ಇಂಡಿ

ಮಠಾಧೀಶರ ಒಕ್ಕೂಟ ಸಭೆ

ಮಠಾಧೀಶರ ಒಕ್ಕೂಟ ಸಭೆ

ಇಂಡಿ 17: ತಾಲೂಕಿನ ಶಿರಶ್ಯಾಡ ಸಂಸ್ಥಾನ ಹಿರೇಮಠದಲ್ಲಿ ವಿಜಯಪುರ ಜಿಲ್ಲೆಯ ಮಠಾಧೀಶರ ಒಕ್ಕೂಟ ಸಭೆಯನ್ನು ಶುಕ್ರವಾರರಂದು ಹಮ್ಮಿಕೊಳ್ಳಲಾಯಿತು.ಸಭೆಯಲ್ಲಿ ಸಭೆಯಲ್ಲಿ ಜಿಲ್ಲೆಯ ಸಮಗ್ರ ಅಭಿವೃದ್ಧಿ, ಸಾಮಾಜಿ ಧಾರ್ಮಿಕ ಅಭಿವೃದ್ಧಿ ಮತ್ತು ಕೊರೊನಾ ನಿರ್ಮೂಲನೆಗೆ ಹಳ್ಳಿ-ಹಳ್ಳಿಗಳಿಗೂ ಅಭಿಯಾನ ಮಾಡಲು ಚರ್ಚಿಸಲಾಯಿತು.ಇತ್ತೀಚೆಗೆ ವಿಜಯಪುರ ಜಿಲ್ಲೆಯ ಮಠಾಧೀಶರ ಒಕ್ಕೂಟದವರು ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಜಿಲ್ಲೆಯ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಒತ್ತು ನೀಡಲು ಮನವಿ ಮಾಡಿಕೊಂಡ ಪ್ರಯುಕ್ತ ಮಠಾಧೀಶರ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿ ಯಡಿಯೂರಪ್ಪನವರು ಜಿಲ್ಲೆಯ ನೀರಾವರಿ ಯೋಜನೆಗೆ 5500 ಕೋಟಿ ಹಣ ಮೀಸಲಿಟ್ಟಿದ್ದಕ್ಕಾಗಿ ಅಭಿನಂದಿಸಿದರು.ಈ ಸಂದರ್ಭದಲ್ಲಿ ಬಂಥನಾಳದ ವೃಷಭಲಿಂಗ ಮಹಾಸ್ವಾಮಿಗಳು, ಸಿಂದಗಿಯ ಪ್ರಭು ಸಾರಂಗದೇವ ಶಿವಾಚಾರ್ಯರು, ಹತ್ತಳ್ಳಿಯ ಗುರುಪಾದೇಶ್ವರ ಶಿವಾಚಾರ್ಯರು, ಜಾಲಹಳ್ಳಿಯ ಜಯಶಾಂತಲಿಂಗ ಶಿವಾಚಾರ್ಯರು, ಬಬಲೇಶ್ವರದ ಮಹಾದೇವ ಶಿವಾಚಾರ್ಯರು, ಕನ್ನೊಳ್ಳಿಯ ಸಿದ್ದಲಿಂಗ ಶಿವಾಚಾರ್ಯರು, ಮನಗೂಳಿಯ ಸಂಗನಬಸವ ಶಿವಾಚಾರ್ಯರು, ತಿಕೋಟಾ ಶಿವಬಸವ ಶಿವಾಚಾರ್ಯರು, ಆಲಮೇಲದ ಸಂಗನಬಸವ ಶಿವಾಚಾರ್ಯರು, ಚಿಮ್ಮಲಗಿಯ ಸಿದ್ದ ರೇಣುಕ ದೇವರು, ಬಳವಾಟ ಸೋಮಶೇಖರ ದೇವರು, ದೇವರಹಿಪ್ಪರಗಿಯ ಶಿಯೋಗಿ ದೇವರು, ಕುಂಟೋಜಿಯ ರುದ್ರಮುನಿ ದೇವರು, ಕರಬಂಟನಾಳದ ಶಿವಕುಮಾರ ಸ್ವಾಮಿಗಳು, ಡವಳಗಿ ಘನಮಠದ ಶಿವಯೋಗಿಗಳು, ನಾಗಠಾಣದ ಮಲ್ಲಿಕಾರ್ಜುನ ಶಿವಾಚಾರ್ಯರು, ಶಿರಶ್ಯಾಡ ಹಿರೇಮಠದ ಅಭಿನವ ಮುರುಘೇಂದ್ರ ಶಿವಾಚಾರ್ಯರು, ಶಿವಾನಂದ ಶಿವಾಚಾರ್ಯರು, ಮಡಿವಾಳೇಶ್ವರ ಸ್ವಾಮೀಜಿ ಉಪಸ್ಥಿತರಿದ್ದರು.

ಸುದ್ದಿ ಓದಿ