 

ರನ್ನೋತ್ಸವದ ಭರವಸೆ: ಕಾಂಗ್ರೆಸ್ ಅಧಿಕಾರದಲ್ಲಿರುವವರೆಗೂ ಬೆಳಗಲಿಯಲ್ಲಿ ರನ್ನೋತ್ಸವ ನಡೆಸುವ ಭರವಸೆ ನೀಡಿದರು.ಅತ್ಯಲ್ಪ ಮತಗಳ ಅಂತರದಿಂದ ಪರಾಜಿತರಾದ ಸಿದ್ದು ಕೊಣ್ಣೂರವರಿಗೆ ಸದಾ ಬೆಂಬಲವಿದೆ ಎಂದರು. 

ಮುಖಂಡ ಸಿದ್ದು ಕೊಣ್ಣೂರ ಮಾತನಾಡಿ,ಬಡಪರ ಕಾರ್ಯಗಳು ಕಾಂಗ್ರೆಸ್ ನಿಂದ ಮಾತ್ರ ಸಾಧ್ಯ ಎಂದ ಅವರು,ರನ್ನಬೆಳಗಲಿಯಲ್ಲಿ ರನ್ನೋತ್ಸವ ನಡೆಸಲು ಸಚಿವರಲ್ಲಿ ಮನವಿ ಮಾಡಿದರು. 

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಧರೆಪ್ಪ ಸಾಂಗ್ಲಿಕರ ಮಾತನಾಡಿ, ಪ್ರಭಾವಿ ಮಂತ್ರಿಯನ್ನು ಮಣ್ಣುಮುಕ್ಕಿಸಿದ ಆರ್‌.ಬಿ. ತಿಮ್ಮಾಪುರವರ ಗೆಲುವಿಗೆ ಬೆಳಗಲಿಯ ಬಹುಮತ ಕಾರಣ.ಅವರ ಗೆಲುವು ಬೆಳಗಲಿಯ ಗೆಲುವು ಮತ್ತು ರಾಜ್ಯದ ಬಹುಮತ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನಿಷ್ಠೆಗೆ ಸಿಕ್ಕ ಗೆಲುವು ಎಂದರು. 

ಕುಂಭಮೇಳದೊಂದಿಗೆ ಸಚಿವರನ್ನು ಪುರದೊಳಗೆ ಸ್ವಾಗತಿಸಿ, ಜೆಸಿಬಿಯಿಂದ ಪುಷ್ಪವೃಷ್ಠಿ ಮಾಡಲಾಯಿತು. 

ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಸಾಧಕ ವಿದ್ಯಾರ್ಥಿಗಳಿಗೆ ಬಹುಮಾನದ ಚೆಕ್ ವಿತರಿಸಲಾಯಿತು.   

ಸ್ಥಳೀಯ ಸಿದ್ಧರಾಮ ಶ್ರೀ, ಹಾಗೂ ಸದಾಶಿವ ಗುರೂಜಿ ಸಾನಿಧ್ಯ ವಹಿಸಿದ್ದರು, ಅಶೋಕ ಕಿವುಡಿ,ಗಿರೆಪ್ಪ ಕನಕರಡ್ಡಿ, ಶಿವನಗೌಡ ಪಾಟೀಲ, ಸಿದುಗೌಡ ಪಾಟೀಲ,ಉದಯಸಿಂಹ ಪಡತಾರೆ, ಎಚ್‌.ಎ.ಕಡಪಟ್ಟಿ, ಸಂಗಪ್ಪ ಅಮಾತಿ, ಸಿದ್ದು ಸಾಂಗ್ಲಿಕರ, ಪರಮಾನಂದ ಸಂಕ್ರಟ್ಟಿ, ಮಲ್ಲಪ್ಪ ಸಿಂಗಾಡಿ, ಭೀಮಶೀ ಮಗದುಮ್, ದುಂಡಪ್ಪ ಭರಮನಿ, ಈರ​‍್ಪ ಕಿತ್ತೂರ, ಪರಮಾನಂದ ಸಂಕ್ರಟ್ಟಿ, ಪಪಂ ಮುಖ್ಯಾಧಿಕಾರಿ ಐ.ಜೆ.ಭಂಡಾರಕರ ಇದ್ದರು. 

  

ಸುದ್ದಿ ಓದಿ