ನೂತನ ಶಾಸಕ ಬಿಎಂ ನಾಗರಾಜ್ ಗೆ ಅಭಿನಂದನೆ ಸನ್ಮಾನ ಕಾರ್ಯಕ್ರಮ
ಸಿರುಗುಪ್ಪ 09: ನಗರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಯ ಕಚೇರಿಯ ಸಭಾಭವನದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ದವರಿಂದ ಸಿರುಗುಪ್ಪ ವಿಧಾನಸಭಾ ಕ್ಷೇತ್ರದ ನೂತನ ಜನಪ್ರಿಯ ಶಾಸಕರಾದ ಬಿ ಎಂ ನಾಗರಾಜ್ ಅವರಿಗೆ ಅವರ ಯಶಸ್ಸಿಗೆ ದೊರೆತಿರುವ ಗೌರವಕ್ಕೆ ಅಭಿನಂದಿಸಿ ಸನ್ಮಾನಿಸಿದರು.
ಸಂಘದವರಿಂದ ಶಾಸಕರಿಗೆ ರಾಜ್ಯ ಸರ್ಕಾರಿ ನೌಕರರ ಸಮಸ್ಯೆ ಕುಂದು ಕೊರತೆ ಬೇಡಿಕೆಗಳ ಭಿನ್ನವತ್ತಳೆ ಮನವಿ ಪತ್ರ ಸಲ್ಲಿಸಿದರು. ಶಾಸಕ ಬಿ ಎಂ ನಾಗರಾಜ್ ಅವರು ಸನ್ಮಾನ ಮತ್ತು ಭಿನ್ನ ವತ್ತಳೆ ಪತ್ರಿಕೆ ಸ್ವೀಕರಿಸಿ ಮಾತನಾಡುತ್ತಾ ಸರ್ಕಾರದ ಕೆಲಸಗಳು ಯೋಜನೆಯ ಮತ್ತು ನಿಮ್ಮ ಬೇಡಿಕೆಗಳ ಬಗ್ಗೆ ಪರಿಗಣಿಸಿ ಈಡೇರಿಸುವುದಾಗಿ ಭರವಸೆ ನೀಡಿದರು.
ತಹಸಿಲ್ದಾರ್ ಹೆಚ್ ವಿಶ್ವನಾಥ , ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಶಿವಾಜಿ ರಾವ್, ರಾಜ್ಯ ಸಂಘದ ಕಾರ್ಯದರ್ಶಿ ಅಲ್ಲಾಭಕ್ಷಿ , ಜಿಲ್ಲಾ ಕಾರ್ಯದರ್ಶಿ ಬಿ ಕೆ ರಾಮಕೃಷ್ಣ , ಗೌರವ ಅಧ್ಯಕ್ಷ ಹುಚ್ಚಿರಪ್ಪ, ತಾಲೂಕ ಅಧ್ಯಕ್ಷ ಲಿಂಗರಾಜ ರೆಡ್ಡಿ, ಕಾರ್ಯದರ್ಶಿ ಹನುಮಂತಪ್ಪ, ಸದಸ್ಯ ಜಗದೀಶ್ ಕೋರಿ, ನಗರಸಭಾ ಮಾಜಿ ಅಧ್ಯಕ್ಷ ಬಿ. ಮುತ್ಯಾಲ ಶೆಟ್ಟಿ , ನಗರಸಭಾ ಸದಸ್ಯ ಹೆಚ್ ಗಣೇಶ, ಜಿಲ್ಲಾ ಸಾಕ್ಷರತಾ ಕಾರ್ಯಕಾರಿ ಸದಸ್ಯ ಅಬ್ದುಲ್ ನಬಿ, ಕೋಟಿ ರೆಡ್ಡಿ, ನಗರ ಸಭಾ ಸದಸ್ಯ ಬಿ ವೆಂಕಟೇಶ್, ಪವನ್ ದೇಸಾಯಿ, ತಾಲೂಕ ಆರೋಗ್ಯ ವೈದ್ಯಾಧಿಕಾರಿ ಡಾ ಈರಣ್ಣ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಖಾದರ್ ಬಾಷಾ,ಯಂಕಮ್ಮ ಜೋಶಿ, ತಾಲೂಕ ಮಟ್ಟದ ಎಲ್ಲಾ ವಿವಿಧ ಅಧಿಕಾರಿಗಳು ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು ಎಲ್ಲಾ ಸದಸ್ಯರು ಭಾಗವಹಿಸಿದ್ದರು.