ಪ್ಲಾಟ್ ಖರೀದಿದಾರರ ಹೆಸರಿಲ್ಲಿ ಗೊಂದಲ: ಮುಖ್ಯಾಧಿಕಾರಿಗೆ ತರಾಟೆ
ಹುನಗುಂದ16: ಪಟ್ಟಣದ ಸುತ್ತಮುತ್ತಲು ನಿರ್ಮಾಣವಾಗಿರುವ ಹೊಸ ಲೇವೆಟ್‌ಗಳಲ್ಲ್ಲಿನ ಪ್ಲಾಟ್ ಖರೀದಿದಾರರ ಹೆಸರುಗಳು ಗೊಂದಲ ರೀತಿಯಲ್ಲಿ ದಾಖಲಾಗಿದ್ದು ಈ ಕುರಿತು ಮುಖ್ಯಾಧಿಕಾರಿ ಮತ್ತು ಸಿಬ್ಬಂದಿಗಳನ್ನು ಸಭೆಯಲ್ಲಿ ತರಾಟೆ ತಗೆದುಕೊಂಡ ಘಟನೆ ನಡೆಯಿತು. ಪಟ್ಟಣದ ಪುರಸಭೆ ಕಾರ್ಯಾಲಯದಲ್ಲಿ ಪುರಸಭೆ ಅಧ್ಯಕ್ಷ ಶರಣು ಬೆಲ್ಲದ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯ ಮಹೇಶ ಬೆಳ್ಳಿಹಾಳ ಮಾತನಾಡಿ ಒಂದು ಸೈಟ್‌ನ ಹೆಸರಿನಲ್ಲಿ ಇಬ್ಬರ ಹೆಸರಿಲೆ ಉತಾರೆ ನೀಡಿ ಸಿಬ್ಬಂದಿಗಳು ಗೊಂದಲ ಸೃಷ್ಠಿ ಮಾಡುತ್ತಿದ್ದಾರೆ. ಸಂಬಂಧಿಸಿದವರಿಂದ ಆಸ್ತಿಗೆ ಸಂಬಂಧಿಸಿದ ಮೂಲ ದಾಖಲೆಗಳನ್ನು ಪಡೆದು, ತಪ್ಪಿತಸ್ತರಿಗೆ ನೋಟಿಸ್ ನೀಡಿ ಸಮಸ್ಯೆ ಬಗೆಹರಿಸಬೇಕೆಂದು ಸಭೆಗೆ ಸೂಚಿಸಿದರು. ಹಾಗೂ ಇನ್ನು ಮೇಲೆ ನೂತನ ಎನ್‌ಎ ಪ್ರಸ್ತಾವನೆಗೆ ಬಂದಲ್ಲಿ ಅಂತಹವುಗಳನ್ನು ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಠರಾವು ಪಾಸ್ ಮಾಡಬೇಕೆಂದು ತಿಳಿಸಿದಾಗ ಮುಖ್ಯಾಧಿಕಾರಿ ಸಮ್ಮತಿಸಿದರು. ಪ್ರವೀಣ ಹಳಪೇಟಿ ಮಾತನಾಡಿ ಪುರಸಭೆಯ ಆಸ್ತಿಯಲ್ಲಿ ನಿರ್ಮಿಸಿದ ಕಾಂಪ್ಲೆಕ್ಷಗಳು ಟೆಂಡರ್ ಮಾಡಿರುವದಿಲ್ಲ, ಜೊತೆಗೆ ಬೇಕಾಬಿಟ್ಟಿಯಾಗಿ ರೆವಿನ್ಯೂ ಇಲ್ಲದೆ ಆಸ್ತಿ ಉತಾರೆಗಳು ಹೋಗುತ್ತಿವೆ. ಇದರಿಂದ ಪುರಸಭೆ ಆದಾಯಕ್ಕೆ ಧಕ್ಕೆಯಾಗುತ್ತಿದೆ ತಕ್ಷಣದಲ್ಲಿ ಕಾಂಪ್ಲೆಕ್ಷಗಳನ್ನು ಟೆಂಡರ್ ಮಾಡಬೇಕು ಮತ್ತು ಕಡ್ಡಾಯವಾಗಿ ಇನ್‌ವರ್ಲ್ಡನಲ್ಲಿ ದಾಖಲಿಸಿ ಸಾರ್ವಜನಿಕರಿಗೆ ಉತಾರೆ ನೀಡಬೇಕೆಂದು ಮಜಕ್ಯಾಧಿಕಾರಿಗೆ ತಿಳಿಸಿದರು. ಮತ್ತು ಸಿಬ್ಬಂದಿಗಳು ಕಚೇರಿ ಸಮಯದಲ್ಲಿ ಸಾರ್ವಜನಿಕರಿಂದ ದೂರುಗಳು ಬರದಂತೆ ಸೇವೆ ಒದಗಿಸಬೇಕೆಂದು ಒತ್ತಾಯಿಸಿದರು. ಪುರಸಭೆಯಿಂದ ನಿರ್ಮಾಣವಾಗಿರುವ ಕಾಂಪ್ಲೆಕ್ಸ್‌ಗಳು ಖಾಲಿ ಬಿದ್ದಿದ್ದು.ಅವುಗಳನ್ನು ತಕ್ಷಣವೇ ಟೆಂಡರ್ ಪ್ರಕ್ರಿಯೆ ನಡೆಸಿ ಅವುಗಳನ್ನು ಹಂಚಿಕೆ ಮಾಡುವ ಮೂಲಕ ಪುರಸಭೆಯ ಆದಾಯವನ್ನು ಹೆಚ್ಚಿಸುವಂತೆ ಮುಖ್ಯಾಧಿಕಾರಿಗಳಿಗೆ ಸೂಚಿಸಿದರು. ನಗರದ ತುಂಬಾ ರಸ್ತೆಗಳು ಸಂಪೂರ್ಣ ಹದೆಗೆಟ್ಟಿದ್ದು. ಅವುಗಳ ದುರಸ್ಥಿ ಕಾರ್ಯ ಕೂಡಾ ಆದಷ್ಟು ಬೇಗನೇ ನಡೆಯಬೇಕು ಎಂದರು.
ಪುರಸಭೆ ಉಪಾಧ್ಯಕ್ಷೆ ಗುರುಬಾಯಿ ಹೂಗಾರ, ಸ್ಥಾಯಿ ಸಮಿತಿ ಅಧ್ಯಕ್ಷ ಮುನ್ನಾ ಖಾಜಿ, ಸದಸ್ಯರಾದ ಬಸವರಾಜ ಗೊಣ್ಣಾಗರ, ಚಂದ್ರು ತಳವಾರ, ಯಲ್ಲಪ್ಪ ನಡುವಿನಮನಿ, ಪ್ರವೀಣ ಹಳಪೇಟಿ, ಶಾಂತಪ್ಪ ಹೊಸಮನಿ, ಮಹೇಶ ಬೆಳ್ಳಿಹಾಳ, ಮೈನು ಧನ್ನೂರ, ಶ್ರೀದೇವಿ ಚೂರಿ, ಶಾಂತಮ್ಮ ಮೇಲಿನಮನಿ, ಶರಣಮ್ಮ ಮುಕ್ಕಣ್ಣವರ, ರಾಜವ್ವ ಬದಾಮಿ, ಸೈರಾನುಬಿ ನಾಯಕ, ಕಮಲವ್ವ ಸಂಧಿಮನಿ, ಚಂದಪ್ಪ ಕಡಿವಾಲ, ನಾಗರತ್ನ ತಾಳಿಕೋಟಿ, ಗಿರಿಜಮ್ಮ ಮಠ, ಭಾಗ್ಯಶ್ರೀ ರೇವಡಿ, ಪುರಸಭೆ ಮುಖ್ಯಾಧಿಕಾರಿ ಅಶೋಕ ಪಾಟೀಲ ಸೇರಿದಂತೆ ಅನೇಕರು ಇದ್ದರು.